Advertisement

ದಾಖಲೆ ಮತಗಳಿಂದ ನಿರಾಣಿ ಗೆಲ್ಲಿಸಿ: ಈಶ್ವರಪ್ಪ

10:30 AM Apr 27, 2023 | Team Udayavani |

ಬೀಳಗಿ: ಕಳೆದ ಚುನಾವಣೆಯಲ್ಲಿ ಬೀಳಗಿ ಕ್ಷೇತ್ರದಲ್ಲಿ ನಿರಾಣಿಯವರು ಸುಮಾರು ಮೂರೂವರೆ ಸಾವಿರ ಮತಗಳಿಂದ ಗೆದ್ದಿದ್ದಾರೆ. ಆದರೆ ಈ ಬಾರಿ ಸುಮಾರು 35 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸುನಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೀಳಗಿ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಗೋವನ್ನು ನಾವೆಲ್ಲ ತಾಯಿ, ಗೋಮಾತೆ ಎಂದು ಪೂಜೆ ಮಾಡ್ತೀವಿ. ಆದರೆ ಕೆಲವರು ಅದೇ ಗೋವನ್ನು ಕದ್ದು ಕತ್ತರಿಸುತ್ತಾರೆ. ಅದನ್ನು ಖಂಡಿಸಿ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು, ಗೋವುಗಳನ್ನು ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆ ಕೊಡುವಂತೆ ಸೂಚಿಸಿದೆ ಎಂದರು. ಆದರೆ ಕಾಗ್ರೆಸ್‌ನವರು ಗೋವನ್ನು ಕಡಿಯಲು ಪರವಾನಗಿ ಕೊಡ್ತೀವಿ ಎನ್ನುತ್ತಾರೆ. ಇಂತಹ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕಾ? ಎಂದು ಪ್ರಶ್ನಿಸಿದ ಅವರು, ಮತದಾರ ಬಂಧುಗಳು ಮುರುಗೇಶ ನಿರಾಣಿ ಅವರಿಗೆ ಮತ ನೀಡಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಯಾವುದೇ ಮಠಗಳು-ದೇವಸ್ಥಾನಗಳಿಗೆ, ಮಠಗಳಲ್ಲಿ ಇರುವ ಶಾಲೆಗಳಿಗೆ ಕಾಗ್ರೆಸ್‌ ಸರ್ಕಾರ ಯಾವುದೇ ದುಡ್ಡು ಕೊಟ್ಟಿಲ್ಲ. ಆದರೆ ಹಿಂದುಳಿದ ಜನಾಂಗದ, ದಲಿತರ ಎಲ್ಲ ಸಮುದಾಯಗಳ ದೇವಸ್ಥಾನ, ಮಠಗಳು, ಶಾಲೆಗಳಿಗೆ ದುಡ್ಡು ಕೊಟ್ಟು ಬೆಳೆಯಲು ಪ್ರೋತ್ಸಾಹ ನೀಡುತ್ತಿರುವುದು ಬಿಜೆಪಿ ಸರ್ಕಾರವೇ ಎಂದು ಹೇಳಿದರು.

