Advertisement

ಸಿದ್ದರಾಮಯ್ಯ ಅವರಿಗೆ ನಿತ್ಯ ಕೆಟ್ಟ ಕನಸು ಬೀಳುತ್ತಿವೆ : ಈಶ್ವರಪ್ಪ

11:23 AM Aug 11, 2021 | Team Udayavani |

ಬೆಳಗಾವಿ : ಮುಖ್ಯಮಂತ್ರಿ ಪದವಿ ಹೋದ ಮೇಲೆ ಸಿದ್ದರಾಮಯ್ಯ ಅವರಿಗೆ ನಿತ್ಯ ಕೆಟ್ಟ ಕನಸು ಬೀಳುತ್ತಿವೆ.   ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂಬ ಕೆಟ್ಟ ಕನಸು ಬೀಳುತ್ತಿವೆ. ಆದರೆ ಈ  ಕನಸು ನನಸಾಗಲು ಸಾಧ್ಯವೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.

Advertisement

ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ  ಮಾತನಾಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸರಿಯಾಗಿ ಆಡಳಿತ ಮಾಡಿದ್ದರೆ ಮತ್ತೆ ಅಧಿಕಾರಕ್ಕೆ ಅವರೇ ಬರುತ್ತಿದ್ದರು. ಈಗ ಚುನಾವಣೆಗೆ ಎರಡು ವರ್ಷ ಮೊದಲೇ ನಾನೇ ಮುಂದಿನ ಸಿಎಂ ಭ್ರಮೆಯಲ್ಲಿದ್ದಾರೆ ಎಂದರು. ಸಿದ್ದರಾಮಯ್ಯ ಅಷ್ಟೇ ಅಲ್ಲ ಡಿಕೆಶಿ, ಪರಮೇಶ್ವರ, ಎಂ.ಬಿ. ಪಾಟೀಲ್ ಸೇರಿ ಎಲ್ಲರೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದರು. ಇವರೆಲ್ಲರ ಕೆಟ್ಟ ಕನಸು ಎಂದಿಗೂ ನನಸಾಗುವದಿಲ್ಲ. ಈ ಜನ್ಮದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ನ ಬಿ ಕೆ ಹರಿಪ್ರಸಾದ ಹಾಗೂ ನನ್ನ ನಡುವೆ ಯಾವುದೇ ವಯಕ್ತಿಕ ದ್ವೇಷವಿಲ್ಲ. ಹರಿಪ್ರಸಾದ ಮಾತನಾಡಿದ್ದು ತಪ್ಪು ಎಂದು ಕಾಂಗ್ರೆಸ್ ದವರು ಹೇಳಬೇಕಿತ್ತು. ಅವರಿಂದ ಕ್ಷಮೆ ಕೇಳಿಸಬೇಕಿತ್ತು ಎಂದು ಈಶ್ವರಪ್ಪ ತಮ್ಮ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ಸಚಿವ ಆನಂದ ಸಿಂಗ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಯಿಸಿದ ಈಶ್ವರಪ್ಪ ಸಂಪುಟ ರಚನೆ ಸಂದರ್ಭದಲ್ಲಿ ಕೆಲವರಿಗೆ ಅಸಮಾಧಾನ ಸಹಜ. ಇಬ್ಬರಿಂದ ಮೂರು ಜನರಿಗೆ ಬೇಸರ ಇದೆ ಎಂಬುದು ನನ್ನ ಗಮನಕ್ಕೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಇದನ್ನು ಇತ್ಯರ್ಥ ಮಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next