Advertisement
ಹೌದು, ಬೆಂಗಳೂರು ಮೂಲದ “ಓಪನ್ ಆ್ಯಪ್’ ಎಂಬ ಸ್ಟಾರ್ಟ್‌ಅಪ್ ಕಂಪನಿ ಇಂತಹದ್ದೊಂದು ವಿನೂತನ ವ್ಯವಸ್ಥೆಯನ್ನುಅನ್ವೇಷಿಸಿದೆ.
Related Articles
ಅಂತರ್ಜಾಲ ವ್ಯವಸ್ಥೆ ಇದ್ದರೆ ಮಾತ್ರ ಈ ಬೀಗಗಳನ್ನು ತೆಗೆಯಲು ಸಾಧ್ಯ. ಆದರೆ ಹೊಸ ಮಾದರಿಯ ಸ್ಮಾರ್ಟ್ ಲಾಕ್‌ನಲ್ಲಿ ತನ್ನದೇ ಆದ ಇಂಟರ್‌ನೆಟ್ ಅಥವಾ ವೈ-ಫೈ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಮೊಬೈಲ್‌ನಲ್ಲಿ ವೈ-ಫೈ ಆನ್ ಆಗುತ್ತಿದ್ದಂತೆ ಸಿಗ್ನಲ್ ಬರುತ್ತದೆ. ಆ ಮೂಲಕ ಬೀಗ ತೆಗೆಯಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ಇದು ಮೇಕ್ ಇನ್ ಇಂಡಿಯಾದ ಉತ್ಪನ್ನ. ಇದರ ಮೇಲೆ ಹಕ್ಕುಸ್ವಾಮ್ಯ ಪಡೆಯಲು ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಓಪನ್ ಆ್ಯಪ್ ಸಂಸ್ಥಾಪಕ, ಕಾರ್ಯನಿರ್ವಹಣಾ ನಿರ್ದೇಶಕ ಗೌತಮ್ ಗೌಡ ಹೆಮ್ಮೆ ವ್ಯಕ್ತಪಡಿಸುತ್ತಾರೆ.
Advertisement
3 ಲಕ್ಷ ಲಾಕ್‌ಗಳಿಗೆ ಬೇಡಿಕೆ: ಮೊದಲ ಹಂತದಲ್ಲಿ ಈ ಸ್ಮಾರ್ಟ್ ಲಾಕ್ ಸೌಲಭ್ಯವನ್ನು ಬಿ2ಬಿ (ಬ್ಯುಸಿನೆಸ್ ಟು ಬ್ಯುಸಿನೆಸ್) ಗೆ ಪರಿಚಯಿಸಲಾಗಿದೆ. ಮುಖ್ಯವಾಗಿ ಇ-ಕಾಮರ್ಸ್, ಬ್ಯಾಂಕಿಂಗ್‌ನಲ್ಲಿ ಕ್ಯಾಷ್ ಲಾಜಿಸ್ಟಿಕ್ಸ್ (ಹಣ ಸಾಗಣೆ) ಮತ್ತು ಲಾಕರ್ ಗಳು, ಜವಳಿ ಕ್ಷೇತ್ರಗಳಲ್ಲಿ ಜಾರಿಯಲ್ಲಿದೆ.
ಸುಮಾರು 8 ಗ್ರಾಹಕರನ್ನು ಹೊಂದಿದ್ದು, 3 ಲಕ್ಷಕ್ಕೂ ಅಧಿಕ ಸ್ಮಾರ್ಟ್ ಲಾಕ್‌ಗಳಿಗಾಗಿ ಬೇಡಿಕೆ ಇದೆ. ಚೀನಾ, ಅಮೆರಿಕದಿಂದಲೂ ಬೇಡಿಕೆಗಳು ಬರುತ್ತಿವೆ. ಪ್ರತಿ ತಿಂಗಳು 12ರಿಂದ 17 ಸಾವಿರ ಈ ಮಾದರಿಯ ಬೀಗಗಳನ್ನು ತಯಾರಿಸಲಾಗುತ್ತಿದೆ. ಒಂದು ಬೀಗಕ್ಕೆ 1,200 ರೂ.ಗಳಿಂದ 3 ಸಾವಿರ ರೂ.ವರೆಗೂ ತಗಲುತ್ತದೆ. ಮನೆಗಳಿಗೆ ಅಳವಡಿಸಲಿಕ್ಕೂ ಸಿದಟಛಿತೆ ನಡೆದಿದೆ ಎಂದು ಅವರು ವಿವರಿಸಿದರು.
ಹೇಗೆ ಕೆಲಸ ಮಾಡುತ್ತೆ?: ಸ್ಮಾರ್ಟ್ ಲಾಕ್‌ನಲ್ಲಿ ಸಣ್ಣ ಚಿಪ್ ಇರುತ್ತದೆ. ಅದರಲ್ಲಿ ಲಾಕ್ ಹೊಂದಿದ ಮಾಲಿಕರ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ನಮೂದಿಸಲಾಗಿರುತ್ತದೆ. ಅದರಂತೆ ಸ್ಮಾರ್ಟ್ ಲಾಕ್ ಆ್ಯಪ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿರುತ್ತದೆ. ಆ್ಯಪ್‌ನ ಗುಂಡಿ ಒತ್ತುತ್ತಿದ್ದಂತೆ, ಅಧಿಕೃತ ಮಾಹಿತಿಗಳೊಂದಿಗೆ ಅನುಮತಿ ಕೇಳುತ್ತದೆ. ಅನುಮತಿ ಕೊಡುತ್ತಿದ್ದಂತೆ ಬೀಗ ತೆರೆಯುತ್ತದೆ. ಆದರೆ, ಇದಕ್ಕೆ ಮೊಬೈಲ್‌ನಲ್ಲಿ ಇಂಟರ್‌ನೆಟ್/ ವೈ-ಫೈ ಸೇವೆ ಇರಲೇಬೇಕು.
– ವಿಜಯ್‌ಕುಮಾರ್ ಚಂದರಗಿ