Advertisement

ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರ ಸಂರಕ್ಷಿಸಬೇಕಿದೆ: ಪ್ರೊ|ಎ.ಎಂ. ಖಾನ್‌

10:14 PM Sep 18, 2019 | mahesh |

ಮಂಗಳಗಂಗೋತ್ರಿ: ಕ್ಯಾನ್ಸರ್‌ ಸಹಿತ ಅನೇಕ ಮಾರಾಣಾಂತಿಕ ಆರೋಗ್ಯ ಸಮಸ್ಯೆ, ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಹರಡುವ ಸೊಳ್ಳೆಗಳ ವಂಶಾಭಿವೃದ್ಧಿಗೆ ಕಾರಣವಾಗುವ ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡುವ ಅನಿವಾರ್ಯ ಪರಿಸ್ಥಿತಿ ನಮ್ಮ ಮುಂದಿದೆ ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ| ಎ. ಎಂ. ಖಾನ್‌ ಅವರು ಅಭಿಪ್ರಾಯಪಟ್ಟರು.

Advertisement

ಮಂಗಳೂರು ವಿವಿ (ಗ್ರಾಮ ದತ್ತು ಸ್ವೀಕಾರ-ಮಂಗಳ ಯೋಜನೆ) ಭಾರತ ಸರಕಾ ರದ ಮಾನವ ಸಂಪನ್ಮೂಲ ಅಭಿವೃದ್ಧಿ, ಉನ್ನತ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸ್ವತ್ಛತಾ ಪಖ್ವಾಡ ಕಾರ್ಯಕ್ರಮದ ಅಂಗವಾಗಿ ಕೊಣಾಜೆ ಹಾಗೂ ಪಜೀರು ಗ್ರಾಮಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಮಾಲಿನ್ಯದ ಬಗ್ಗೆ ಜನಜಾಗೃತಿ ಅಭಿಯಾನದಲ್ಲಿ ಪ್ಲಾಸ್ಟಿಕ್‌ ಮಾಲಿನ್ಯದ ಬಗ್ಗೆ ಕರಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೊಣಾಜೆ ಗ್ರಾ. ಪಂ. ಅಧ್ಯಕ್ಷ ನಜರ್‌ ಷಾ ಪಟ್ಟೋರಿ ಅವರು ಪರಿಸರ ಸ್ನೇಹಿ ಕೈ ಚೀಲಗಳನ್ನು ಹಸ್ತಾಂತರಿಸಿ ಮಾತನಾಡಿ, 1947ಕ್ಕಿಂತಲೂ ಮೊದಲು ನಮ್ಮ ಹಿರಿಯರು ಬ್ರಿಟಿಷರ ವಿರುದ್ಧ ನಿರಂತರವಾಗಿ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ಆಧುನಿಕ ಯುಗದ ಮಹಾ ಮಾ ರಿ ಆಗಿರುವ ಪ್ಲಾಸ್ಟಿಕ್‌ ಮಾಲಿನ್ಯದ ವಿರುದ್ಧ ನಾವೆಲ್ಲರೂ ಹೋರಾಡಿ ಸ್ವತ್ಛ ಭಾರತದ ಕನಸನ್ನು ಸಾಕಾರಗೊಳಿಸಬೇಕಾಗಿದೆ ಎಂದರು.

ಪ್ಲಾಸ್ಟಿಕ್‌ ಮುಕ್ತ ಸಮಾಜ ಅಗತ್ಯ
ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ| ಪ್ರಶಾಂತ ನಾಯ್ಕ ಅವರು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತಾನಾಡಿ, ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೆ„ಡ್‌ ಪ್ರಮಾಣ 2050ರ ವೇಳೆಗೆ ವಾರ್ಷಿಕ 2.75 ಶತಕೋಟಿ ಟನ್‌ಗಳಷ್ಟು ಏರಿಕೆ ಆಗುತ್ತದೆ ಎಂದು ವೈಜ್ಞಾನಿಕ ಸಮೀಕ್ಷೆ ಹೇಳುತ್ತದೆ. ಪ್ಲಾಸ್ಟಿಕ್‌ ಮಾಲಿನ್ಯದಿಂದಾಗಿ ತಾಪಮಾನ ಏರಿಕೆ ಮತ್ತು ಹವಾಗುಣ ಬದಲಾವಣೆಗೂ ಕೂಡ ಕಾರಣವಾಗಿ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಇಂತಹ ನೈಸರ್ಗಿಕ ವಿಪತ್ತುಗಳಿಗೂ ಎಡೆಮಾಡಿ ಕೊಡುತ್ತದೆ. ಆದುದರಿಂದ ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಸಂಯೋಜಕ ಡಾ| ತಾರಾವತಿ ಎನ್‌.ಸಿ. ವಂದಿಸಿದರು. ಕೊಣಾಜೆ ಗ್ರಾಮ ಪಂಚಾಯತ್‌ ಸದಸ್ಯರಾದ ಮುತ್ತು ಎನ್‌. ಶೆಟ್ಟಿ, ಅಚ್ಯುತ್‌ ಗಟ್ಟಿ, ಎ. ರವೀಂದ್ರ, ಹರೀಶ್ಚಂದ್ರ ಶೆಟ್ಟಿಗಾರ್‌, ವೇದಾವತಿ ಗಟ್ಟಿ, ಮಹಮದ್‌ ಇಕ್ಬಾಲ್‌, ಜೇಸಿ ಮಂಗಳಗಂಗೋತ್ರಿ ಸ್ಥಾಪಕ ಅಧ್ಯಕ್ಷ ತ್ಯಾಗಂ ಹರೇಕಳ, ಸಪ್ತಸ್ವರ ಕಲತಂಡ ಸದಸ್ಯ ವೆಂಕಟೇಶ್‌ ಎಂ. ಉಪಸ್ಥಿತರಿದ್ದರು.

Advertisement

ಪರಿಸರ ಜಾಥಾ
ವಿಶ್ವವಿದ್ಯಾನಿಲಯದ ಇಂಡೋರ್‌ ನ್ಪೋರ್ಟ್ಸ್ ಕಾಂಪ್ಲೆಕ್ಸ್‌, ಇಲ್ಲಿಂದ ಕೊಣಾಜೆ ಗ್ರಾಮ ಪಂಚಾಯತ್‌ ಮಾರ್ಗವಾಗಿ ಜಾಥಾ ಹೊರಟಿತು. ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು, ವಿವಿಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿ, ಕೊಣಾಜೆ ಹಾಗೂ ಫಜೀರು ಮುಖ್ಯ ರಸ್ತೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಘೋಷಣೆಗಳನ್ನು ಕೂಗುತ್ತ, ಜಾಥಾವನ್ನು ನಡೆಸಿ ಸಾರ್ವಜನಿಕರಿಗೆ ಕರಪತ್ರ ಹಾಗೂ ಪರಿಸರ-ಸ್ನೇಹಿ ಕೈ ಚೀಲಗಳನ್ನು ವಿತರಣೆ ಮಾಡಿದರು. ನರಸಿಂಹಯ್ಯ ಎನ್‌., ಡಾ| ಶರತ್‌ ಚಂದ್ರ ಕೆ., ಲವೀನ ಕೆ.ಬಿ., ದಿವಾಕರ್‌ ಎಂ.ಎಸ್‌. ಚನಿಯಪ್ಪ ಬಿ. ಅವರು ಜಾಥಾವನ್ನು ಮುನ್ನೆಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next