Advertisement
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾ| ಎಸ್. ಆರ್. ಮಾಣಿಕ್ಯ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಹಾಗೂ ಕಾನೂನುಬದ್ಧವಾಗಿ ಮಹಿಳೆಯರು ಪಡೆಯಬಹುದಾದ ಹಕ್ಕುಗಳು, ಲಿಂಗಸಮಾನತೆ, ಲೈಂಗಿಕ ದೌರ್ಜನ್ಯ, ಭ್ರೂಣಹತ್ಯೆ, ವರದಕ್ಷಿಣೆಯಂತಹ ಸಮಸ್ಯೆಗಳಿಗೆ ಯಾವ ರೀತಿಯ ಕಾನೂನು ನೆರವು ಪಡೆಯಬಹುದೆಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ಡಿ.ಟಿ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸುರಕ್ಷಾ ಕೋಶದ ಸಂಯೋಜಕಿ ಪ್ರೊ|
ಜಗದೇವಿ ಗುಡ್ಡಾ ಸ್ವಾಗತಿಸಿದರು. ಕುಮಾರಿ ಅಂಬಿಕಾ ನಿರೂಪಿಸಿದರು, ಕುಮಾರಿ ಸುನಿತಾ ಪ್ರಾರ್ಥಿಸಿದರು, ಕುಮಾರಿ ಸುಪ್ರಿಯಾ ಪಾಟೀಲ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ| ಎಸ್.ಟಿ. ಸುಲೆಪೇಟಕರ್, ಡಾ| ಬಿ.ಡಿ.
ಮಾಲಿಪಾಟೀಲ, ಡಾ| ಎಸ್.ಎ. ಮಾಲಿಪಾಟೀಲ, ಡಾ| ಚಿತ್ರಲೇಖಾ ಆಲೂರ, ಡಾ| ಶೈಲಾ ಹಿರೇಮಠ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.