Advertisement

“ಸಮುದಾಯ ಚಿಂತನೆಗೆ ಒಳಗಾದರೆ ಮಾತ್ರ ಪರಿಸರದ ಉಳಿವು’

01:14 AM Oct 15, 2019 | Sriram |

ಕಟಪಾಡಿ: ವ್ಯಕ್ತಿಗತ ಚಿಂತನೆಯು ಸಮೂಹಕ್ಕೆ ನಂತರ ಸಮುದಾಯಕ್ಕೆ ವರ್ಗಾವಣೆ ಗೊಂಡಾಗ ಸ್ವಸ್ಥ ಸಮಾಜ ನಿರ್ಮಾಣಗೊಂಡು ಪರಿಸರ ಸಂರಕ್ಷಣೆಯಂತಹ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ ಎಂದು ಕಟಪಾಡಿಯ ಪ್ರೇರಣಾ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷ ಸಂತೋಷ್‌ ಶೆಟ್ಟಿ ಕಟಪಾಡಿ ಅಭಿಪ್ರಾಯಪಟ್ಟರು.

Advertisement

ಅವರು ಅ.12ರಂದು ಕಟಪಾಡಿ ಎಸ್‌ವಿಎಸ್‌ ಸಭಾಂಗಣದಲ್ಲಿ ಪ್ರೇರಣಾ ಸಾಂಸ್ಕೃತಿಕ ಪ್ರತಿಷ್ಠಾನವು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್‌ ಉಡುಪಿ, ತಾಲೂಕು ಪಂಚಾಯತ್‌ ಉಡುಪಿ, ಹಾಗೂ ಬೆಂಗಳೂರಿನ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ತಳಮಟ್ಟದ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ನೀರು-ನೈರ್ಮಲ್ಯ ಮತ್ತು ಸಂರಕ್ಷಣೆಯ ಬಗ್ಗೆ ತರಬೇತಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಟಪಾಡಿ ರೋಟರಿ ಅಧ್ಯಕ್ಷ ಕೆ. ಉಮೇಶ್‌ ರಾವ್‌, ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಶೋಕ ರಾವ್‌, ಪ್ರೇರಣಾ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್‌ ಶೆಣೆ„, ನವೋದಯ ಸ್ವಸಹಾಯ ಸಂಘದ ಜಿಲ್ಲಾ ಮೇಲ್ವಿಚಾರಕ ಹರಿನಾಥ್‌ , ತಾಲ್ಲೂಕು ಸಂಘಟಕ ಚಂದ್ರಶೇಖರ್‌, ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಟಾರ್‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು 160ಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಬೆಂಗಳೂರಿನ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಟಾರ್‌ ನೀರಿನ ನೈರ್ಮಲ್ಯ ಮತ್ತು ಸಂರಕ್ಷಣೆಯ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಿದರು.

ಪ್ರೇರಣಾ ಸಾಂಸ್ಕೃತಿಕ ಪ್ರತಿಷ್ಠಾನದ ಕೋಶಾಧಿಕಾರಿ ಅಶೋಕ್‌ ಕೋಟ್ಯಾನ್‌ ಸ್ವಾಗತಿಸಿದರು. ಸಂಚಾಲಕ ರಾಘವೇಂದ್ರ ರಾವ್‌ ಕಟಪಾಡಿ ವಂದಿಸಿದರು. ಕಾರ್ಯದರ್ಶಿ ಕೃಷ್ಣ ಕುಮಾರ್‌ ರಾವ್‌ ಮಟ್ಟು ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next