Advertisement

“ಈ”ಕೆಲಸಕ್ಕೆ ಭಯಪಟ್ಟು ಹಿಂದೆ ಉಳಿಯುವುದು ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು..!

01:33 PM Aug 01, 2021 | Team Udayavani |
ಮನುಷ್ಯ ಅತ್ಯಂತ ಮಡಿವಂತಿಕೆ ಮಾಡುವ ವಿಚಾರ ಯಾವುದು ಕೇಳಿದರೇ, ಅದು ಸೆಕ್ಸ್. ನಿಜಕ್ಕೂ ಇದು ಮಡಿವಂತಿಕೆ ಮಾಡುವ ವಿಚಾರವಲ್ಲ. ಮತ್ತು ಅದು ಸಂಪೂರ್ಣ ಮುಕ್ತವಾದ ವಿಚಾರವೂ ಕೂಡ ಅಲ್ಲ. ಆದರೇ, ಸೆಕ್ಸ್ ಎನ್ನುವುದು ಕೊಳಕು ಅಲ್ಲ. ಕೊಳಕು ಎನ್ನುವುದಾದರೇ, ಇಡೀ ಪ್ರಪಂಚವೇ ಕೊಳಕಾಗಿದೆ ಎಂದು ನಾವು ಒಪ್ಪಿಕೊಳ್ಳಬೇಕು.ನಿಮಗೆ ಮದುವೆಯಾಗಿದ್ದರೇ, ನಿಮಗೂ ಈ ಭಯ ಹುಟ್ಟಿರಬಹುದು. ಅಥವಾ ನಿಮ್ಮ ಸಂಗಾತಿಯಲ್ಲಿಯೂ ಕೂಡ ಇಂತಹ ಅಸಹಜ ಭಯ ಇದ್ದಿರಬಹುದು. ಅದರಿಂದ ನಿಮಗೆ ಲೈಂಗಿಕ ಅತೃಪ್ತಿಯೂ ಉಂಟಾಗಿರಬಹುದು.ಲೈಂಗಿಕತೆಯ ಬಗ್ಗೆ ಭಯ ಇರುವವರಿಗೆ ನಗ್ನವಾಗಿ ತನ್ನ ಸಂಗಾತಿಯೊಂದಿಗೆ ಇರಲು ಮುಜುಗರವಾಗುವುದು ಹಾಗೂ ಒಂದು ರೀತಿಯ ನಾಚಿಕೆಯೊಂದಿಗಿನ ಭಯವೂ ಲೈಂಗಿಕವಾಗಿ ಸೇರುವುದಕ್ಕೆ ಭಯ ಪಡುತ್ತಾರೆ. ಇತರರನ್ನು ಬೆತ್ತಲೆಯಾಗಿ ನೋಡುವ ಭಯ, ತನ್ನನ್ನು ತಾನೇ ಬೆತ್ತಲೆಯಾಗಿ ನೋಡಿಕೊಳ್ಳುವುದರ ಭಯ.
Now pay only for what you want!
This is Premium Content
Click to unlock
Pay with

ಸಾಮಾನ್ಯವಾಗಿ ಸೆಕ್ಸ್ ಬಗ್ಗೆ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಅದು ಒಂದು ಹಂತದ ತನಕ ಮಾತ್ರ ಅವ್ಯಕ್ತವಾಗಿ ಉಳಿಯುವುದಕ್ಕೆ ಸಾಧ್ಯ. ಅದಕ್ಕೂ ಮೀರಿ ಮನುಷ್ಯ ಬದುಕುಳಿಯಲಾರ.

Advertisement

ಹೊಟ್ಟೆಯ ಹಸಿವನ್ನು ತಣಿಸುವುದಕ್ಕೆ ಹೇಗೆ ಆಹಾರ ಸೇವಿಸುತ್ತಾನೋ, ಹಾಗೆಯೇ ದೇಹದ ಬಯಕೆಯನ್ನು ತಣಿಸುವುದಕ್ಕೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ಮನುಷ್ಯ ಮಾಡುತ್ತಾನೆ. ಅದು ನೈಸರ್ಗಿಕವಾಗಿ ಸಹಜವೂ ಹೌದು. ಮಾನವ ಬುದ್ಧಿವಂತ ಎಂದು ಕರೆಸಿಕೊಂಡಿರುವ ಕಾರಣದಿಂದಾಗಿ ಅದಕ್ಕೆ ಒಂದಿಷ್ಟು ಕಟ್ಟು ಪಾಡಗಳನ್ನು ಕೂಡ ಮಾಡಿಕೊಂಡಿದ್ದಾನೆ. ಅದು ನಾಗರಿಕ ಸಮಾಜಕ್ಕೆ ಒಪ್ಪಿಗೆಯಾಗುವ ಹಾಗೆ ಇದೆ.

