Advertisement

ಸಮಾನತೆ ಬದುಕಿಗೆ ಸಂವಿಧಾನ ಸೃಷ್ಟಿ

04:54 PM Sep 23, 2018 | Team Udayavani |

ಕಲಬುರಗಿ: ಗಂಡು-ಹೆಣ್ಣನ್ನು ಸಮಾನವಾಗಿ ನೋಡುವುದೇ ಸಂವಿಧಾನವಾಗಿದ್ದು, ಸಮಾನತೆ ಬದುಕು ಅನುಭವಿಸಲಿಕ್ಕೆ ಸಂವಿಧಾನ ಸೃಷ್ಟಿಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ| ಶಿವಗಂಗಾ ರುಮ್ಮಾ ತಿಳಿಸಿದರು.

Advertisement

ನಗರದ ಗಂಜ್‌ನಲ್ಲಿರುವ ಶರಬಯ್ಯ ಗಾದಾ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ-241 ಕವಿಕಾವ್ಯ ವಿಚಾರ ವೇದಿಕೆ ಏರ್ಪಡಿಸಿದ್ದ “ವಚನ ಸಾಹಿತ್ಯ ಮತ್ತು ಸಂವಿಧಾನದ ಆಶಯಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಹಕ್ಕುಗಳ ಪರಿಕಲ್ಪನೆಯೇ ಸಂವಿಧಾನ ಆಶಯದ ಒಂದು ಭಾಗವಾಗಿದೆ. ದೊಡ್ಡ ರಾಷ್ಟ್ರದಲ್ಲಿ ಸಂವಿಧಾನ ಬಹುತ್ವ ಹೊಂದಿದೆ. ಪ್ರಾದೇಶಿಕ ಭಿನ್ನತೆಗಳು ಕಂಡ ರಾಷ್ಟ್ರ ನಮ್ಮದು. ಸಂವಿಧಾನ ಆಶಯಗಳು ಶರಣರು ವಿಶ್ಲೇಷಿಸಿದ್ದನ್ನು ಅವರು ಪ್ರಸ್ತಾಪಿಸಿದರು. ಕಲ್ಯಾಣ ರಾಜ್ಯದ ಮೇಲೆ ಸಂವಿಧಾನ ನಿಂತಿದೆ. ಸಂವಿಧಾನ ಅಪ್ಪಿಕೊಳ್ಳುವುದಕ್ಕಿಂತ ಅದನ್ನು ವಿಶ್ಲೇಷಿಸುವುದು ಅಗತ್ಯವಾಗಿದೆ ಎಂದರು. 

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ| ಅಪ್ಪುಗೇರೆ ಸೋಮಶೇಖರ ಅವರು “ವಚನ ಸಾಹಿತ್ಯ ಮತ್ತು ಸಂವಿಧಾನದ ಆಶಯಗಳು’ ಕುರಿತ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಂವಿಧಾನದ ಹಿನ್ನೆಲೆಯಲ್ಲಿ ತಾತ್ವಿಕ ಚಿಂತನೆ, ವಿಮರ್ಶೆ ಮಾಡುತ್ತಿಲ್ಲ ಎನ್ನುವ ಕೊರಗು ಇದೆ. ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ವಿಚಾರ ಮಾಡುವುದು
ಅಗತ್ಯವಾಗಿದೆ. ಕುಟುಂಬವನ್ನು ವೈಚಾರಿಕವಾಗಿ ಕಟ್ಟಬಲ್ಲ ಶಕ್ತಿ ಮಹಿಳೆಯರಲ್ಲಿದೆ ಎಂದರು.

ಭಾರತದ ಸಮಾಜ ಚರಿತ್ರೆ ಕಾಲದ ಕನಿಷ್ಠ ತಿಳಿವಳಿಕೆ ಹೊಂದಿದ್ದರೆ ವಚನ ಚಳವಳಿ ಅರ್ಥೈಸಿಕೊಳ್ಳುವುದು ಮಹಿಳೆಯರಲ್ಲಿ ಸಾಧ್ಯವಾಗಲಿದೆ. ಇತಿಹಾಸ ಕಟ್ಟುವ ಕಾರ್ಯಕ್ಕೆ ಇತಿಹಾಸ ಓದಬೇಕು. ಹಿರಿಯರ ವಿಚಾರಗಳಿಗೆ ವಿಮರ್ಶೆ ಮಾಡಿ ಎನ್ನುವ ಬುದ್ಧನ ಸಂದೇಶವಿದೆ. ವಚನ ಚಳವಳಿಗೆ ಬುದ್ಧನ ಚಿಂತನೆಗಳು ಪ್ರೇರಣೆಯಾಗಿವೆ ಎಂದರು.

Advertisement

ನಗರೇಶ್ವರ ವೆಲ್‌ಫೇರ್‌ ಸೊಸೈಟಿ ಕಾರ್ಯದರ್ಶಿ ರವೀಂದ್ರ ಮುಕ್ಕಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿಯಿಂದ ಪ್ರತಿಭೆ ಅಳೆಯುವುದು ಸಲ್ಲ. ಶೈಕ್ಷಣಿಕ, ಉದ್ಯೋಗ, ಆರೋಗ್ಯದ ದೃಷ್ಟಿಯಿಂದ ಜಾತಿಯನ್ನು ಬೆಂಬಲವಾಗಿಟ್ಟುಕೊಂಡು ಬೆಳೆಯಲು ಸಾಧ್ಯವಿಲ್ಲ. ಪ್ರತಿಭೆ ಮತ್ತು ಮಾನವೀಯ ನೆಲೆಯಲ್ಲಿ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಪೇಂದ್ರ ಪಾಟೀಲ, ಪತ್ರಕರ್ತ ಸಂಗಮನಾಥ ರೇವತಗಾಂವ್‌ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ವಿಕ್ರಮ ವಿಸಾಜಿ ಮಾತನಾಡಿದರು. ಕು.ರುಕ್ಮಿಣಿ ಪ್ರಾರ್ಥನೆ ಹಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿನಿಧಿ ಡಾ| ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿದರು, ಶಿಕ್ಷಕಿ ವಾಸವಿ ಗುಪ್ತ ನಿರೂಪಿಸಿದರು. ಶರಬಯ್ಯ ಗಾದಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಂಜನಾ ಬಿರಾದಾರ ವಂದಿಸಿದರು. ಖೀರೂಸಿಂಗ ರಾಠೊಡ, ಬಿ.ಎಸ್‌. ರುದ್ರಾಕ್ಷಿ, ಎಂ.ಎಚ್‌. ಶಂಕರ, ವತ್ಸಲಾ, ಭಾಗ್ಯಶ್ರೀ, ಸರಸ್ವತಿ, ಅನಿತಾ, ರೂಪಾ, ಪರಶುರಾಮ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next