Advertisement

ಸ್ವಚ್ಛತೆ ಕಾಪಾಡುವುದರಿಂದ ಪರಿಸರ ರಕ್ಷಣೆ ಸಾಧ್ಯ

06:00 PM Jun 09, 2022 | Team Udayavani |

ಹೊಳೆನರಸೀಪುರ: ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಾರ್ವಜನಿಕರು,ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ತಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಸ್ವರ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ಬಾಲಕೃಷ್ಣ ನುಡಿದರು.

Advertisement

ಪಟ್ಟಣದಲ್ಲಿ ತಮ್ಮ ಸಂಸ್ಥೆ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಜಾಥಾ ನಡೆಸಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಟಿಕ್‌ ಬಳಸುವುದನ್ನು ಮತ್ತು ಎಸೆಯುವುದನ್ನು ನಿಯಂತ್ರಿ ಸುವುದರಿಂದ ಪರಿಸರ ಸಂರಕ್ಷಿಸಬಹುದು.

ಸ್ವಚ್ಛತೆಗೆ ಆದ್ಯತೆ ನೀಡಿ: ತಮ್ಮ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವತ್ಛತೆ ಕುರಿತು ಪರಿಸರವನ್ನು ಕಾಪಾಡಿ ಕೊಳ್ಳುವಂತೆ ಜಾಗೃತಿ ಮೂಡಿಸುವತ್ತ ನಿರಂತರವಾಗಿ ನಿರತರಾಗಬೇಕು. ಕೆಲವು ನಾಗರಿಕರು ಸುತ್ತ ಶೌಚಾಲಯವಿದ್ದರು ಸಹಾ ಶೌಚಾಲಯವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳದೇ ಬಯಲಿನಲ್ಲಿ ಮಲ ಮತ್ತು ಮೂತ್ರವನ್ನು ವಿಸರ್ಜನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಸ ವಿಲೆವಾರಿ ಸಮರ್ಪಕವಾಗಿಲ್ಲ: ತ್ಯಾಜ್ಯವನ್ನು ನಿಗ ಪಡಿಸಿದ ಸ್ಥಳದಲ್ಲಿ ವಿಲೇವಾರಿ ಮಾಡುವಲ್ಲಿ ವಿಫಲರಾಗಿರುವ ಕೆಲವರು ರಸ್ತೆ ಆಸುಪಾಸಿನಲ್ಲಿ ಸುರಿದು ಸ್ವತ್ಛತೆ ಕಾಪಾಡುವಲ್ಲಿ ವಿಫಲರಾಗಿರುವ ಪರಿ ಣಾಮ ಆ ರಸ್ತೆ ಮೂಲಕ ಸಾಗುವ ನೂರಾರು ವಿದ್ಯಾರ್ಥಿಗಳು, ದುರ್ವಾಸನೆ ನಡುವೆ ಶಾಲೆಗಳಿಗೆ ತೆರಳುವಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪರಿಸರ ದಿನಾ ಚರಣೆಯನ್ನು ತಾಲೂಕು ಮಟ್ಟದಲ್ಲಿ ಹಮ್ಮಿಕೊಂಡು ಜಾಥಾ ಕಾರ್ಯಕ್ರಮದಲ್ಲಿ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪಾಲ್ಗೊಂಡು ಪರಿಸರವನ್ನು ಕಾಪಾಡುವ ಕುರಿತು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ವಿಶೇಷವಾಗಿ ಕಾಳಜಿ ವಹಿಸಬೇಕು ಎಂದರು.

ಆರ್ಥಿಕ ನೆರವು ನೀಡಲು ಸಿದ್ಧ: ಈ ಕುರಿತು ಸರ್ಕಾರ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾದರೆ ನಮ್ಮ ಸಂಸ್ಥೆಯು ಸಹಾ ಆರ್ಥಿಕ ನೆರವು ನೀಡಲು ಮುಂದಾಗುವುದಾಗಿ ತಿಳಿಸಿದರು. ಸಾರ್ವಜನಿಕ ಸ್ಥಳಗಳು ಮತ್ತು ಎಲ್ಲೆಂದರಲ್ಲಿ ಉಗುಳುವ ವ್ಯವಸ್ಥೆಯಿಂದ ದೂರ ಸರಿಯಬೇಕು. ಇದರಿಂದ ರೋಗ ರುಜಿನಗಳು ಹರಡಲು ಕಾರಣ ವಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

ಹದಗೆಟ್ಟ ರಸ್ತೆ: ಪಟ್ಟಣದ ಕೆಲವು ರಸ್ತೆಗಳು ಅಭಿವೃದ್ಧಿ ಕಾಣದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಈ ಸಂಬಂಧ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ವಿಶೇಷವಾಗಿ ಗಮನ ಹರಿಸುವುದರ ಮೂಲಕ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಗುರುತಿಸಿ ಸುಸ್ಥಿತಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕೆಂದರು. ತಮ್ಮ ಸಂಸ್ಥೆ ವತಿಯಿಂದ ತೆರಳಿದ ಜಾಥಾ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next