Advertisement

ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಜ್ವಾಲಾಮುಖಿ ಸ್ಪೋಟದ ವಿಡಿಯೋ!

02:55 PM Mar 22, 2021 | Team Udayavani |

ನವದೆಹಲಿ : ಜ್ವಾಲಾಮುಖಿ ಸ್ಪೋಟಗಳು ಖಂಡಿತವಾಗಿಯೂ ಭಯಾನಕವಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವು ಜ್ವಾಲಾಮುಖಿಗಳು ನೋಡಲು ಸುಂದರವಾಗಿ ಗೋಚರಿಸುತ್ತವೆ. ಐಸ್ ಲ್ಯಾಂಡ್ ನಲ್ಲಿ ಸಾವಿರಾರು ಭೂಕಂಪನಗಳು ನಡೆದಿವೆ. ಆದ್ರೆ ಇತ್ತೀಚೆಗೆ ಒಂದು ಜ್ವಾಲಾಮುಖಿ ನಡೆದಿದ್ದು, ಅದರ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Advertisement

ಫಾಗ್ರಾಡಾಲ್ಸ್ ಪರ್ವತದಲ್ಲಿ ಇತ್ತೀಚೆಗೆ ಜ್ವಾಲಾಮುಖಿಯಾಗಿದ್ದು, ತನ್ನ ಭೂಗರ್ಭದಿಂದ ಲಾವಾ ರಸವನ್ನು ಹೊರ ಹಾಕಿದೆ. ಹೊಳೆಯ ರೀತಿಯಲ್ಲಿ ಹರಿದಿರುವ ಲಾವಾ ರಸ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಾಗಿದೆ.

ಈ ದೃಶ್ಯಗಳನ್ನು ನೋಡಲು ಅನೇಕ ಜನರು ಪರ್ವತದ ಹತ್ತಿರವಿರುವ ರಸ್ತೆಗೆ ಹೋಗಿದ್ದರು. ಆದ್ರೆ ಒಬ್ಬ ಫೋಟೋಗ್ರಾಫರ್ ಮಾತ್ರ ಅದ್ಭುತವಾದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.

ಟ್ರಾವೆಲ್ ಬ್ಲಾಗರ್ ಜಾರ್ನ್ ಸ್ಟೈನ್ಬೆಕ್ ಅವರು ಫಾಗ್ರಾಡಾಲ್ಸ್‌ ಫಾಲ್ ಐಸ್ ಲ್ಯಾಂಡ್ ಪರ್ವತದ ಮೇಲಿನ ಜ್ವಾಲಾಮುಖಿ ಸ್ಪೋಟದ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಎಬಿಸಿ ನ್ಯೂಸ್ ಪ್ರಕಾರ ಈ ಜಾಗದಲ್ಲಿ ಜ್ವಾಲಾಮುಖಿಯು 6,000 ವರ್ಷಗಳಿಂದ ಶಾಂತವಾಗಿತ್ತು ಎಂದು ವರದಿ ಮಾಡಿದೆ. ಸ್ಥಳೀಯರು ಈ ಬಗ್ಗೆ ಹೇಳಿದ್ದು, ಇದರ ಪ್ರಕಾಶತೆ ತುಂಬಾ ಇತ್ತು. ಅಲ್ಲದೆ, ರೇಕ್‌ ಜಾವಿಕ್‌ ನ ಹೊರವಲಯದಿಂದ ಅದರ ಹೊಳಪನ್ನು ಕಾಣಬಹುದಿತ್ತು ಎಂದಿದ್ದಾರೆ. ಇನ್ನು ಸ್ಪೋಟವಾದ ಸ್ಥಳದಿಂದ ಸುಮಾರು 32 ಕಿಲೋಮೀಟರ್ ದೂರದವರೆಗೆ ಇದರ ಶಾಖ ಇತ್ತು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next