Advertisement

ಎಸ್ಕೇಪ್‌ ಟ್ರಿಕ್‌

11:55 PM Jun 05, 2019 | sudhir |

ನೀವೆಲ್ಲಾ ಜಗತøಸಿದ್ಧ ಜಾದೂಗಾರ ಹೌದಿನಿಯ ಎಸ್ಕೇಪ್‌ ಟ್ರಿಕ್‌ ಬಗ್ಗೆ ಕೇಳಿರಬಹುದು. ಆತನನ್ನು ಸರಪಳಿಗಳಿಂದ ಬಂಧಿಸಿದರೂ ಕ್ಷಣಾರ್ಧದಲ್ಲಿ ಬಿಡಿಸಿಕೊಂಡು ಬರುತ್ತಿದ್ದನಂತೆ. ಈಗ ನಿಮಗೂ ಅಂತಹದೇ ಒಂದು ಸರಳ ತಂತ್ರವೊಂದು ಇಲ್ಲಿದೆ.

Advertisement

ಇಬ್ಬರು ಪ್ರೇಕ್ಷಕರನ್ನು ಕರೆದು ಒಂದು ಉದ್ದವಾದ ಹಗ್ಗವನ್ನು ಪರೀಕ್ಷಿಸಲು ಕೊಡಿ. ನಂತರ ನಿಮ್ಮ ಸಹಾಯಕನನ್ನು ಕರೆದು ಹಗ್ಗವನ್ನು ಮುಂದುಗಡೆಯಿಂದ ಆತನ ಸೊಂಟದ ಸುತ್ತ ಬರುವಂತೆ ತೆಗೆದುಕೊಂಡು ಬಂದು ಬೆನ್ನ ಹಿಂದೆ ಗಂಟು ಹಾಕುವಂತೆ ನಟಿಸಿ. ಈಗ ಹಗ್ಗದ ಒಂದೊಂದು ತುದಿಯನ್ನೂ ಒಂದೊಂದು ಬದಿಯಿಂದ ತೆಗೆದುಕೊಂಡು ಹೋಗಿ ಮೊದಲೇ ವೇದಿಕೆಗೆ ಬಂದಿದ್ದ ಪ್ರೇಕ್ಷಕರಲ್ಲಿ ಒಬ್ಬೊಬ್ಬರಿಗೆ ಒಂದೊಂದು ತುದಿಯನ್ನು ಕೊಟ್ಟು ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ. ಇದನ್ನು ಮಾಡುವಾಗ ಆ ಪ್ರೇಕ್ಷಕರು ನಿಮ್ಮ ಸಹಾಯಕನ ಎದುರಲ್ಲಿರಬೇಕು ಹಾಗು ಸುಮಾರು ಮೂರು ಅಡಿಗಳಷ್ಟಾದರೂ ಅಂತರದಲ್ಲಿರುವಂತೆ ನೋಡಿಕೊಳ್ಳಿ. ಈಗ ನೀವು ಒನ್‌, ಟೂ, ತ್ರೀ ಎಂದು ಹೇಳುವಷ್ಟರಲ್ಲಿ ಹಗ್ಗವು ಸಹಾಯಕನ ಸೊಂಟದ ಮೂಲಕ ಹೊರಬಂದಿರುತ್ತದೆ!

ಇದರ ರಹಸ್ಯ ಇಷ್ಟೆ, ಚಿತ್ರವನ್ನು ಸರಿಯಾಗಿ ಗಮನಿಸಿ. ನೀವು ಹಗ್ಗವನ್ನು ಬೆನ್ನ ಹಿಂದೆ ಕಟ್ಟುವಂತೆ ನಟಿಸುತ್ತಿರುವಾಗ ನಿಮ್ಮ ಸಹಾಯಕ ಹಗ್ಗವನ್ನು ತನ್ನ ಹೆಬ್ಬೆರಳಿನಿಂದ ಹಿಡಿದಿರುತ್ತಾನೆ. ಅಸಲಿಗೆ ಗಂಟು ಹಾಕುವುದೇ ಇಲ್ಲ. ನಂತರ ಮೇಲೆ ವಿವರಿಸಿದಂತೆ ಮಾಡಿದ ಬಳಿಕ ನೀವು ಒನ್‌, ಟೂ, ತ್ರೀ ಎಂದು ಹೇಳುವಷ್ಟರಲ್ಲಿ ಸಹಾಯಕ ಒಂದು ಹೆಜ್ಜೆ ಹಿಂದಕ್ಕೆ ಹೋಗುತ್ತಾನೆ ಮತ್ತು ಅದೇ ಸಮಯಕ್ಕೆ ಸರಿಯಾಗಿ ಹೆಬ್ಬೆರಳುಗಳಿಂದ ಹಗ್ಗವನ್ನು ಜಾರಿಸಿಬಿಡುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next