Advertisement
ಇದರಿಂದ 700ಕ್ಕೂ ಹೆಚ್ಚು ಮಂದಿ ಅರ್ಹ ಫಲಾನುಭವಿಗಳು ತಿಂಗಳ ಪಿಂಚಣಿಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಸಾಮಾಜಿಕ ಭದ್ರತಾ ಪಿಂಚಣಿಗಳ ಫಲಾನುಭವಿಗಳ ಪಟ್ಟಿಯಲ್ಲಿ ಆಧಾರ್ ಪುನರಾವರ್ತನೆಯನ್ನು ಡಿ- ಡ್ನೂಪ್ಲಿಕೇಶನ್ ತಡೆಯಲಿದೆ. ಇದರಿಂದ ಒಂದೇ ಆಧಾರ್ ಸಂಪರ್ಕ ಹೊಂದಿರುವ ಒಂದಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಒಂದು ಮನೆಯಲ್ಲಿ ಇಬ್ಬರು ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳಿದ್ದರೆ, ಪಿಂಚಣಿ ಪಡೆಯಲು ತಾಯಿ ಅಥವಾ ತಂದೆಯ ಒಂದೇ ಆಧಾರ್ ಕಾರ್ಡನ್ನು ಇಬ್ಬರ ಪಿಂಚಣಿ ಪಾವತಿಗೂ ಲಿಂಕ್ ಮಾಡಿದಾಗ ಪಾವತಿಯ ಆಧಾರ್ ಕಾರ್ಡ್ ಒಂದೇ ಎಂದು ತಂತ್ರಾಂಶ ಪರಿಗಣಿಸುತ್ತದೆ. ಇದರಿಂದ ಅರ್ಹರಾಗಿದ್ದರೂ ಒಬ್ಬರ ಪಿಂಚಣಿ ಸ್ಥಗಿತಗೊಳ್ಳುತ್ತದೆ. ತಂದೆ-ತಾಯಿ ಇಬ್ಬರೂ ಇದ್ದಲ್ಲಿ ಪ್ರತ್ಯೇಕ ಆಧಾರ್ ಸಂಪರ್ಕ ಕಲ್ಪಿಸಬಹುದು. ತಾಯಿ ಮಾತ್ರ ಇದ್ದಲ್ಲಿ ಒಂದೇ ಆಧಾರ್ ಲಿಂಕ್ ಮಾಡಿರುವುದು ಸಕ್ರಮ ಎಂಬುದಾಗಿ ಗ್ರಾಮ ಕರಣಿಕರು ವರದಿ ಸಲ್ಲಿಸಿದರೆ ಸಮಸ್ಯೆ ಬಗೆಹರಿಯಲಿದೆ. ಇತರ ಪಿಂಚಣಿಗಳಲ್ಲೂ ಫಲಾನುಭವಿಗಳು ಪಾವತಿ ಸ್ವೀಕೃತಿ ಪಡೆಯುವುದು ಸಾಧ್ಯವಿಲ್ಲದಾಗ ಅವರ ಪರವಾಗಿ ಸ್ವೀಕರಿಸುವವರ ಆಧಾರ್ ಇಬ್ಬರಿಗೆ ಸಂಪರ್ಕಗೊಂಡಿದ್ದಲ್ಲಿ ಒಬ್ಬರ ಪಿಂಚಣಿ ಸ್ಥಗಿತಗೊಳ್ಳುತ್ತದೆ.
Related Articles
Advertisement
ಪರಿಹಾರ ಹೇಗೆ?ಅರ್ಹ ಪ್ರಕರಣಗಳಲ್ಲಿ ಪಿಂಚಣಿ ಸ್ಥಗಿತಗೊಂಡ ಫಲಾನುಭವಿಗಳ ಮನೆಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುತ್ತಾರೆ. ಇವನ್ನು ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಿಸಿ ನಿರ್ದೇಶನಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಪರಿಷ್ಕರಿಸಿ ಅರ್ಹರಿಗೆ ಸೌಲಭ್ಯ ಮುಂದುವರಿಸಲಾಗುತ್ತದೆ. ವಿಳಂಬದಿಂದ ಪರದಾಟ
ಪಿಂಚಣಿ ಸ್ಥಗಿತಗೊಂಡು ಸುಮಾರು 6 ತಿಂಗಳಿಂದ ಫಲಾನುಭವಿಗಳು ಪರದಾಡುವಂತಾಗಿದೆ. ಪಿಂಚಣಿಗೆ ಆಧಾರ್ ಸಂಪರ್ಕ ಕಲ್ಪಿಸಿದ ಬಳಿಕ ಡಿ-ಡ್ನೂಪ್ಲಿಕೇಶನ್ ಪ್ರಕ್ರಿಯೆ ಆರಂಭಿಸಲಾಗಿದೆ. ಆಧಾರ್ ಲಿಂಕ್ ಇಲ್ಲದೆ ಸ್ಥಗಿತಗೊಂಡಿದ್ದ ಪಿಂಚಣಿಗಳನ್ನು ಟ್ರೆಜರಿ ಮಟ್ಟದಲ್ಲಿ ಆಧಾರ್ ಸೇರಿಸಿ ಸಕ್ರಿಯಗೊಳಿಸಲಾಗಿತ್ತು. ಆಧಾರ್ ಡ್ನೂಪ್ಲಿಕೇಶನ್‌ನಿಂದ ಪಿಂಚಣಿ ತಾತ್ಕಾಲಿಕ ಸ್ಥಗಿತ ಗೊಂಡಿದ್ದು, ಹಂತ ಹಂತವಾಗಿ ಪ್ರಸ್ತಾವನೆ ಗಳನ್ನು ಬೆಂಗಳೂರಿನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಕಳುಹಿಸಲಾಗುತ್ತಿದೆ. ಎಲ್ಲ ಪ್ರಕರಣಗಳ ಭೌತಿಕ ಪರಿಶೀಲನೆ ಪೂರ್ಣಗೊಂಡಿದೆ.
-ಕೆ. ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