ನವದೆಹಲಿ: ಉದ್ಯೋಗರಹಿತನಾದ ವ್ಯಕ್ತಿ 30 ದಿನಗಳ ಬಳಿಕ ಭವಿಷ್ಯ ನಿಧಿಯಿಂದ ಶೇ.75ರಷ್ಟು ಮೊತ್ತವನ್ನು ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸುವ ಪ್ರಸ್ತಾಪಕ್ಕೆ ಭವಿಷ್ಯ ನಿಧಿ ಮಂಡಳಿ ಅನುಮತಿ ನೀಡಿದೆ. ಬಾಕಿ ಉಳಿದ ಶೇ.25ರಷ್ಟು ಮೊತ್ತವನ್ನು ಎರಡು ತಿಂಗಳ ಬಳಿಕ ಅಂತಿಮ
ಲೆಕ್ಕಾಚಾರದ ನಂತರ ಪಡೆಯಲೂ ಅವಕಾಶ ನೀಡಲಾಗಿದೆ.
ಮಂಗಳವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ. ಸದ್ಯದ ನಿಯಮ ಪ್ರಕಾರ, ಉದ್ಯೋಗ ತೊರೆದ 2 ತಿಂಗಳ ಬಳಿಕವೇ ಭವಿಷ್ಯ ನಿಧಿ ಮೊತ್ತವನ್ನು ವಿಥ್‌ಡ್ರಾ ಮಾಡಲು ಅವಕಾಶ ಇದೆ.
ಹೊಸ ನಿಯಮದಂತೆ, ಖಾತೆದಾರರಿಗೆ ಭವಿಷ್ಯ ನಿಧಿ ಮಂಡಳಿಯಲ್ಲಿ ಖಾತೆ ಮುಂದುವರಿಸಲೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಹೊಸತಾಗಿ ಉದ್ಯೋಗ ಪಡೆದುಕೊಂಡ ಬಳಿಕ ಅದು ನೆರವಾಗಲಿದೆ.