Advertisement

ಇಪಿಎಫ್ ಕೊಡುಗೆ ಶೇ.10ಕ್ಕೆ ಇಳಿಯಲ್ಲ 

12:18 PM May 29, 2017 | Team Udayavani |

ಪುಣೆ: ಸಾಮಾಜಿಕ ಭದ್ರತಾ ಯೋಜನೆಯಡಿ ಉದ್ಯೋಗಿಗಳು ಮತ್ತು ಉದ್ಯೋಗದಾತರು ನೀಡುವ ಕೊಡುಗೆಯನ್ನು ಶೇ.12ರಿಂದ ಶೇ.10ಕ್ಕಿಳಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಶನಿವಾರ ನಡೆದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಇದಕ್ಕೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಸ್ತಾವವನ್ನು ಕೈಬಿಡಲಾಯಿತು. ನೌಕರರ ಭವಿಷ್ಯ ನಿಧಿ, ಪಿಂಚಣಿ ಯೋಜನೆ ಮತ್ತು ಠೇವಣಿ ಆಧಾರಿತ ವಿಮೆ ಯೋಜನೆಗಳಿಗೆ ನೀಡುವ ಮೊತ್ತವನ್ನು ಈಗಿರುವ ಶೇ.12ರಿಂದ ಶೇ.10ಕ್ಕೆ ಇಳಿಸಬೇಕು ಎಂಬ ಆಗ್ರಹಕ್ಕೆ ನೌಕರರ ಒಕ್ಕೂಟ ವಿರೋಧ ವ್ಯಕ್ತಪಡಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next