Advertisement
ಕಳೆದ ತಿಂಗಳಷ್ಟೇ ಅಸ್ತಿತ್ವಕ್ಕೆ ಬಂದ ಅರ್ಥ್ವರ್ಮ್, ಗಿಡ ನೆಟ್ಟು ಬೆಳೆಸುವ ಕುರಿತು ಬಾಣಸವಾಡಿಯ ಮೈಡ್ರೀವ್‌ಗಾರ್ಡನ್ ಆವರಣದಲ್ಲಿ ಮಕ್ಕಳಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿತ್ತು. ನಗರದ ವಿವಿಧ ಬಡಾವಣೆಯ ಚಿಣ್ಣರು ತಾರಸಿ ತೋಟದಲ್ಲಿ ಓಡಾಡುತ್ತಾ ಗೊಂಚಲರಳಿಸಿದ್ದ ಟೊಮೇಟೋ ಕುಂಡ, ಫಲಬಿಟ್ಟ ದಾಳಿಂಬೆ, ಸಪೋಟ ಗಿಡಗಳನ್ನು ಕುತೂಹಲದಿಂದ ನೋಡುತ್ತಿದ್ದರೆ, ಇತ್ತ ಸಂಸ್ಥೆಯ ಸಹ-ಸಂಸ್ಥಾಪಕಿ ಸ್ಮಿತಾ ಬನ್ಸಲ್ ಪರಿಸರ ಪಾಠ ಆರಂಭಿಸಿದರು.
Related Articles
Advertisement
ಎರಡನೇ ಹಂತದಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ಸಹ ನೀಡಲಾಯಿತು. ನೆಲದಲ್ಲಿಒಂದು ಬುಟ್ಟಿಯಷ್ಟು ತೆಂಗಿನ ನಾರಿನ ಪುಡಿ ಹರಡಿ ಅದಕ್ಕೆಎರೆಗೊಬ್ಬರ, ಬೇವಿನ ಹುಡಿ, ಹೊಂಗೆ ಹಿಂಡಿ, ಬೋನ್ ಮೀಲ್ ಇತ್ಯಾದಿಗಳನ್ನು ಸೇರಿಸಿ ಕೆಂಪುಮಣ್ಣನ್ನುಬೆರೆಸಿ ಗಿಡನೆಡುವುದಕ್ಕೆ ಬೇಕಾದ ಮಿಶ್ರಣವನ್ನು ಸಿದ್ಧಪಡಿಸುವ ಕೆಲಸದಲ್ಲಿಮಕ್ಕಳು ಉತ್ಸಾಹದಿಂದ ಬಾಗಿಯಾದರು.
ಮನೆಗಳಲ್ಲಿ ತ್ಯಾಜ್ಯ ಎಂದು ಬಿಸಾಡುವ ಪ್ಲಾಸ್ಟಿಕ್ ಬಾಟಲಿ ಅಥವಾ ಚೀಲಗಳನ್ನು ತರುವಂತೆ ಮುಂಚಿತವಾಗಿಯೇ ಸೂಚಿಸಲಾಗಿತ್ತು. ಪುಟಾಣಿಗಳು ಅಂತಹ ಬಾಟಲಿಗಳಲ್ಲಿ ಮಿಶ್ರಣವನ್ನುತುಂಬಿ ಲೆಟ್ಯೂಸ್, ಬದನೆ, ಚೆಂಡುಹೂವು ಮತ್ತು ತುಳಸಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.
ಪ್ಲಾಸ್ಟಿಕ್ ಬಾಟಲಿಗಳನ್ನು ಕತ್ತರಿಸಿ ನೇತಾಡುವ ಕುಂಡಗಳನ್ನಾಗಿ ಬಳಸುವ ವಿಧಾನವನ್ನು ತೋರಿಸಿಕೊಟ್ಟರು ಸಹ ಸಂಸ್ಥಾಪಕ ಎಂ.ಪ್ರಭುರೋಸ್ ತೋರಿಸಿಕೊಟ್ಟರು. ಗಿಡನೆಟ್ಟು ನೀರುಣಿಸಿದ ಬಳಿಕ ಮಕ್ಕಳು ಕುಂಡ-ಬಾಟಲಿಗಳನ್ನು ಅಲಂಕಾರ ಮಾಡುವಲ್ಲಿ ಮಕ್ಕಳು ನಿರತರಾದರು. ಬ್ರಷ್ ಹಿಡಿದು ಬಣ್ಣ ಬಳಿಯತೊಡಗಿದರೆ ಪೋಷಕರೂ ಕೈಜೋಡಿಸಿ ಬಾಟಲಿಗೆ ರಿಬ್ಬನ್ ಬಿಗಿದು ಇನ್ನಷ್ಟು ಸುಂದರಗೊಳಿಸಿದರು.
ಗಿಡಗಳನ್ನು ನಾಜೂಕಿನಿಂದ ಬೆಳೆಸುವ ಕನಸು.ನ್ಯೂ ಮಿಲೆನಿಯಮ್ ಶಾಲೆಯ ವಿದ್ಯಾರ್ಥಿ ಆರುಷ್‌ಗೆ. ಮುಂದೊಂದು ದಿನ ಕೃಷಿಕನಾಗುವ ಹಂಬಲ.ಡಾ. ವಿಕ್ರಮ್ ಮತ್ತು ಶು¸Åತಾ ದಂಪತಿಗೆ, ತಮ್ಮ ಮಕ್ಕಳಲ್ಲಿ ಹಸಿರುಪ್ರೀತಿಯನ್ನು ಬೆಳೆಸುವ ಕಾಳಜಿ.ಅದಕ್ಕಾಗಿಯೇ ಸುಮೇರು ಮತ್ತು ಸುಧನ್ವರನ್ನುಕರೆತಂದಿದ್ದರು. ಎಂಬಿಎ ಬಳಿಕ ಕೈತುಂಬ ಸಂಬಳದಉದ್ಯೋಗದಲ್ಲಿದ್ದ ಸ್ಮಿತಾ ಮತ್ತುಐಟಿ ಕಂಪೆನಿಗೆ ವಿದಾಯ ಹೇಳಿರುವ ಪ್ರಭು ಇಬ್ಬರಿಗೂ ಪರಿಸರರಕ್ಷಣೆಯ ಬಗ್ಗೆ ಹೆಚ್ಚಿನ ಒಲವು.
ಪ್ರವಾಸೋದ್ಯಮದ ನೆಪದಲ್ಲಿಅರಣ್ಯ ಗರ್ಭವನ್ನೂ ಹಿಮಶಿಖರಗಳನ್ನೂ ಬಿಡದೆ ಎಲ್ಲೆಂದರಲ್ಲಿತಾಂಡವಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆಆತಂಕ.ಪ್ರಕೃತಿಯ ಸಾಸ್ಥ್ಯದ ಜತೆಗೆಜನತೆಯ ಆರೋಗ್ಯವನ್ನೂ ಕಾಪಾಡಬೇಕಾದರೆ ಮಕ್ಕಳನ್ನು ಪರಿಸರ ಸಾಕ್ಷರರನ್ನಾಗಿರೂಪಿಸುವುದೊಂದೇ ದಾರಿ ಎಂದು ಮನಗಂಡಿರುವಅವರು ಈ ನಿಟ್ಟಿನಲ್ಲಿ ಹತ್ತು-ಹಲವು ಕಾರ್ಯಕ್ರಮಗಳನ್ನು ಸಾಕಾರಗೊಳಿಸಲು ಅಣಿಯಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ- www.earthwormindia.com ಸಂಪರ್ಕಿಸಬಹುದು.