ಕಾಂಗ್ರೆಸ್‌ನವರು ಏಕೆ ಅನುದಾನ, ಪ್ರೋತ್ಸಾಹ ಕೊಡಲಿಲ್ಲ ಎಂದು ಅವರು ಮತ ಕೇಳಲು ಬಂದಾಗ ಕೇಳಿ. ರಸ್ತೆ, ಚರಂಡಿ, ನೀರು, ಮೂಲಭೂತ ಸೌಕರ್ಯಗಳನ್ನು ಎಲ್ಲ ಸರ್ಕಾರಗಳು ಕೊಡುತ್ತವೆ. ಆದರೆ ನಮ್ಮತನ ಉಳಿಸಿಕೊಳ್ಳಲು ಯಾವಾಗಲೂ ಬಿಜೆಪಿ ಬೆಂಬಲಿಸಿ. ಮೋದಿ ಬಂದ ಮೇಲೆ ದೇಶ ಹೇಗೆ ವಿಶ್ವ ಗುರುವಾಗಿದೆಯೋ ಹಾಗೆ ರಾಜ್ಯದ ಉನ್ನತ ಭವಿಷಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಸಚಿವ ಮುರುಗೇಶ ನಿರಾಣಿ ಮತಕ್ಷೇತ್ರಕ್ಕೆ 1.27 ಲಕ್ಷ ಎಕರೆ ಒಣ ಭೂಮಿಗಳಿಗೆ ನೀರಾವರಿ ಮಾಡಿದ್ದಾರೆ. ಕೆರೆ ತುಂಬಿಸುವ ಯೋಜನೆ, ರೈತರಿಗೆ ಸಮರ್ಪಕ ವಿದ್ಯುತ್‌ ಕಲ್ಪಿಸಲು 320 ಕೋಟಿ ರೂ. 10 ಕೆಇಬಿ ಸೇrಶನ್‌ ಮಾಡಿದ್ದಾರೆ. ಅಲ್ಲದೇ ಎರಡು ಬ್ರಿಡ್ಜ್ ಕಂ ಬ್ಯಾರೇಜ್‌, ಒಂದು ಕಲಾದಗಿ ಕಾತರಕಿ 30 ಕೋಟಿ ರೂ.ಗಳಲ್ಲಿ ಮತ್ತು 100 ಕೋಟಿ ರೂ. ವೆಚ್ಚದಲ್ಲಿ ಹೆರಕಲ್ಲ ಗ್ರಾಮಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್‌ ಮಾಡಿ ಈ ವರ್ಷ ಮತ್ತೆ 15 ಕೋಟಿ ರೂ. ವೆಚ್ಚದಲ್ಲಿ 5 ಮೀಟರ್‌ ಗೇಟ್‌ ಎತ್ತರಿಸುವ ಕೆಲಸ ಮಾಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದಾರೆ. ತಾಲೂಕನ್ನು ಪ್ರವಾಸಿ ತಾಣವನ್ನಾಗಿ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿಪರ ಕಾರ್ಯ ಮಾಡಿದ್ದಾರೆ. ಮುರುಗೇಶ ನಿರಾಣಿ ಗೆಲುವು ಸೇರಿದಂತೆ ರಾಜ್ಯದಲ್ಲಿ ಬಿಜೆಪಿಗೆ 140 ಸೀಟುಗಳು ಬರುತ್ತವೆ ಎಂದರು.

Advertisement

ಬಿಜೆಪ ಮುಖಂಡ ಬಸವರಾಜ ಕೊಣ್ಣೂರ ಮಾತನಾಡಿದರು. ಈ ವೇಳೆ ವಿಪ ಸದಸ್ಯರಾದ ಪಿ.ಎಚ್‌. ಪೂಜಾರಿ, ಎಚ್‌.ಆರ್‌. ನಿರಾಣಿ, ಮಂಡಲ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಜಂಗನಿ, ಮಲ್ಲಪ್ಪ ಶಂಭೋಜಿ, ಮಲ್ಲಿಕಾರ್ಜುನ ಅಂಗಡಿ, ಸುವರ್ಣಾ ನಾಗರಾಳ, ಕೆಂಪಯ್ಯ ವಿರಕ್ತಿಮಠ, ದ್ರಾಕ್ಷಾಯಣಿ ಜಂಬಗಿ ಸೇರಿದಂತೆ ಇತರರಿದ್ದರು. ಶೇಖರ ಗೋಳಸಂಗಿ ಕಾರ್ಯಕ್ರಮ ನಿರೂಪಿಸಿದರು.