ಮನುಷ್ಯ ಇತರೆ ಪ್ರಾಣಿಗಳಂತಲ್ಲ. ಅವನ ಇರುವಿಕೆಗೆ ಇಂತಂದ್ದೇ ವ್ಯವಸ್ಥೆ, ಕಟ್ಟುಪಾಡು, ಚೌಕಟ್ಟು ಎನ್ನುವುದಿದೆ. ಈ ಲೈಂಗಿಕ ವಿಚಾರದಲ್ಲಿಯೂ ಕೂಡ ಹಾಗೆ. ಮನುಷ್ಯ ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ.

ಆದರೇ, ಮನುಷ್ಯ ಅತ್ಯಂತ ಮಡಿವಂತಿಕೆ ಮಾಡುವ ವಿಚಾರ ಯಾವುದು ಕೇಳಿದರೇ, ಅದು ಸೆಕ್ಸ್. ನಿಜಕ್ಕೂ ಇದು ಮಡಿವಂತಿಕೆ ಮಾಡುವ ವಿಚಾರವಲ್ಲ. ಮತ್ತು ಅದು ಸಂಪೂರ್ಣ ಮುಕ್ತವಾದ ವಿಚಾರವೂ ಕೂಡ ಅಲ್ಲ. ಆದರೇ, ಸೆಕ್ಸ್ ಎನ್ನುವುದು ಕೊಳಕು ಅಲ್ಲ. ಕೊಳಕು ಎನ್ನುವುದಾದರೇ, ಇಡೀ ಪ್ರಪಂಚವೇ ಕೊಳಕಾಗಿದೆ ಎಂದು ನಾವು ಒಪ್ಪಿಕೊಳ್ಳಬೇಕು. ಅದು ಮಾನವ ಬದುಕಿನ ಸಹಜ ಕ್ರಿಯೆ. ಸೆಕ್ಸ್ ನನ್ನು ಅದೊಂದು ಸಹಜ ಕ್ರಿಯೆ ಎಂದು ಮಾತ್ರ ಸ್ವೀಕರಿಸಿಕೊಂಡಾಗ ಮಾತ್ರ ಅದು ಸಹಜ ಕ್ರಿಯೆಯಾಗಿಯೇ ಇರುತ್ತದೆ. ಇಲ್ಲವಾದಲ್ಲಿ ಅದು ಬೇರೆ ಅರ್ಥವನ್ನು ಪಡೆದುಕೊಳ್ಳುತ್ತದೆ.

‘ಸೆಕ್ಸ್’ ಎನ್ನುವುದು ಇಲ್ಲದೇ ಹೋಗಿದ್ದರೇ, ಇಡೀ ಪ್ರಪಂಚವೇ ಬರಡಾಗಿರುತ್ತಿತ್ತು ಎಂದರೇ, ತಪ್ಪಿಲ್ಲ. ಇಡೀ ಜಗತ್ತಿನ ಸೃಷ್ಟಿಗೆ ಮಿಲನವೇ ಮೂಲ ಎನ್ನುವುದು ಸತ್ಯಾಂಶವಾದರೂ, ಅದನ್ನು ನೋಡುವ ದೃಷ್ಟಿ ಬೇರೆಯೇ ಇದೆ.

Advertisement

ಇನ್ನು, ಈ ಸೆಕ್ಸ್ ವಿಚಾರಕ್ಕೆ ಬಂದರೇ, ಸಾಕಷ್ಟು ಅಸಹಜ ಭಯ ಇದೆ. ಹೀಗೆ ಹೇಳಿದರೇ, ನಿಮಗೆ ಆಶ್ಚರ್ಯವೆನ್ನಿಸಿದರೂ ಇದು ಅಪ್ಪಟ ಸತ್ಯ. ಈ ಭಯವೂ ಕೂಡ ಅವ್ಯಕ್ತ. ಅದು ಹೇಳಿಕೊಳ್ಳುವುದಕ್ಕೂ ಆಗದೇ, ಹೇಳಿಕೊಳ್ಳದೇ ಇರಲು ಸಾಧ್ಯವಿಲ್ಲದೇ ಇರುವ ಒಂದು ಭೀತಿ ಅಥವಾ ಅಸಹಜ ಭಯ.

