Advertisement

ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಲಿ

06:44 AM Jun 21, 2020 | Lakshmi GovindaRaj |

ರಾಮನಗರ: ಇಲ್ಲಿನ ರೋಟರಿ ಸಿಲ್ಕ್ ಸಿಟಿ, ಬೆಂಗಳೂರಿನ ರೋಟರಿ ಉದ್ಯೋಗ್‌, ಸಮೃದ್ಧಿ ಟ್ರಸ್ಟ್‌, ಕೈ ಜೋಡಿಸಿ ಸಂಘಟನೆಗಳ ಸಂಯುಕ್ತವಾಗಿ ನಗರದ ಪೊಲೀಸ್‌ ಭವನದ ಆವರಣದಲ್ಲಿ ಸುಮಾರು 50 ಸಸಿ ನೆಡುವ ಕಾರ್ಯಕ್ರಮ  ನಡೆಯಿತು. ಪರಿಸರ ಕಾಳಜಿ ಇರಿಸಿ ಗೋ ಗ್ರೀನ್‌ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವ ಈ ತಂಡಗಳು ಪೊಲೀಸ್‌ ಭವನದ ಆವರಣದಲ್ಲಿ ಹಣ್ಣಿನ ಸಸಿ ನೆಟ್ಟರು.

Advertisement

ಎಸ್‌ಪಿ ಅನೂಪ್‌ ಎ. ಶೆಟ್ಟಿ ಮಾತನಾಡಿ, ನಿಸರ್ಗ ಕಾಪಾಡಿಕೊಳ್ಳುವ  ಉದ್ದೇಶದಲ್ಲಿ ಈ ಸಂಘಟನೆಗಳು ಹಮ್ಮಿಕೊಂಡಿರುವ ಅಭಿ ಯಾನ ಶ್ಲಾಘನೀಯ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದು ಸಲಹೆ ನೀಡಿದರು. ಡಿವೈಎಸ್‌ಪಿ ಪುರುಷೋತ್ತಮ ಮಾತನಾಡಿ, ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯ ಆವರಣದಲ್ಲಿ ಸುಮಾರು 5 ಸಾವಿರ ಸಸಿ ನೆಡುವ ಉದ್ದೇಶ ಪ್ರಕಟಿಸಿದರು.

ಗೋ ಗ್ರೀನ್‌ ಅಭಿಯಾನದ ರಾಯಭಾರಿ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಮಾತನಾಡಿ, ಕನಿಷ್ಠ 50 ಸಾವಿರ ಸಸಿ ನೆಟ್ಟು ಪರಿಸರ ಉಳಿಸುವ  ಉದ್ದೇಶ ಕೈ ಜೋಡಿಸಿ ಸಂಸ್ಥೆಗಿದೆ. ಇದಕ್ಕೆ ಪೊಲೀಸ್‌ ಇಲಾಖೆ ಮತ್ತು ರೋಟರಿ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದರು. ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎ.ಜೆ.ಸುರೇಶ್‌, ಕಾರ್ಯದರ್ಶಿ ಆರ್‌.ಶಿವರಾಜು, ಭಾರತ್‌ ಆನ್‌ವೀಲ್ಸ್‌ ಬೈಕ್‌ ರೈಡರ್ನ  ಜಕೀರ್‌ ಆಲಿ, ರೋಟರಿ ಉದ್ಯೋಗನ ರವಿಕುಮಾರ್‌, ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಪಟು ಮತ್ತು ಕೈ ಜೋಡಿಸಿ ಸಂಸ್ಥೆಯ ರೇಷ್ಮ ಯತೀಶ್‌ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next