Advertisement
ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಇದ್ದ ಮಾರ್ಚ್ 3ರ ಗಡುವನ್ನು 2 ತಿಂಗಳ ಕಾಲ ವಿಸ್ತರಿಸ ಲಾಗಿದ್ದು, ಮೇ 3ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಅಧಿಕ ಪಿಂಚಣಿಗೆ ಪಡೆಯಬೇಕೆಂದರೆ ಅರ್ಹ ಚಂದಾದಾರರು ತಮ್ಮ ಉದ್ಯೋಗದಾತರೊಂದಿಗೆ ಜಂಟಿಯಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಪ್ರತಿಯೊಂದು ಅರ್ಜಿಯನ್ನೂ ನೋಂದಣಿ ಮಾಡಿಕೊಂಡು, ಡಿಜಿಟಲ್ ರೂಪದಲ್ಲಿ ದಾಖಲೀಕರಣ ಮಾಡಿ, ರಶೀದಿಯನ್ನು ಅರ್ಜಿದಾರನಿಗೆ ನೀಡಲಾಗುತ್ತದೆ. ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಅಧಿ ಕಾರಿ ಗಳು ಪ್ರತಿ ಅರ್ಜಿ ಯನ್ನೂ ಪರಿಶೀಲಿ ಸುತ್ತಾರೆ. ಅನಂತರ ತಮ್ಮ ನಿರ್ಧಾರದ ಕುರಿತು ಅರ್ಜಿದಾರರಿಗೆ ಇಮೇಲ್, ಅಂಚೆ ಅಥವಾ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡುತ್ತಾರೆ.
Related Articles
2014ರ ಸೆ.1ಕ್ಕೂ ಮೊದಲು ಇಪಿಎಫ್ಒ ಚಂದಾದಾರ ರಾಗಿದ್ದ ಮತ್ತು ಈ ದಿನಾಂಕದಂದು ಅಥವಾ ಅನಂತರವೂ ಅದರ ಸದಸ್ಯರಾಗಿ ಉಳಿದ ಉದ್ಯೋಗಿಗಳು.
Advertisement
5 ಸಾವಿರ ರೂ. ಅಥವಾ 6,500 ರೂ.ಗಳ ವೇತನ ಮಿತಿಯನ್ನು ಮೀರಿದ ವರಮಾನಕ್ಕೆ ಕೊಡುಗೆ (Contribute) ನೀಡಿರುವ ಚಂದಾದಾರರು ಮತ್ತು ಉದ್ಯೋಗದಾತರು.
ಈ ಹಿಂದೆ ಇಪಿಎಸ್ ಸದಸ್ಯರಾಗಿದ್ದಾಗ “ಜಂಟಿ ಆಯ್ಕೆ’ಯನ್ನು ಬಳಸದೇ ಇದ್ದಂಥ ಉದ್ಯೋಗಿಗಳು ಮತ್ತು ಉದ್ಯೋಗದಾತರು.
ಲೆಕ್ಕಾಚಾರ ಹೇಗೆ?“(ಪಿಂಚಣಿಯುಕ್ತ ವೇತನ x ಪಿಂಚಣಿಯುಕ್ತ ಸೇವಾವಧಿ)/70′ ಎಂಬ ವಿಧಾನದ ಮೂಲಕ ಇಪಿಎಸ್ ಪಿಂಚಣಿ ಲೆಕ್ಕಾಚಾರ ಮಾಡಲಾಗುತ್ತದೆ. ನೀವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸದೇ ಇದ್ದರೆ, ನಿವೃತ್ತಿಯ ವೇಳೆ ಇದ್ದ ಸರಾಸರಿ 60 ತಿಂಗಳ ಪಿಂಚಣಿಯುಕ್ತ ವೇತನದ ಮೇಲೆ ಪಿಂಚಣಿಯನ್ನು ಲೆಕ್ಕ ಹಾಕಲಾಗುತ್ತದೆ. ಉದಾ- ನೀವು 25ನೇ ವಯಸ್ಸಿನಲ್ಲಿ ಇಪಿಎಸ್‌ಗೆ ಸೇರ್ಪಡೆಯಾಗಿ, 58ನೇ ವಯಸ್ಸಿನಲ್ಲಿ ನಿವೃತ್ತರಾದರೆ, ಪ್ರತೀ ತಿಂಗಳು 7,071ರೂ. ಪಿಂಚಣಿ ಪಡೆಯಲು ಅರ್ಹರಾಗುತ್ತೀರಿ (15,000 ರೂ. x 33/70). ಇನ್ನು ನೀವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಿದರೆ, ನಿಮ್ಮ ನೈಜ ಪಿಂಚಣಿಯುಕ್ತ ವೇತನ ಮತ್ತು ತುಟ್ಟಿ ಭತ್ತೆಯ ಆಧಾರದಲ್ಲಿ ಪಿಂಚಣಿಯನ್ನು ಲೆಕ್ಕ ಹಾಕಲಾಗುತ್ತದೆ. ಉದಾ- ಕಳೆದ 60 ತಿಂಗಳಲ್ಲಿ ನಿಮ್ಮ ಸರಾಸರಿ ಪಿಂಚಣಿಯುಕ್ತ ವೇತನ (ಮೂಲ ವೇತನ+ಡಿಎ) ನಿವೃತ್ತಿಯ ವೇಳೆ 40,000 ರೂ.ಗಳಾಗಿದ್ದರೆ, ಆಗ ನಿಮಗೆ 18,857 ರೂ. ಮಾಸಿಕ ಪಿಂಚಣಿ ದೊರೆಯಲಿದೆ (40,000 ರೂ. x 33/70).