Advertisement

ಗೂಗಲ್‌ ಕ್ರೋಮ್‌ನಲ್ಲಿ ದೋಷ

12:17 AM Feb 09, 2022 | Team Udayavani |

ಹೊಸದಿಲ್ಲಿ: ಭಾರತೀಯ ಕಂಪ್ಯೂಟರ್‌ ತುರ್ತು ಸಂವೇದನಾ ತಂಡ (ಸಿಇಆರ್‌ಟಿ-ಇನ್‌) ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಎಚ್ಚರಿಕೆಯೊಂದನ್ನು ರವಾನಿಸಿದೆ.

Advertisement

ಜಗತ್ತಿನಲ್ಲಿ ಶೇ.63 ಮಂದಿ ಬಳಕೆದಾ ರರು ಕ್ರೋಮನ್ನೇ ಬಳಸುತ್ತಾರೆ. ಹೀಗಿರುವಾಗ ಹ್ಯಾಕರ್‌ಗಳು ಕ್ರೋಮ್‌ನಲ್ಲಿರುವ ಕೆಲವು ದೋಷ ಗಳನ್ನು ಬಳಸಿಕೊಂಡು ನಿರ್ದಿಷ್ಟ ತಾಣಗಳ ಮೇಲೆ ದಾಳಿ ಮಾಡುತ್ತಾರೆ. ಅಂತಹ ದೋಷಗಳು ಕ್ರೋಮ್‌ನಲ್ಲಿ ಪತ್ತೆಯಾಗಿವೆ ಎಂದು ಸಿಇಆರ್‌ಟಿ ತಿಳಿಸಿದೆ.

ಕ್ರೋಮ್‌ಗೆ ಜನಪ್ರಿಯತೆ ಇರುವುದರಿಂದ ಹ್ಯಾಕರ್‌ಗಳು ಕೋಟ್ಯಂತರ ಮಂದಿಯನ್ನು ತಲುಪಲು ಇದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ಸ್ಟಾಟ್‌ಕೌಂಟರ್‌ ಎಂಬ ಸಂಸ್ಥೆ ತಿಳಿಸಿದೆ. ಕ್ರೋಮ್‌ನಲ್ಲಿ ಹಲವು ಸಮಸ್ಯೆಗಳು ಪತ್ತೆಯಾ ಗಿವೆ. ಇದನ್ನು ಬಳಸಿ ಕೊಂಡೇ ಹ್ಯಾಕರ್‌ಗಳು ಇನ್ನೊಂದು ಕೋಡನ್ನು ಸೃಷ್ಟಿಸಬಹುದು.

ಒಂದು ವೇಳೆ ಹ್ಯಾಕರ್‌ಗಳು ಈ ದೋಷಗಳನ್ನು ಬಳಸಲು ಯಶಸ್ವಿಯಾದರೆ ಎಡವಟ್ಟುಗಳು ಸಂಭವಿಸು ತ್ತವೆ. ಹಲವು ಕಾರಣಗಳಿಂದ ಗೂಗಲ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಈ ಬಗ್ಗೆ ಎಚ್ಚರವಹಿಸುವಂತೆ ತಜ್ಞರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next