ನಿಮಗೆ ಮದುವೆಯಾಗಿದ್ದರೇ, ನಿಮಗೂ ಈ ಭಯ ಹುಟ್ಟಿರಬಹುದು. ಅಥವಾ ನಿಮ್ಮ ಸಂಗಾತಿಯಲ್ಲಿಯೂ ಕೂಡ ಇಂತಹ ಅಸಹಜ ಭಯ ಇದ್ದಿರಬಹುದು. ಅದರಿಂದ ನಿಮಗೆ ಲೈಂಗಿಕ ಅತೃಪ್ತಿಯೂ ಉಂಟಾಗಿರಬಹುದು.

ಹೌದು, ಈ ಲೈಂಗಿಕ ವಿಚಾರಕ್ಕೆ ಸಂಬಂಧ ಪಟ್ಟಂತೆ, ಮನಃಶಾಸ್ತ್ರದ ಪ್ರಕಾರ ಸುಮಾರು ಹದಿನೆಂಟು ಫೋಬಿಯಾಗಳಿವೆ. ಅದರಲ್ಲಿ ಒಂದು ಫೋಬಿಯಾದ ಬಗ್ಗೆ ನಾವು ಗಮನಿಸೋಣ..

ಇರೋಟೊಫೋಬಿಯಾ/ ಎರೋಟೋಫೋಬಿಯಾ

ಇದು ಲೈಂಗಿಕತೆಯ ಬಗ್ಗೆ ಯಾವ ವಿಚಾರ ಮಾತನಾಡಿರೂ ಅಸಹಜವಾಗಿ ಹುಟ್ಟಿಕೊಳ್ಳುವ ಭಯ ಎಂದರೇ ತಪ್ಪಿಲ್ಲ. ವಸ್ತುಕ್ರಿಯೆ ಅಥವಾ ಲೈಂಗಿಕ ಕ್ರಿಯೆ, ಅಥವಾ ತನ್ನ ಸಂಗಾತಿಯೊಂದಿಗೆ ಸೇರುವ ವಿಚಾರದಲ್ಲಿ ಆಗುವ ಭಯ ಇದು. ಈ ರೀತಿಯ ಭಯ ಇರುವವರಿಗೆ ಕಾಮ ಬೇಡವೆಂದಲ್ಲ. ಆ ಕ್ರಿಯೆಗೆ ತೊಡಗಿಕೊಳ್ಳುವ ಭಯ ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಈ ಲೈಂಗಿಕ ಕ್ರಿಯೆಯ ಬಗ್ಗೆ ಇರುವ ಭಯದ ಕಾರಣಗಳು ಯಾವುವು..? ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ…

ಹೆಚ್ಚಾಗಿ ಈ ಫೋಬಿಯಾ ಅಥವಾ ಅಸಹಜ ಭಯ ಮಹಿಳೆಯರಲ್ಲಿ ಹೆಚ್ಚಾಗಿ ಇರುತ್ತದೆ ಎಂದು ಮನಃಶಾಸ್ತ್ರ ಕೂಡ ಹೇಳುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಗುಪ್ತಾಂಗಕ್ಕೆ ಅಸಹನೀಯ ನೋವಾಗುತ್ತದೆ. ಆ ನೋವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವ ಪೂರ್ವ ಕಲ್ಪಿತ ಭಯ ಇದು.

