Advertisement

ಸಮಾನತೆ ಆಶಯವಾಗಬೇಕು: ನ್ಯಾ. ಜೋಸೆಫ್ ಕುರಿಯನ್‌

11:09 AM Sep 17, 2017 | Team Udayavani |

ಬೆಂಗಳೂರು: ಪ್ರತಿಯೊಬ್ಬ ನಾಗರಿಕನೂ ಸಮಾನತೆ ಮತ್ತು ಘನತೆಯಿಂದ ಬದುಕಲು ಅವಕಾಶ ಸಿಗಬೇಕು ಎನ್ನುವುದು ಕಾನೂನು ಕಲಿಕೆಯ ಆಶಯವಾಗಿರಬೇಕು ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಜೋಸೆಫ್ ಕುರಿಯನ್‌ ಅಭಿಪ್ರಾಯಪಟ್ಟರು.

Advertisement

ಸೇಂಟ್‌ ಜೊಸೇಫ್ ಕಾಲೇಜಿನಲ್ಲಿ ಶನಿವಾರ ನೂತನ ಕಾನೂನು ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಕಲಿಕೆಯ ಉದ್ದೇಶ ವೃತ್ತಿಗೆ ಸೀಮಿತವಾಗದೇ ಒಬ್ಬ ಜವಾಬ್ದಾರಿಯುತ ನಾಗರಿಕನ್ನಾಗಿಸಬೇಕು. ಪ್ರತಿ ಪ್ರಜೆಯೂ ತಾರತಮ್ಯ ರಹಿತ ಮತ್ತು ಹಕ್ಕಿನ ಬದುಕು ನಡೆಸುವಂತಾಗುವುದೇ ಕಾನೂನು ಮತ್ತು ನ್ಯಾಯದ ನಿಜವಾದ ಆಶಯ ಎಂದು ಹೇಳಿದರು.

ಅವ್ಯವಸ್ಥೆ ಸರಿಪಡಿಸಿದ ಮಾತ್ರಕ್ಕೆ ಕಾನೂನಿನ ಆಶಯ ಈಡೇರುವುದಿಲ್ಲ. ಅವ್ಯವಸ್ಥೆ ಹೋಗಿ ಸುವ್ಯವಸ್ಥೆ ಬಂದಾಗ ನ್ಯಾಯ ಸ್ಥಾಪಿಸಲ್ಪಡುತ್ತದೆ. ಈ ಅಂಶಗಳನ್ನು ಕಾನೂನು ಪದವಿಧರರು ಸದಾ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್ಚ್‌ ಬಿಷಪ್‌ ಬರ್ನಾಡ್‌ ಮೊರಾಸ್‌, ಶಾಸಕ ಎನ್‌.ಎ. ಹ್ಯಾರಿಸ್‌, ಕರ್ನಾಟಕ ರಾಜ್ಯ ಕಾನೂನು ವಿವಿ ಹಂಗಾಮಿ ಕುಲಪತಿ ಡಾ. ಚಿದಾನಂದರೆಡ್ಡಿ, ಹಿರಿಯ ವಕೀಲರಾದ ಜಯಕುಮಾರ್‌ ಎಸ್‌. ಪಾಟೀಲ್‌, ವೈ.ಆರ್‌. ಸದಾಶಿವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next