ಮುಖ್ಯಸ್ಥರು ಪ್ರಕೃತಿಯಲ್ಲಿ ಒಂದು ದಿನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದರು.
Advertisement
ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ದ್ವಿತೀಯ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳಿಗೆ ಪ್ರಕೃತಿಯೊಂದಿಗೆ ಒಂದು ದಿನದ ಕಾರ್ಯಕ್ರಮ ರವಿವಾರ ನಡೆಯಿತು. ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯದ ಸಹಕಾರದಲ್ಲಿ ಕಾಲೇಜಿನ ಸುಮಾರು 250 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರವಿವಾರ ರಜಾ ದಿನವಾಗಿದ್ದರೂ, ಮಕ್ಕಳು ಕಾಲೇಜಿಗೆ ಬಂದರು. ಅಲ್ಲಿಂದ ದೇವರಹಳ್ಳಿಯಲ್ಲಿನ ಕಲ್ಲಾಜೆ ಸಸ್ಯ ಪಾಲನ ಕ್ಷೇತ್ರಕ್ಕೆ ತೆರಳಿ ಪರಿಸರ ಸಂರಕ್ಷಣೆ ಪಾಠ ಕಲಿಯುವಿಕೆಯಲ್ಲಿ ತೊಡಗಿಸಿಕೊಂಡರು.
ಸಸ್ಯಪಾಲನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಅಲ್ಲಿರುವ ವಿವಿಧ ಜಾತಿಯ ಹಣ್ಣಿನ ಸಸಿಗಳು, ವಿವಿಧ ಜಾತಿಯ ಮರಗಳ ಸಸಿಗಳ ಬಗ್ಗೆ ಪರಿಚಯಿಸಿಕೊಂಡರು. ವಿದ್ಯಾರ್ಥಿಗಳು ಮಣ್ಣಿನಲ್ಲಿ ಬೆರೆತು ಬೀಜದುಂಡೆ ಸಿದ್ಧಪಡಿಸಿದರು. ಮಣ್ಣು ಅಗೆದು ನೀರು ಹಾಯಿಸಿ ಮಣ್ಣು ಹದಗೊಳಿಸಿ ಚಿಕ್ಕ ಉಂಡೆಗಳನ್ನಾಗಿ ಪರಿವರ್ತಿಸಿ ಅದರ ಮಧ್ಯೆ ಬೀಜವನ್ನು ಹುದುಗಿಸಿಟ್ಟು ಹಣ್ಣಿನ ಬೀಜದ ಉಂಡೆಗಳನ್ನು ಸಿದ್ಧಪಡಿಸಿದರು. ಇನ್ನುಳಿದ ಮಕ್ಕಳು ಸಸಿ ತುಂಬಿಸಿಡುವ ತೊ ಟ್ಟೆಗಳಿಗೆ ಮಣ್ಣು ತುಂಬಿಸಿ ಸಸಿಗಳನ್ನು ನೆಟ್ಟರು. ವಿದ್ಯಾರ್ಥಿನಿ ಯರು ಕೇಂದ್ರದಲ್ಲಿ ಸಂಗ್ರಹಿಸಿಡಲಾದ ಸಸಿಗಳ ಮಧ್ಯೆ ಬೆಳೆದು ಕೊಂಡಿರುವ ಅನುಪಯುಕ್ತ ಗಿಡಗಂಟಿ, ಕಳೆಗಳನ್ನು ತೆಗೆದು ಸ್ವತ್ಛ ಗೊಳಿಸಿದರು. ಪ್ರಾಯೋಗಿಕ ಉದ್ದೇಶ
ಕಾಲೇಜು ಶಿಕ್ಷಣದ ಜತೆಗೆ ಪರಿಸರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಪಠ್ಯಕ್ರಮ ಚೌಕಟ್ಟಿನ ಜತೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಶಿಕ್ಷಣವೂ ಕಡ್ಡಾಯವಾಗಿರಬೇಕು. ಇವೆಲ್ಲವನ್ನು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಜಾಗೃತಗೊಳಿಸುವ ಮೂಲಕ ಶಿಕ್ಷಣವನ್ನು ಆಹ್ಲಾದಕರವಾಗಿಯೂ ಕಲಿಕೆಯ ಫಲಶೃತಿಯನ್ನು ಶಿಸ್ತುಬದ್ಧವಾಗಿ ನಡೆಸಲು ಪ್ರಾಯೋಗಿಕ ಉದ್ದೇಶ ಇರಿಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Related Articles
ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸಲು ಮತ್ತು ಭೂಮಿಯನ್ನು ಹಸಿರಾಗಿ ಇಡಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಿಕೆ ಅಂಕ ಕೂಡ ನೀಡಲಾಗುತ್ತದೆ. ಶಿಕ್ಷಣದಲ್ಲಿ ಹೊಸತನ್ನು ಹುಡುಕುವ ಪ್ರಯತ್ನವಿದು.
– ಡಾ| ಗೋವಿಂದ
ಎನ್.ಎಸ್. ಮುಖ್ಯಸ್ಥರು
Advertisement
ಬಾಲಕೃಷ್ಣ ಭೀಮಗುಳಿ