Advertisement

ಪುಲ್ವಾಮದಲ್ಲಿ ಭಾರಿ ಗುಂಡಿನ ಚಕಮಕಿಯ ಬಳಿಕ ಉಗ್ರರು ಪರಾರಿ

02:25 PM Mar 18, 2023 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಶನಿವಾರ ಭದ್ರತಾಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿಯ ಬಳಿಕ ಉಗ್ರರು ಪರಾರಿಯಾಗಿದ್ದಾರೆ.

Advertisement

ಪುಲ್ವಾಮಾದ ಮಿಟ್ರಿಗಾಮ್ ಗ್ರಾಮದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಕಾಟಗಳು ತೀವ್ರಗೊಂಡಂತೆ, ಅಡಗಿಕೊಂಡಿದ್ದ ಭಯೋತ್ಪಾದಕರು ಶೋಧನಾ ತಂಡದ ಮೇಲೆ ಗುಂಡು ಹಾರಿಸಿದ್ದು, ಈ ಪ್ರದೇಶದಲ್ಲಿ ಸ್ವಲ್ಪ ಸಮಯದ ಗುಂಡಿನ ಚಕಮಕಿ ನಡೆಯಿತು.

ಸ್ವಲ್ಪ ಸಮಯದ ಗುಂಡಿನ ವಿನಿಮಯದ ನಂತರ, ಇನ್ನೊಂದು ಕಡೆಯಿಂದ ಯಾವುದೇ ಪ್ರತಿಕ್ರಿಯೆ ಕಾಣಿಸಿಕೊಂಡಿಲ್ಲ ಮತ್ತು ಶೋಧದ ಸಮಯದಲ್ಲಿ, ಎನ್‌ಕೌಂಟರ್ ಸ್ಥಳದಲ್ಲಿ ಯಾವುದೇ ಭಯೋತ್ಪಾದಕರು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭಿಕ ಗುಂಡಿನ ಚಕಮಕಿಯ ಸಮಯದಲ್ಲಿ, ಭಯೋತ್ಪಾದಕರು ಕತ್ತಲೆಯ ಲಾಭವನ್ನು ಪಡೆದುಕೊಂಡು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಭಯೋತ್ಪಾದಕರು ಮತ್ತು ಎಸ್‌ಐಎ ದಾಖಲಿಸಿರುವ ಪ್ರತ್ಯೇಕತಾವಾದಿ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಮಧ್ಯ ಮತ್ತು ದಕ್ಷಿಣ ಕಾಶ್ಮೀರ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ನೆರವಿನೊಂದಿಗೆ ತನಿಖಾ ಸಂಸ್ಥೆಯ ಅಧಿಕಾರಿಗಳು ಬೇಸಿಗೆ ರಾಜಧಾನಿ ಶ್ರೀನಗರ, ಅನಂತನಾಗ್, ಕುಲ್ಗಾಮ್, ಶೋಪಿಯಾನ್ ಮತ್ತು ಇತರ ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್‌ಐಎ ತಂಡಗಳು ಶೋಪಿಯಾನ್ ಜಿಲ್ಲೆಯ ರೆಬೆನ್ ಝೈನಾಪೋರಾ ನಿವಾಸಿ ಅಬ್ದುಲ್ ರಾಝಿಕ್ ವಾಗೇ ಪುತ್ರ ಸರ್ಜನ್ ಅಹ್ಮದ್ ವಾಗೇ ಅಲಿಯಾಸ್ ಬರ್ಕತಿ ವಾಸದ ಮೇಲೆ ದಾಳಿ ನಡೆಸಿವೆ.

Advertisement

ಎಸ್‌ಐಎಯಲ್ಲಿ ಈಗಾಗಲೇ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಕರಣದ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next