Advertisement
ಪಟ್ಟಣದ ಚನ್ನಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ನಮ್ಮ ಭೂಮಿ ನಮ್ಮ ಹೆಮ್ಮೆ ರಾಜ್ಯ ಪರಿಸರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಮನುಷ್ಯನ ದೇಹದಲ್ಲಿ ನಿರಂತರ ಉಸಿರಾಟ ಕ್ರಿಯೆ ನಡೆಯುತ್ತದೆಯೋ ಹಾಗೆಯೇ ಪರಿಸರ ಸಂರಕ್ಷಣೆಯೂ ಒಂದು ದಿನಕ್ಕೆ ನೀಮಿತವಾಗದೇ ನಿರಂತರವಾಗಿ ನಡೆಯಬೇಕು ಆಗ ಮಾತ್ರ ನಮ್ಮ ಭೂಮಿ ನಮ್ಮ ಜಲ, ನಮ್ಮ ಪರಿಸರ ಉಳಿಸಲುಸಾಧ್ಯ ಎಂದರು.
Related Articles
Advertisement
ಮಳೆ ನೀರು ಸಂರಕ್ಷಿಸಿ: ಮಳೆಯ ನೀರನ್ನು ಸಂರಕ್ಷಣೆ ಮಾಡುವುದು ಅಗತ್ಯವಿದೆ. ಕೆರೆಗಳ ಹೂಳೆತ್ತುವುದು, ನಾಲೆಗಳನ್ನು ಸ್ವತ್ಛಗೊಳಿಸುವ ಮೂಲಕ ಅವುಗಳ ಪುನಶ್ಚೇತನಕ್ಕೆ ಆಧ್ಯತೆ ಕೊಟ್ಟು ಅವುಗಳನ್ನು ಉಳಿಸಬೇಕಿದೆ ಎಂದು ತಿಳಿಸಿದರು.
ಪರಿಸರ ಸಮಾವೇಶಕ್ಕೆ ಪುಷ್ಪಗಿರಿ ಮಠದ ಶ್ರೀ ಡಾ. ಸೋಮಶೇಖರ ಸ್ವಾಮೀಜಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್, ಪರಿಸರ ಸಂರಕ್ಷಣೆಯ ರಾಜ್ಯ ಸಂಚಾಲಕ ಧನಂಜಯ್ ಜೀವಾಳ್, ಪರಿಸರ ಮತ್ತು ವನ್ಯ ಜೀವಿತಜ್ಞ ಡಾ. ಎ.ಸಿ.ಲಕ್ಷ್ಮಣ್, ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ್ ಹೆಗ್ಡೆ ಆಶೀರಸ,
ಪ್ರಗತಿಪರ ಚಿಂತಕರಾದ ವೆಂಕಟೇಶ್ ಮೂರ್ತಿ, ತಹಶೀಲ್ದಾರ್ ಜಿ.ಮೇಘನಾ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜಪ್ಪ, ಪ್ರಗತಿಪರ ರೈತ ಮಹಿಳೆ ಹೇಮಶ್ರೀ ಅನಂತ್, ಎಚ್.ಎಂ. ಪರಮೇಶ್, ಪರಿಸರ ತಜ್ಞ ದಿನೇಶ್ ಹೊಳ್ಳ, ಕಾಳೇಗೌಡ ನಾಗವಾರ, ಗಿರಿಜಾ ಶಂಕರ್, ಸೋಮಶೇಖರ್, ಅನಂತರಾಮು, ಗಂಗೂರು ಶಿವಕುಮಾರ್, ಚಂದ್ರಶೇಖರ್ ಹಾಜರಿದ್ದರು.
ಸಮುದಾಯದ ಸಹಭಾಗಿತ್ವ ಅಗತ್ಯ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ಸಮುದಾಯದ ಸಹಭಾಗಿತ್ವವಿಲ್ಲದೇ ಪರಿಸರದ ಉಳಿವು ಅಸಾಧ್ಯ. ಪ್ರಕೃತಿಯ ಏರು ಪೇರುಗಳಿಗೆ ನಾವೇ ಕಾರಣರಾಗಿದ್ದೇವೆ. ಇದರಿಂದ ದುಷ್ಪರಿಣಾಮವನ್ನು ನಾವೇ ಅನುಭವಿಸುತ್ತಿದ್ದೇವೆ. ಪ್ರಕೃತಿ ನಮ್ಮ ಆಸ್ತಿ ಅದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಸರ್ಕಾರಗಳು ಪರಿಸರವನ್ನು ಉಳಿಸುತ್ತವೆ ಎಂದು ಕೈಕಟ್ಟಿ ಕೂರುವು ಬದಲು ಜನರೂ ಪರಿಸರ ಉಳಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದರು.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಜೂ.11 ರಿಂದ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 500 ಗಿಡಗಳನ್ನು ನೆಡುವ ಕೆಲಸ ಪ್ರಾರಂಭಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು 3 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ, ಜೊತೆಗೆ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಕಾರ ಕೂಡ ಅಗತ್ಯವಿದೆ ಎಂದರು.
ಪರಿಸರ ಪ್ರಜ್ಞೆ ಅಗತ್ಯ: ಪುಷ್ಪಗಿರಿ ಮಠದ ಶ್ರೀ ಡಾ. ಸೋಮಶೇಖರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಿಗೂ ಪರಿಸರ ಪ್ರಜ್ಞೆ ಅತ್ಯವಶ್ಯ. ಜಾಗತಿಕ ತಾಪಮಾನ ವೈಪರೀತ್ಯವನ್ನು ನಿಯಂತ್ರಿಸಲು ಪರಿಸರ ಪ್ರಜ್ಞೆ ಇರಬೇಕು. ಗಿಡ ಮರಗಳು ಮನುಷ್ಯ, ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣ. ಅವುಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳುಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಅರಳಿ, ಬೇವು, ಬಿಲ್ವ,ಬನ್ನಿ, ಇತ್ಯಾದಿ ವೃಕ್ಷಗಳನ್ನು ದೇವರೆಂದು ನಂಬಿ ಪೂಜಿಸಲಾಗುತ್ತಿತ್ತು. ಆದರೆ ಆಧುನೀಕರಣದ ಜಗತ್ತಿನಲ್ಲಿ ಪರಿಸರದ ಕಾಳಜಿ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.