ರಬಕವಿ-ಬನಹಟ್ಟಿ : ನಾಡು, ದೇಶವಷ್ಟೇ ಅಲ್ಲದೆ ಬಹರೇನ್, ದುಬೈ ಸೇರಿದಂತೆ ಹಲವಾರು ದೇಶಗಳಲ್ಲಿ ಬಸವ ತತ್ವ ಪ್ರಸಾರದ ಮೂಲಕ ಬಸವ ಧರ್ಮ ಬೆಳೆಸುವಲ್ಲಿ ಹುನ್ನೂರ-ಮಧುರಖಂಡಿಯ ಬಸವಜ್ಞಾನ ಗುರುಕುಲದ ಶರಣ ಈಶ್ವರ ಮಂಟೂರರ ಪರಿಶ್ರಮ ಅವಿರತವಾದುದು, ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಶಿವಯೋಗ ಸಾಧನೆ ಮಾಡಿ, ಓರ್ವ ಅಸಾಧಾರಣ ಶರಣಜೀವಿಯಾಗಿ 49ನೇ ವಯಸ್ಸಿನಲ್ಲಿಯೇ ಜೀವ ತ್ಯಾಗ ಮಾಡಿರುವದು ನಿಜಕ್ಕೂ ಬೇಸರ ತರುವಂಥದ್ದು ಎಂದು ಹಿರಿಯ ಸಾಹಿತಿ, ಕವಿ ಸಿದ್ಧರಾಜ ಪೂಜಾರಿ ವಿಷಾದ ವ್ಯಕ್ತಪಡಿಸಿದರು.
ನಗರದ ಬಸವ ಸಂಪದ ನಿವಾಸದಲ್ಲಿ ಶರಣ ಈಶ್ವರ ಮಂಟೂರ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಚನಗಳ ಪ್ರಸ್ತುತಿಗಾಗಿ ಸಂಗೀತ ಅಧ್ಯಯನ ಮಾಡಿದ್ದರು .ನಾನೂ ಕೂಡ ಅವರಿಗೆ ಸಂಗಿತದ ಒಳಸುಳಿಗಳ ಬಗ್ಗೆ ಪಾಠಮಾಡಿದ್ದೆ.ವಚನಗಳ ಕುರಿತು ಆಳವಾಗಿ ಪರಸ್ಪರ ಚರ್ಚಿಸುತ್ತಿದ್ದೆವು. ಸಂಗೀತಕ್ಕೆ, ಪ್ರವಚನಕ್ಕೆ ಹೇಳಿ ಮಾಡಿಸಿದ ಧ್ವನಿ.ಅಸ್ಖಲಿತ ವಾಣಿ. ಅವರ ಧ್ವನಿಮುದ್ರಿಕೆಗಳನ್ನು ನನ್ನ ಹಸ್ತದಿಂದಲೇ ಲೋಕಾರ್ಪಣೆ ಮಾಡಿಸಿದ್ದರು. ಆಳವಾದ ಚಿಂತನ,ಮನಗೆಲ್ಲುವ ತೇಜಸ್ವಿ ಅವರಾಗಿದ್ದರು. ನಾನು ಅವರನ್ನು ಜ್ಯೂನಿಯರ್ ಸಿದ್ಧೇಶ್ವರಶ್ರೀ ಎಂದೆಲ್ಲ ಸಂಬೋಧಿಸುತ್ತಿದ್ದೆ. ಜನರನ್ನು ಮಂತ್ರ ಮುಗ್ಧ ಗೊಳಿಸುವ ವ್ಯಕ್ತಿತ್ವ ಅವರದಾಗಿತ್ತು. ಈಗ ಅದೆಲ್ಲ ಬರೀ ನೆನಪಾಗಿ ಉಳಿಯುತ್ತದೆ. ಅವರ ಈ ಅಕಾಲಿಕ ಸಾವಿಗಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಮನಸ್ಸಿಗೆ ಬಹಳ ದುಃಖವಾಗಿದೆ. ಇಡೀ ನಾಡಿನ ದುಃಖದಲ್ಲಿ ನಾನೂ ಕಂಬನಿ ಮಿಡಿಯುತ್ತಿರುವೆ. ಬಸವಾದಿ ಶಿವಶರಣರ ಸಾಲಿನಲ್ಲಿ ಅವರು ಸೇರಿ ಹೋಗಿದ್ದಾರೆ. ಭಾರವಾದ ಹೃದಯದಿಂದ ಅವರಿಗೆ ಶ್ರದ್ಧಾಂಜಲಿ ಸಲ್ಲಸುವೆ ಎಂದರು.
ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಮಾತನಾಡಿ, ಸಂಗೀತಕ್ಕೆ, ಪ್ರವಚನಕ್ಕೆ ಹೇಳಿ ಮಾಡಿಸಿ ಧ್ವನಿ, ಅಸ್ಖಲಿತ ವಾಣಿ, ಅವರ ಧ್ವನಿ ಮುದ್ರಿಕೆಗಳನ್ನು ಲೋಕಾರ್ಪಣೆಗೊಂಡು ಬಸವ ತತ್ವ ಗಟ್ಟಿಯಾಗುವಲ್ಲಿ ಕಾರಣರಾದವರು ಈಶ್ವರ ಮಂಟೂರ ಅವರು, ಆಳವಾದ ಚಿಂತನ, ಮನಗೆಲ್ಲುವ ತೇಜಸಿ ಅವರದಾಗಿತ್ತು. ಶರಣ ಲೋಕ ಪತ್ರಿಕೆ ಹೊರತರುವ ಸಂದರ್ಭದಲ್ಲಿಯೇ ಆಘಾತಕಾರಿ ವಿಷಯ ತುಂಬಾ ನೋವಾಗಿದೆ ಎಂದರು.
ಇದನ್ನೂ ಓದಿ : ದುರಂತದಲ್ಲಿ ಬದುಕುಳಿದಿರೋ ಕ್ಯಾ.ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ
ಮಕ್ಕಳ ಸಂಗಮದ ಅಧ್ಯಕ್ಷ ಜಯವಂತ ಕಾಡದೇವರ ಮಾತನಾಡಿ, ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಹೋಲಿಕೆಯಂತೆಯೇ ಪ್ರವಚನ ಪಟುವಾಗಿ ಬೆಳೆದು ಲಕ್ಷಾಂತರ ಭಕ್ತರನ್ನು ಗಳಿಸಿದ ಕೀರ್ತಿ ಇವರದಾಗಿ, ಜನರನ್ನು ಮಂತ್ರ ಮುಗ್ಧಗೊಳಿಸುವ ವ್ಯಕ್ತಿತ್ವ ಅವರದಾಗಿತ್ತು. ಈಗ ಅದೆಲ್ಲ ಬರೀ ನೆನಪಾಗಿ ಉಳಿಯುತ್ತದೆ. ಅವರ ಅಕಾಲಿಕ ಸಾವಿಗಿಂತ ದೊಡ್ಡ ದುರಂತ ಇನ್ನೊಂದಿಲ್ಲವೆಂದು ಕಂಬನಿ ಮಿಡಿದರು.
ಸದಾಶಿವ ಗಾಯಕವಾಡ, ಮಹಾಂತ ಚೆಟ್ಟೇರ, ಶಂಕರ ಸೊರಗಾಂವಿ, ರವಿಂದ್ರ ಕರಲಟ್ಟಿ, ರಾಜು ಬಾಣಕಾರ, ಶ್ರೀಶೈಲ ಬೀಳಗಿ, ಬಸವರಾಜ ಕೊಕಟನೂರ ಸೇರಿದಂತೆ ಅನೇಕರಿದ್ದರು.