ಯಾಕೆ ಈ ಲೈಂಗಿಕತೆಯ ಬಗ್ಗೆ ಇಷ್ಟೊಂದು ಭಯ ಇರಲು ಸಾಧ್ಯ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿದರೇ, ಕೆಲವು  ಕಾರಣಗಳನ್ನು ಗಮನಿಸೋಣ, ಆದರೇ, ಈ ಎಲ್ಲಾ ಅಸಹಜ ಭಯಗಳು ಅಥವಾ ಕಾರಣಗಳು ನಿಮಗೆ ಕ್ಷುಲ್ಲಕ ಅಂತನ್ನಿಸಬಹುದು. ಆದರೇ, ಇದೇ ಸಣ್ಣ ಕಾರಣಗಳಿಂದ ಲೈಂಗಿಕತೆ ಬಯಕೆ ಇದ್ದರೂ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದಕ್ಕೆ ಬಯಸದೇ, ನಿರ್ಲಕ್ಷಿಸುವುದಕ್ಕೆ ನೋಡುತ್ತಾರೆ. ಅಥವಾ ಲೈಂಗಿಕ ಭಾವನೆಯನ್ನು ತಮ್ಮ ಮನದೊಳಗೆ ಹುದುಗಿಸಿಟ್ಟುಕೊಂಡು ಇರುತ್ತಾರೆ. ಆದರೇ, ಹೀಗೆ ಮಾಡುವುದರಿಂದ ಇತರೆ ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು ಎನ್ನುತ್ತದೆ ಮನಃಶಾಸ್ತ್ರ.

ನಿಮಗೆ ಅಳು ಬಂದಾಗ ಅತ್ತು ಬಿಡಿ, ಕೋಪ ಬಂದಾಗ ಆ ಕೋಪವನ್ನು ಹೊರಹಾಕಿಕೊಳ್ಳಿ, ಬೇಸರವಾದಾಗ ಅದನ್ನು ತೋರ್ಪಡಿಸಿಕೊಳ್ಳಿ…ಹೀಗೆ ಎಲ್ಲಾ ಭಾವನೆಯನ್ನು ತೋರಿಸಿಕೊಳ್ಳಿ, ಆದರೇ, ಕಾಲ, ಸ್ಥಿತಿ, ಸಂಬಂಧಗಳ ಬಗ್ಗೆ ಜ್ಞಾನ ಇರಲಿ. ಈ ಸೆಕ್ಸ್ ವಿಚಾರದಲ್ಲಿಯೂ ಕೂಡ ಹಾಗೆ. ಸೆಕ್ಸ್ ಮಾಡಬೇಕು ಎಂದು ಬಯಕೆ ಹುಟ್ಟಿದಾಗ ಆ ಬಯಕೆಯನ್ನು ಪೂರೈಸಿಕೊಳ್ಳುವುದೇ ಉತ್ತಮ. ಆದರೇ, ಒಪ್ಪಿಗೆಯಿಂದ, ಎರಡೂ ಮನಸ್ಸು ಬಯಸಿ ಮಾಡುವ ಸೆಕ್ಸ್ ನಿಮ್ಮನ್ನು ತೃಪ್ತಿಗೊಳಿಸುತ್ತದೆ. ಇನ್ನು, ಸೆಕ್ಸ್ ನನ್ನು ಅದುಮಿಟ್ಟುಕೊಂಡಷ್ಟು, ಅದು ಮತ್ಯಾವುದೋ ಮಾನಸಿಕ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಈ ಇರೋಟೊಫೋಬಿಯಾ ಅಥವಾ ಎರೋಟೋಫೋಬಿಯಾ ಯಾಕೆ ಹುಟ್ಟಿಕೊಳ್ಳುತ್ತದೆ ಎಂದರೇ, ರೋಗ ಅಥವಾ ವೈರಸ್ ಬರುವ ಭಯದ ಕಾರಣದಿಂದ ಹುಟ್ಟತ್ತದೆ. ಈ ಅಸಹಜ ಭಯ ಇರೋಟೊಫೋಬಿಯಾ ಒಂದು ಕವಲು ಅಥವಾ ಬ್ರ್ಯಾಂಚ್ ಎಂದೇ ಹೇಳಬಹುದು. ಇದಕ್ಕೆ ಮನಃಶಾಸಸ್ತ್ರದಲ್ಲಿ ನೊಸೊಫೋಬಿಯಾ ಎಂದು ಹೇಳಲಾಗುತ್ತದೆ.

