Advertisement

“ಜೋತಿಷಿ, ವಾಸ್ತುತಜ್ಞರು ಸಮಾಜಮುಖೀಯಾಗಿ ಸೇವೆ ಸಲ್ಲಿಸಿ’

09:27 PM Apr 08, 2019 | Team Udayavani |

ಮೂಡುಬಿದಿರೆ: ಜೋತಿಷ್ಯ ಮತ್ತು ವಾಸ್ತುತಜ್ಞರು ಸಮಾಜದಲ್ಲಿ ಶೋಷಿತರ ದುಃಖವನ್ನು ನಿವಾರಿಸಿ, ಸಮಾಜಮುಖೀಯಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿ ಗೌರವಾದರಗಳಿಗೆ ಪಾತ್ರರಾಗಬೇಕು ಎಂದು ಕೇಮಾರು ಶ್ರೀ ಸಾಂಧಿಪನೀಮಠದ ಈಶ್ವ ವಿಠ್ಠಲದಾಸ ಸ್ವಾಮೀಜಿ ಹೇಳಿದರು.

Advertisement

ಮಂಗಳೂರಿನ ಜೋತಿಷ್ಯ ಮತ್ತು ವಾಸ್ತು ವಿಜ್ಞಾನ ಕೇಂದ್ರದ ಗುರು ಪ್ರೊ| ಶೈಲೇಶ್‌ ಜೈನ್‌ ಅವರಲ್ಲಿ ಕಳೆದ ಐದು ವರ್ಷಗಳಿಂದ ಅಧ್ಯಯನ ಮಾಡಿದ ಅವರ ಶಿಷ್ಯರಿಗೆ ಕೇಮಾರು ಶ್ರೀ ಸಾಂದೀಪನೀ ಮಠದಲ್ಲಿ ಪ್ರಮಾಣ ಪತ್ರಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದ ಅವರು, ಕಲಿಕೆಗೆ ಅವಧಿ, ಪರಿಧಿ ಎಂಬುದಿಲ್ಲ. ಅದು ನಿರಂತರ ಜ್ಞಾನಯಜ್ಞವಾಗಿ ಮುಂದುವರಿಯಬೇಕು ಎಂದರು.

ಪ್ರೊ| ಶೈಲೇಶ್‌ ಜೈನ್‌ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಮೂಢನಂಬಿ ಕೆಗಳನ್ನು ತೆಗೆದುಹಾಕುವಲ್ಲಿ ಹಾಗೂ ಕಪಟ ಜೋತಿಷಿಗಳು ಮತ್ತು ಡೋಂಗಿ ವಾಸ್ತು ಸಲಹೆಗಾರರ ಬಣ್ಣ ಬಯಲು ಮಾಡುವಲ್ಲಿ ತಾನು ಬೋಧಿಸಿದ ವೈಜ್ಞಾನಿಕ ಜೋತಿಷ್ಯ ಮತ್ತು ವಾಸ್ತುಶಾಸ್ತ್ರದ ಮೂಲಕ ಸಮಾಜಕ್ಕೆ ಒಳಿತಿನ ದಾರಿತೋರಿ ಎಂದರು.

ಮಣಿಪಾಲದ ವೇ|ಮೂ| ಅಶೋಕ ಭಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಕೋರಿದರು. ಅಧ್ಯಯನಕಾರರ ಪರವಾಗಿ ಜಯಂತ ರಾವ್‌ ಬಂಟ್ವಾಳ, ಕಿರಣ್‌ ಕುಮಾರ್‌ ಮಣಿಪಾಲ, ಗಂಗಾಧರ ಶಿಬರೂರು, ದೇವಕುಮಾರ್‌ ಕೊಕ್ಕಡ, ಬಾಲಕೃಷ್ಣ ಮಂಗಳೂರು ಮತ್ತು ಕಾರ್ಯಕ್ರಮ ನಿರೂಪಕ ರಾಘವೇಂದ್ರ ಭಂಡಾರ್ಕರ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next