ಅಭಿವೃದ್ಧಿ ನೇತಾರ ನಿರಾಣಿ ಗೆಲ್ಲಿಸಿ: 

ಕೆರೂರ: ಬೀಳಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸುಗಾರ ಡಾ| ಮುರುಗೇಶ ನಿರಾಣಿ ಸರ್ಕಾರದ ಸೌಲಭ್ಯಗಳಲ್ಲದೇ ತನ್ನ ಕುಟುಂಬ ಬಳಸಿಕೊಂಡು ಮಾಡಿದ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಧುರೀಣ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಶ್ರೀ ಕೇದಾರನಾಥ ಶುಗರ್‌ ಫ್ಯಾಕ್ಟರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಬುಧವಾರ ಮಾತನಾಡಿದರು ಕ್ಷೇತ್ರದಲ್ಲಿ 1.27 ಲಕ್ಷ ಎಕರೆ ನೀರಾವರಿ ಮಾಡಿದ್ದು, 75 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಮನೆ-ಮನೆಗೆ ನೀರು, ಸಮರ್ಪಕ ವಿದ್ಯುತ್‌ ಪೂರೈಕೆ, ಸಮೃದ್ಧ ಆರೋಗ್ಯ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಹೊಲಿಗೆ ತರಬೇತಿ, 400 ಗುಡಿಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು, ಮತದಾರರು ಚುನಾವಣೆಯಲ್ಲಿ ಇವರಿಗೆ ಆಶೀರ್ವಾದ ಮಾಡಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಡಾ| ಮುರುಗೇಶ ನಿರಾಣಿ ಮಾತನಾಡಿ, ತಮ್ಮ ಅಧಿ ಕಾರವಧಿಯಲ್ಲಿ ಸರ್ಕಾರದಿಂದ ಕ್ಷೇತ್ರಕ್ಕೆ ತಂದ ಅನುದಾನ, ಮಾಡಿದ ಅಭಿವೃದ್ಧಿ ಕಾರ್ಯ-ಯೋಜನೆಗಳನ್ನು ವಿವರಿಸಿ, ತಮ್ಮ ಎಂಆರ್‌ಎನ್‌ ಫೌಂಡೇಶನ್‌ ದಿಂದ ಮಾಡಿದ ಜನಪರ ಅಭಿವೃದ್ಧಿ ಕುರಿತು ತಿಳಿಸಿದರು. ಚಿನ್ಮಯಾನಂದ ಶ್ರೀಗಳು, ಕೊಣ್ಣೂರ ಕರಿಸಿದ್ದೇಶ್ವರ ಅರ್ಚಕರು ಆಶೀರ್ವಚನ ನೀಡಿದರು.

ಸಭೆಯಲ್ಲಿ ಬಿಹಾರ, ಪಾಟ್ನಾ ಕ್ಷೇತ್ರದ ಶಾಸಕ ರಾಣಾರಣಧೀರ ಸಿಂಗ್‌, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ, ಹಣಮಂತ ನಿರಾಣಿ, ಈರಣ್ಣ ಗಿಡ್ಡಪ್ಪಗೋಳ, ಬಸವರಾಜ ಸಿದಿಂಗಪ್ಪನವರ, ಈರಣ್ಣ ಹಳೇಗೌಡ್ರ, ಸಾವಿತ್ರಿ ಜಿಂಗಾಣಿ ಇತರರಿದ್ದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟುತ್ತಿದ್ದೀವಿ, ಇದು ಇಷ್ಟಕ್ಕೆ ಮುಗಿದಿಲ್ಲ. ಮುಂದಿನ ಗುರಿ ಕಾಶಿ ವಿಶ್ವನಾಥ ದೇವಾಲಯವನ್ನು ಮಸೀದಿಯಿಂದ ಮುಕ್ತಗೊಳಿಸಿ ಪುನಃ ನಿರ್ಮಾಣ ಮಾಡಿ ಈಶ್ವರ ಲಿಂಗ ಸ್ಥಾಪಿಸುತ್ತೇವೆ. ಇದು ಬಿಜೆಪಿ ಅಜೆಂಡಾ. -ಕೆ.ಎಸ್‌. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next