ಲೈಂಗಿಕತೆಯ ಬಗ್ಗೆ ಭಯ ಇರುವವರಿಗೆ ನಗ್ನವಾಗಿ ತನ್ನ ಸಂಗಾತಿಯೊಂದಿಗೆ ಇರಲು ಮುಜುಗರವಾಗುವುದು ಹಾಗೂ ಒಂದು ರೀತಿಯ ನಾಚಿಕೆಯೊಂದಿಗಿನ ಭಯವೂ ಲೈಂಗಿಕವಾಗಿ ಸೇರುವುದಕ್ಕೆ ಭಯ ಪಡುತ್ತಾರೆ. ಇತರರನ್ನು ಬೆತ್ತಲೆಯಾಗಿ ನೋಡುವ ಭಯ, ತನ್ನನ್ನು ತಾನೇ ಬೆತ್ತಲೆಯಾಗಿ ನೋಡಿಕೊಳ್ಳುವುದರ ಭಯ. ಮತ್ತು ಇವರೆಡೂ ಭಯ ಇರುವ ಒಂದು ಅಸಹಜ ಮನಸ್ಥಿತಿ. ಇದನ್ನು ಜಿಮ್ನೋಫೋಬಿಯಾ ಎಂದು ಕರೆಯಲಾಗುತ್ತದೆ.

ಆಪೋಸಿಟ್ ಸೆಕ್ಸ್ ಅಥವಾ ವಿರುದ್ಧ ಲಿಂಗದ ಭಯ ಇರುವವರು ಕೂಡ ಸೆಕ್ಸ್ ಬಗ್ಗೆ ಭಯ ಪಡುತ್ತಾರೆ ಇದನ್ನು ಹೆಟೆರೊಫೋಬಿಯಾ ಎಂದು ಹೇಳುತ್ತಾರೆ. ಇನ್ನು ಕೆಲವರಿಗೆ ಸೆಕ್ಸ್ ಬಗ್ಗೆ ತುಂಬಾ ಆಸಕ್ತಿ ಇದ್ದರೂ ಅವರಲ್ಲಿ ಸಂಭೋಗದ ಭಯ ಇರುತ್ತದೆ. ಲೈಂಗಿಕ ಕ್ರಿಯೆಯಿಂದ ಅಸಹಜವಾಗಿ ಆಗುವ ಸಣ್ಣ ನೋವು, ಆಯಾಸಕ್ಕೇ ದೊಡ್ಡ ಮಟ್ಟದಲ್ಲಿ ಹೆದರುವ ಮನಸ್ಥಿತಿ ಇದು. ಇಂತಹ ಅಸಹಜ ಮನಸ್ಥಿತಿಯನ್ನು ಅಥವಾ ಭಯವನ್ನು ಕೊಯಿಟೊಫೋಬಿಯಾ ಎಂದು ಹೇಳಲಾಗುತ್ತದೆ.

ಇನ್ನು, ಕೊನೆಯದಾಗಿ ಈ ಭಯದ ಬಗ್ಗೆ ನಿಮಗೆ ಗೊತ್ತಾದರೇ, ನೀವು ಬಿದ್ದು ಬಿದ್ದು ನಗ್ತೀರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹೌದು, ಈ ಭಯ ಇರುವವರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ   ಗರ್ಭಧಾರಣೆಯ ಭಯ ಅಥವಾ ಹೆರಿಗೆ ನೋವಿನ ಭಯ ಇರುತ್ತದೆ. ಸೆಕ್ಸ್ ಆಸಕ್ತಿಯ ಇರುವವರು ಈ ಭಯದಿಂದ ಸೆಕ್ಸ್ ನಲ್ಲಿ ತೊಡಗುವುದಕ್ಕೆ ಇಷ್ಟ ಪಡುವುದಿಲ್ಲ. ಈ ಭಯವನ್ನು ಟೊಕೊಫೋಬಿಯಾ  ಎಂದು ಕರೆಯಲಾಗುತ್ತದೆ.

ಹೀಗೆ… ದೇಹಕ್ಕೆ ಸೆಕ್ಸ್ ಬೇಕಿದ್ದರೂ ಕೂಡ ಇಂತಹ ಸಣ್ಣ ಸಣ್ಣ ಭಯದಿಂದ ಸೆಕ್ಸ್ ನಿಂದ ದೂರ ಉಳಿಯುವ ಮನಸ್ಥಿತಿ ಅನೇಕ ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆ ನಿಮ್ಮಲ್ಲಿರುವುದು ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.