Advertisement

ಕುಂದಾಪುರದಲ್ಲಿ ಎರ್ನಾಕುಲಂ –ಪುಣೆ ಸೂಪರ್‌ ಫಾಸ್ಟ್‌ ರೈಲಿಗೆ ನಿಲುಗಡೆ; ಸ್ವಾಗತ

11:21 PM Oct 22, 2019 | mahesh |

ಕುಂದಾಪುರ: ಎರ್ನಾಕುಲಂ-ಪುಣೆ ಸೂಪರ್‌ಫಾಸ್ಟ್‌ ರೈಲಿಗೆ ಮಂಗಳವಾರದಿಂದ ಕುಂದಾಪುರ (ಮೂಡ್ಲಕಟ್ಟೆ)ದ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿದ್ದು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವತಿಯಿಂದ ಸ್ವಾಗತ ಕೋರಲಾಯಿತು.

Advertisement

ಜೈ ಭಾರ್ಗವ ಬಳಗದ ಮನವಿ ಮೇರೆಗೆ ಸಂಸದ  ಪ್ರತಾಪ್‌ಸಿಂಹ ರೈಲ್ವೇ ಸಚಿವರಲ್ಲಿ ಮಾತನಾಡಿ ರೈಲು ನಿಲುಗಡೆಗೆ ಸಹಕರಿಸಿದ್ದರು. ಎರಡು ದಿನಗಳ ಹಿಂದಷ್ಟೇ ಅಂದರೆ ಅ. 20ರಂದು ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಪ್ರಯತ್ನದಿಂದಾಗಿ ಕುಂದಾಪುರದಲ್ಲಿ ಕೊಚ್ಚುವೇಲಿ-ಗಂಗಾನಗರ ರೈಲಿಗೆ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ, ಜೈ ಭಾರ್ಗವ ಬಳಗದ ಸದಸ್ಯರು, ಕೋಟೇಶ್ವರ ರೋಟರಿ, ರೋಟರ್ಯಾಕ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ರೈಲು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಎರ್ನಾಕುಲಂನಿಂದ ಮಂಗಳೂರು – ಉಡುಪಿ – ಕುಂದಾಪುರ- ಕಾರವಾರ – ಮಡಗಾಂವ್‌- ಪನ್ವೇಲ್‌ ಮಾರ್ಗವಾಗಿ ಪುಣೆಗೆ ಹಾಗೂ ಸೋಮವಾರ ಮತ್ತು ಶುಕ್ರವಾರ ಪುಣೆಯಿಂದ ಎರ್ನಾಕುಲಂಗೆ ಸಂಚರಿಸುತ್ತದೆ. ಇದರಿಂದ ಕೇರಳದಿಂದ ಕೊಲ್ಲೂರು, ಕುಂದಾಪುರದಿಂದ ಕೇರಳ, ಮಹಾರಾಷ್ಟ್ರ, ಗೋವಾಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next