Advertisement

ಪರಿಸರ ರಕ್ಷಣೆ ಜನಜಾಗೃತಿ ಮೂಡಿಸಿ

11:11 AM Dec 23, 2019 | Suhan S |

ಕಲಘಟಗಿ: ಮಕ್ಕಳು ಪರಿಸರದಲ್ಲಿರುವ ಜೀವ ವೈವಿಧ್ಯತೆಯ ಬಗ್ಗೆ ಅರಿತು ಪರಿಸರ ರಕ್ಷಣೆ ಮಾಡುವುದರ ಜತೆಗೆ ಜನಜಾಗೃತಿ ಮೂಡಿಸಬೇಕು ಎಂದು ತಾಲೂಕಾ ಅರಣ್ಯ ಇಲಾಖೆಯ ಡಿವಾಯ್‌ ಆರ್‌ಎಫ್‌ಒ ಈರಣ್ಣ ಹಳ್ಯಾಳ ಹೇಳಿದರು.

Advertisement

ಪ್ರಾದೇಶಿಕ ಅರಣ್ಯ ವಿಭಾಗ ಧಾರವಾಡ, ಪ್ರಾದೇಶಿಕ ಅರಣ್ಯ ವಲಯ ಕಲಘಟಗಿ, ಸರಕಾರಿ ಪ್ರೌಢಶಾಲೆ ದೇವಿಕೊಪ್ಪ ಆಶ್ರಯದಲ್ಲಿ ದೇವಿಕೊಪ್ಪ ಗ್ರಾಮದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ “ಚಿಣ್ಣರ ವನ ದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಿಸರ್ಗ ದೇವತೆಯ ಮಡಿಲಲ್ಲಿ ಕೋಟಿ ಜೀವರಾಶಿಗಳು ತಮ್ಮ ಬೆಳವಣಿಗೆಯನ್ನು ಕಾಣುತ್ತಿದ್ದು, ಅವುಗಳಲ್ಲಿ ಮನುಜ ಕುಲವು ಒಂದಾಗಿದೆ. ಸರ್ವ ರೋಗ ಗುಣಪಡಿಸುವ ಸಾಮರ್ಥ್ಯ ಪರಿಸರದಲ್ಲೇ ಇದ್ದು ಪರಿಸರದ ಸದುಪಯೋಗ ಪಡೆಯುವಲ್ಲಿ ಮುಂದಾಗಬೇಕು ಎಂದರು.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ಸುದೀಪ ಲಮಾಣಿ, ಗೌರಮ್ಮ ಸಾಲಿಮಠ, ಕಾರ್ತಿಕ ಹರಿಜನ ಅವರನ್ನು ಬಹುಮಾನ ವಿತರಿಸಲಾಯಿತು. ಚಿಣ್ಣರ ವನ ದರ್ಶನ ಕಾರ್ಯಕ್ರಮದಲ್ಲಿ ಕುಳಗಿ ಪಾಕೃತಿಕ ಶಿಬಿರ, ಜೋಯಿಡಾದ ಬರೋಡಾ ಗಸ್ತಿನಲ್ಲಿ ಚಾರಣ, ಸಾಲು ಮರದ ತಿಮ್ಮಕ್ಕನ ಉದ್ಯಾನವನ, ಬಟರ್‌ ಪ್ಲೈ ಪಾರ್ಕ್‌ನಲ್ಲಿನ ಸುಮಾರು 65 ಪ್ರಬೇಧಗಳ ಬಗ್ಗೆ ಡಿವಾಯ್‌ಆರ್‌ಎಫ್‌ಒ ಸಂತೋಷ ಮಕ್ಕಳಿಗೆ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಚೆನ್ನವ್ವ ಆಲದಮರದ, ತಾಪಂ ಸದಸ್ಯ ಬಸವರಾಜ ಬಾವುಕರ, ಎಸ್‌ಡಿಎಂಸಿ ಉಪಾಧ್ಯಕ್ಷ ಹುಲೆಪ್ಪ ಭೋವಿ, ಶಾಂತಲಿಂಗ ಬೇರುಡಗಿ, ಶಂಕ್ರಯ್ಯ ವಸ್ತ್ರಕಾಂತಿಮಠ, ಕಲಘಟಗಿ ಆರ್‌ಎಫ್‌ಒ ಶ್ರೀಕಾಂತ ಪಾಟೀಲ, ದಾಂಡೇಲಿ ವನ್ಯಜೀವಿ ಆರ್‌ ಎಫ್‌ಒ ಸಂತೋಷ ಚವ್ಹಾಣ, ರತ್ನಾ ಹೆಗಡೆ, ರಂಗನಾಥ ಎನ್‌ ವಾಲ್ಮೀಕಿ, ಎಸ್‌.ಜಿ ಗಾಣಗಿ, ಸಿಕಂದರ್‌ ಹೊಸಳ್ಳಿ, ಸರಸ್ವತಿ ತಗಡಿನಮನಿ, ವಿನಾಯಕ ಪಲ್ಲೇದ, ಯಲ್ಲಪ್ಪ ಧಾರವಾಡ ಇತರರು ಪಾಲ್ಗೊಂಡಿದ್ದರು. ಎಸ್‌.ಜಿ ಗಾಣಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next