Advertisement
ಕೇಂದ್ರ ಸರಕಾರ ಮೇ 13ರಂದು ಇಪಿಎಫ್, ಎಂಪಿ ಕಾಯ್ದೆ 1952ರ ವ್ಯಾಪ್ತಿಯ ಎಲ್ಲ ವರ್ಗದ ಸಂಸ್ಥೆಗಳಿಗೆ ಮೇ, ಜೂನ್, ಜುಲೈ ತಿಂಗಳ ಶಾಸನ ಬದ್ಧ ದರಗಳನ್ನು ಶೇ. 12ರಿಂದ 10ಕ್ಕೆ ಇಳಿಸಿದೆ. ಅಧಿಸೂಚನೆ ಇಪಿಎಫ್‌ಒ ವೆಬ್‌ಸೈಟ್‌ನ ಮುಖಪುಟದಲ್ಲಿ ಖಅಆ ಕೋವಿಡ್-19 ಅಡಿಯಲ್ಲಿ ಲಭ್ಯವಿದೆ. ಮೇಲಿನ ದರ ಕಡಿತವು ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮ ಗಳಿಗೆ ಅಥವಾ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಅಥವಾ ನಿಯಂತ್ರಿಸಲ್ಪಡುವ ಯಾವುದೇ ಸಂಸ್ಥೆ ಗಳಿಗೆ ಅನ್ವಯಿಸುವುದಿಲ್ಲ.
Related Articles
Advertisement
ಕೈಗಾರಿಕಾ ವಿವಾದ ಅಧಿನಿಯಮ 1947ರ ಕಾಯಿದೆಯನ್ವಯ ಉದ್ಯೋಗಿ ಗಳಾಗಿದ್ದು ನಿರುದ್ಯೋಗಿಗಳಾದರೆ ಮೊದಲ 12 ತಿಂಗಳು ಅವರ ವೇತನದ ಶೇ. 50, ಒಂದು ವೇಳೆ 12 ತಿಂಗಳ ಅನಂತರವೂ ಮತ್ತೆ ಉದ್ಯೋಗ ಪಡೆಯದಿದ್ದರೆ ಅನಂತರದ 12 ತಿಂಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ದೊರೆಯುತ್ತದೆ. ಒಂದು ವೇಳೆ ಸಂಸ್ಥೆ/ಕಾರ್ಖಾನೆಯ ಮುಚ್ಚುವಿಕೆ ಅಥವಾ ಕೆಲಸದಿಂದ ತೆಗೆದು ಹಾಕಿರುವುದನ್ನು ಹೊರತುಪಡಿಸಿ ನಿರುದ್ಯೋಗಿಗಳಾದರೆ 90 ದಿನಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ಪಡೆಯಲು ಅರ್ಹರಾಗಿರುತ್ತಾರೆ. ನೌಕರರು ಅಗತ್ಯ ದಾಖಲೆಗಳೊಂದಿಗೆ ಇಎಸ್‌ಐಸಿಯ ಕಚೇರಿಗಳನ್ನು ಸಂಪರ್ಕಿಸಬಹುದು.
ಉದ್ಯೋಗದಾತರಿಗೂ ವಿನಾಯಿತಿಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗದಾತರು ಇಎಸ್‌ಐಸಿಗೆ ಸಲ್ಲಿಸುವ ವಂತಿಗೆಯ ಅವಧಿಯನ್ನು ವಿಸ್ತರಿಸಿ ವಿನಾಯಿತಿ ನೀಡಲಾಗಿದೆ. 2019ರ ಅಕ್ಟೋಬರ್‌ನಿಂದ 2020ರ ಮಾರ್ಚ್‌ವರೆಗಿನ ವಂತಿಗೆ ಸಲ್ಲಿಸಲು ಮೇ 11 ಕೊನೆಯ ದಿನಾಂಕವಾಗಿತ್ತು. ಇದೀಗ ಅದನ್ನು ಜೂ. 11ರ ವರೆಗೆ ವಿಸ್ತರಿಸಲಾಗಿದೆ. ಅಂದರೆ ವಂತಿಗೆ ಸಲ್ಲಿಸಲು ಹೆಚ್ಚುವರಿಯಾಗಿ ಒಂದು ತಿಂಗಳ ಅವಧಿಯನ್ನು ನೀಡಲಾಗಿದೆ ಎಂದು ಇಎಸ್‌ಐಸಿ ಮಂಗಳೂರು ಉಪ ಪ್ರಾದೇಶಿಕ ಕಚೇರಿಯ ಪ್ರಭಾರ ನಿರ್ದೇಶಕ ಎಸ್. ಶಿವರಾಮಕೃಷ್ಣನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: ಇಪಿಎಫ್ ಉಡುಪಿ ಕಾರ್ಯಾಲಯ:
0824 2531172 / 2531174 ಇ-ಮೇಲ್ sro.udupi@epfndia.gov.in