Advertisement

ಡಿ.ಕೆ.ಶಿವಕುಮಾರ್ ಏನು ಮಾತನಾಡ್ತಾರೆ ಅನ್ನೋ ಜ್ಞಾನ ಅವರಿಗೇ ಇಲ್ಲ : ಈಶ್ವರಪ್ಪ

01:49 PM Jun 14, 2021 | Team Udayavani |

ಶಿವಮೊಗ್ಗ :  ಡಿ.ಕೆ.ಶಿವಕುಮಾರ್ ಏನು ಮಾತನಾಡ್ತಾರೆ ಅನ್ನೋ ಜ್ಞಾನ ಅವರಿಗೆ ಇರೋದೆ ಇಲ್ಲ. ಅದೇ ರೀತಿ ಸಿದ್ದರಾಮಯ್ಯರಿಗೂ ಸಹ ಮಾತನಾಡುವ ಬಗ್ಗೆ ಜ್ಞಾನ ಇರಲ್ಲ. ಇವರಿಬ್ಬರ ರೀತಿಯೇ ಇದೀಗ ಜಮೀರ್ ಅಹಮ್ಮದ್ ಸಹ ಜ್ಞಾನವಿಲ್ಲದೇ ಮಾತನಾಡುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಮೂರು ಜನ ಒಂದೇ ರೀತಿಯಲ್ಲಿ ಮಾತನಾಡ್ತಾರೆ. ಅವರ ಪಕ್ಷದಲ್ಲಿ ಹೇಳೊರಿಲ್ಲ.. ಕೇಳೋರಿಲ್ಲ.. ಸಿದ್ದರಾಮಯ್ಯರಿಗೆ ಚುನಾವಣೆ ಯಲ್ಲಿ ಚಾಮರಾಜಪೇಟೆ ಕ್ಷೇತ್ರ ಬಿಟ್ಟು ಕೊಡ್ತೇನೆ. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಜಮೀರ್ ಅಹಮದ್ ಹೇಳ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ಕೊಡೋ ವ್ಯವಸ್ಥೆ ಇಲ್ಲ. ಜಮೀರ್ ಅಹಮದ್ ಅವರೇ ಕೊಡೋದು. ಇದನ್ನ ನೋಡ್ಕೋಂಡು ಡಿಕೆ ಶಿವಕುಮಾರ್ ಸುಮ್ನೆ ಇರೋದು. ಅವರೇ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ಅವರ ಪಕ್ಷದ ಹುಳುಕನ್ನು ಹೇಳಲು ಅಸಹಾಯಕರಾಗಿದ್ದಾರೆ. ಅದ್ಕೇ ಸರ್ಕಾರದ ಮೇಲೆ ಆರೋಪ ಮಾಡ್ತಾರೆ. ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡ್ತಿದೆ. ಅದಕ್ಕೆ ಪೋಲಿಸ್ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಯ ಮೇಲೆ ಗೂಬೆ ಕೂರಿಸ್ತಾ ಇದ್ದಾರೆ. ಡಿಕೆ ಶಿವಕುಮಾರ್ ಅವರೇ ಜಮೀರ್ ಅಹಮದ್ ಹೇಳಿಕೆಗೆ ನಿಮ್ಮ ಒಪ್ಪಿಗೆ ಇದೇಯಾ ಮೊದಲು ತಿಳಿಸಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರ್ತಾ ಇದ್ದಾರೆ. ನಮ್ಮ ಪಕ್ಷದಲ್ಲಿ ಹೇಳೋರು ಕೇಳೋರು ಇದ್ದಾರೆ. ಬುಧವಾರ ದಿನ ಎಲ್ಲಾ ಸಚಿವರ ಜೊತೆ ಸಭೆ ಮಾಡ್ತಾ ಇದ್ದಾರೆ. ಗುರುವಾರದಂದು ಎಲ್ಲಾ ಶಾಸಕರ ಸಭೆಯನ್ನೂ ಮಾಡ್ತಾ ಇದ್ದಾರೆ‌. ಯಡಿಯೂರಪ್ಪ ಅವರ ಪರ- ವಿರೋಧ , ಆಡಳಿತದ ಬಗ್ಗೆ ಹೇಳಲು ಅವಕಾಶ ನೀಡಿದೆ. ಜೂನ್ 18 ರಂದು ಕೋರ್ ಕಮಿಟಿಯ ಜೊತೆ ಸಹ ಸಭೆ ನಡೆಸಲಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದೆ. ಅದಕ್ಕೆ ಕೇಂದ್ರದ ನಾಯಕರು ಬಂದು ಕೇಳ್ತಾರೆ. ಅದರೇ, ಕಾಂಗ್ರೆಸ್ ಪಕ್ಷದಲ್ಲಿ ಹೇಳೋರು ಇಲ್ಲ. ಕೇಳೋರು ಇಲ್ಲ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next