Advertisement

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ

05:27 PM Jun 26, 2021 | Team Udayavani |

ಮಾಗಡಿ: ಪರಿಸರವಿಲ್ಲದೆ ಮನುಕುಲವಿಲ್ಲ,ಮಾನಕುಲಕ್ಕೆ ಒಳ್ಳೆಯದಾಗಬೇಕಾದರೆ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಾಗಡಿ ಜೆಎಂಎಫ್ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ. ಮನೋಹರ್‌ ಹೇಳಿದರು.

Advertisement

ಪಟ್ಟಣದ ನ್ಯಾಯಾಲಯದ ಆವರಣದಲ್ಲಿಕಾನೂನು ಸೇವೆಗಳ ಸಮಿತಿ, ವಲಯ ಅರಣ್ಯಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಪರಿಸರದಿನಾಚರಣೆಯಲ್ಲಿ ಮಾತನಾಡಿ, ನಾವುಮಕ್ಕಳ ಬಗ್ಗೆ ಕಾಳಜಿ ವಹಿಸಿದಂತೆಬೆಳೆಸುತ್ತೇವೆಯೋ ಹಾಗೆಯೇ ಪ್ರಾಣಿ,ಪಕ್ಷಿಗಳ ಜೊತೆಗೆ ಮನಕುಲದ ಬಗ್ಗೆಯೂಹೆಚ್ಚಿನ ಕಾಳಜಿ ವಹಿಸಿ, ಪರಿಸರ ಸಂರಕ್ಷಣೆಮಾಡಬೇಕು. ಹಿರಿಯರ ಕಾಳಜಿಯಿಂದ ಗಿಡಮರಗಳು ಬೆಳೆಸಿದ್ದರಿಂದ ಪರಿಸರವನ್ನುಉಳಿಸಿಕೊಂಡು ಬಂದಿದ್ದೇವೆ.

ಸ್ವಾರ್ಥ,ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಸಲ್ಲದು.ಪ್ರಾಣಿ, ಪಕ್ಷಿ, ಮನುಕುಲ ಉಳಿಸಲು ಗಿಡಮರಗಳ ಸಂರಕ್ಷಣೆಯೇ ನಮ್ಮ ಬದುಕಿನಉಸಿರಾಗಬೇಕು ಎಂದು ತಿಳಿಸಿದರು.ಜನರು ಎಚ್ಚೆತ್ತುಕೊಳ್ಳಲಿ: ಅಪರ ಹಿರಿಯಸಿವಿಲ್‌ ನ್ಯಾಯಾಧೀಶ ಹನುಮಂತ್‌,ಅನಂತ್‌ರಾವ್‌ ಸಾತ್ವಿಕ್‌ ಮಾತನಾಡಿ,ನಾಗರಿಕರೇ ಪ್ಲಾಸ್ಟಿಕ್‌ ಬಳಕೆ ವಿರೋಧಿಸಲುಜಾಗೃತರಾಗಬೇಕು. ಪ್ಲಾಸ್ಟಿಕ್‌ ಬಳಕೆ, ತ್ಯಾಜ್ಯನಿರ್ವಹಣೆ ಕುರಿತು ಸರ್ಕಾರದಕಾನೂನುಗಳಪಾತ್ರ ಪ್ರಮುಖವಾಗಿದೆ. ಜನ ಪ್ರತಿನಿಧಿಗಳುಬಹಳ ಕಟ್ಟುನಿಟ್ಟಿನ ಕಾನೂನು ರಚನೆ ‌ಮಾಡಿದ್ದಾರೆ.

ಸರ್ಕಾರವೂ ಜನರಿಗೆ ಪ್ಲಾಸ್ಟಿಕ್‌ಬಳಕೆ ನಿಷೇಧಕ್ಕೆ ಎಚ್ಚರಿಕೆ ‌ ನೀಡುತ್ತಿದೆ. ಜಾಗೃತಿತಂಡದ ಪಾತ್ರವೂ ಇದರಲ್ಲಿದೆ. ನಿಜವಾದಪರಿಸರದ ಕಾಳಜಿ ಬಂದಾಗ ಮಾತ್ರ ಇದಕ್ಕೆಲ್ಲಕಡಿವಾಣಬೀಳುತ್ತದೆ ಎಂದು ತಿಳಿಸಿದರು‌ .ನ್ಯಾಯಾಧೀಶೆ ನಳಿನಾ ಎಸ್‌.ಸಿ., ವಲಯಅರಣ್ಯಾಧಿಕಾರಿ ಪುಷಲತಾ ³ , ಹಿರಿಯವಕೀಲರಾದ ಜಿ.ಪಾಪಣ್ಣ ಎಚ್‌.ನಾರಾಯಣಸ್ವಾಮಿ, ರಾಜಯ್ಯ, ಮೂರ್ತಿ,ಲಕ್ಷ್ಮೀಪತಿ, ‌ ವಿ. ಕವಿತಾ, ಬಸವರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next