Advertisement

ವರಕವಿ ಈಶ್ವರ ಸಣಕಲರ ಪ್ರತಿಷ್ಠಾನ ಸ್ಥಾಪನೆಯಾಗಲಿ: ವಿಶ್ವಜ ಕಾಡದೇವರ

07:19 PM Dec 20, 2021 | Team Udayavani |

ರಬಕವಿ-ಬನಹಟ್ಟಿ: ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂದು ಹಾಡಿದ ನಾಡಿನ ವರಕವಿ ಈಶ್ವರ ಸಣಕಲರ ಪ್ರತಿಷ್ಠಾನ ಸ್ಥಾಪನೆಯಾಗಲಿ. ಸಣಕಲರ ಬಹು ವಿಶಿಷ್ಟವಾದ ಅಪ್ರಕಟಿತ ಸಾಹಿತ್ಯ ಪ್ರಕಟನೆಯಾಗುವಂತೆ ಸರ್ಕಾರ, ವಿವಿಧ ಅಕಾಡೆಮಿಗಳು ಹಾಗೂ ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದು ಉಪನ್ಯಾಸಕ ವಿಶ್ವಜ ಕಾಡದೇವರ ತಿಳಿಸಿದರು.

Advertisement

ಅವರು ಸೋಮವಾರ ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ವರಕವಿ ಈಶ್ವರ ಸಣಕಲರ 106ನೇ ಜಯಂತ್ಯತ್ಸವ ಸಮಾರಂಭದಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಚಿದಾನಂದ ಸೊಲ್ಲಾಪುರ ಮಾತನಾಡಿ, ಈಶ್ವರ ಸಣಕಲರರು ಸ್ವಾಭಿಮಾನಿ ಕವಿಯಾಗಿದ್ದರು. ಡಾ.ಹಳಕಟ್ಟಿಯವರು ನಡೆಸುತ್ತಿದ್ದ ಶಿವಾನುಭವ ಮತ್ತು ನವ ಕರ್ನಾಟಕ ಪತ್ರಿಕೆಗಳ ಸಂಪಾದಕರಾಗಿಯೂ ಮಹತ್ವದ ಕಾರ್ಯ ಮಾಡಿದ್ದರು. ಸಣಕಲರ ಸಮಗ್ರ ಸಾಹತ್ಯ ಪ್ರಕಟನೆಯಾದರೆ ಕನ್ನಡ ನಾಡಿಗೆ ಮಹತ್ವದ ಸಾಹಿತ್ಯ ದೊರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಕಾಶ ಸಣಕಲ, ಸಿದ್ದಣ್ಣ ಸಣಕಲ, ಬಾಬು ಗಂಗಾವತಿ, ಮಲ್ಲಿಕಾರ್ಜುನ ತುಂಗಳ, ದಾನಪ್ಪ ತುಂಗಳ, ಪ್ರವೀಣ ಸವದಿ, ವಿನಾಯಕ ಜತ್ತಿ, ಕಿರಣ ಆಳಗಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next