ಕಲಬುರಗಿ: “ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಧಮ್ಮಿದ್ದರೆ ಸಿಎಂ ಆಗ್ತೀನೆ ಎಂದು ಹೇಳಲಿ, ಒಂದು ವೇಳೆ ಹೇಳಿದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷದಿಂದಲೇ ತೆಗೆದು ಹಾಕ್ತಾನೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚಿಂಚೋಳಿಯಲ್ಲಿ ನಡೆದ ಕುರುಬ ಸಮುದಾಯದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, “ನನ್ನನ್ನು ಕಾಂಗ್ರೆಸ್ ಪಕ್ಷ ಸಿಎಂ ಮಾಡಿದೆ. ಆದರೆ, ನಾನು ಮುಖ್ಯಮಂತ್ರಿ ಆಗ್ತಿàನಿ ಎಂದು ಹೇಳುವ ಧಮ್ ಈಶ್ವರಪ್ಪಗೆ ಇಲ್ಲ’ ಎಂದರು.
ತಿಪ್ಪರಲಾಗ ಹಾಕಿದರೂ ಬಿಎಸ್‌ವೈ ಸಿಎಂ ಆಗಲ್ಲ: ಬಳಿಕ ತಾಲೂಕಿನ ಸಾಲೇಬೀರನಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಶ ರಾಠೊಡ ಪರ ಚುನಾವಣಾ ಪ್ರಚಾರ ನಡೆಸಿದ ಸಿದ್ದು, ಯಡಿಯೂರಪ್ಪ ವಿರುದ್ಧ ಟೀಕಾಪ್ರಹಾರ ನಡೆಸಿದರು. ಯಡಿಯೂರಪ್ಪನವರು ವಿಧಾನಸಭೆಯ ಮೂರನೇ ಮಹಡಿ ಮತ್ತು ಮುಖ್ಯಮಂತ್ರಿ ಕುರ್ಚಿಯ ಕುರಿತು ದಿನನಿತ್ಯ ಕನಸು ಕಾಣುತ್ತಿದ್ದಾರೆ. ಅವರು ತಿಪ್ಪರಲಾಗ ಹಾಕಿದರೂ ಮತ್ತೆ ಎಂದೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ನುಡಿದರು.
ವಿದೇಶಕ್ಕೆ ಹೋಗಿದ್ದೇ ಮೋದಿ ಸಾಧನೆ: 2014ರಲ್ಲಿ ದೇಶದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ 84 ಸಲ ಹೋಗಿದ್ದಾರೆ. ಇದರಿಂದ ದೇಶದ ಜನರ ತೆರಿಗೆ ಹಣ 1,680 ಕೋಟಿ ರೂ.ಖರ್ಚಾಗಿದೆ. ಇದೇ ಅವರ ದೊಡ್ಡ ಸಾಧನೆ.
ಕಾಂಗ್ರೆಸ್‌ಗೆ ದ್ರೋಹ ಎಸಗಿ, ಹಣಕ್ಕಾಗಿ ಬಿಜೆಪಿಗೆ ಮಾರಾಟವಾಗಿ ಓಡಿ ಹೋದ ಮಾಜಿ ಶಾಸಕ ಉಮೇಶ ಜಾಧವ ಅವರು ಕಾಲೇಜು ಕಲಿಯುತ್ತಿರುವ ವಿದ್ಯಾರ್ಥಿಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿದ್ದಾರೆ. ಆತನಿಗೆ ಓಟು ಹಾಕಬೇಡಿ. ಕಾಂಗ್ರೆಸ್ ಅಭ್ಯರ್ಥಿ ಸುಭಾಶ ರಾಠೊಡಗೆ ಮತ ನೀಡಿ ಎಂದು ಕೋರಿದರು.