ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ ತಾಲೂಕು, ಅಂಪಾರು ವಲಯದ ಉಳ್ಳೂರು 74 ಕಾರ್ಯಕ್ಷೇತ್ರದಲ್ಲಿ ನಡೆಯಿತು.
ವಾರಾಹಿ ಒಕ್ಕೂಟದ ಅಧ್ಯಕ್ಷೆ ಶ್ರೀಲತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಉಳ್ಳೂರು 74 ಗ್ರಾ. ಪಂ. ಅಧ್ಯಕ್ಷೆ ಭಾರತಿ ಕೋಟಿ ಪೂಜಾರಿ ಉದ್ಘಾಟಿಸಿ, ಮರಗಿಡಗಳನ್ನು ನಾವು ಮಕ್ಕಳಂತೆ ಪ್ರೀತಿಸಬೇಕು. ಮುಂದಿನ ಯುವಜನತೆಗೆ ನಾವು ಮರಗಿಡಗಳನ್ನು ಬೆಳೆಸಿ ಹಸ್ತಾಂತರಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಶಂಕರನಾರಾಯಣ ವಲಯದ ಅರಣ್ಯ ಸಂರಕ್ಷಣಾಧಿ ಕಾರಿ ಹರೀಶ್ ಕೆ., ಇಂದು ನಾವೆಲ್ಲರೂ ಅತಿ ಹೆಚ್ಚಾಗಿ ಮರಗಿಡಗಳನ್ನು ಕಡಿಯುವ ಮೂಲಕ ಪರಿಸರವನ್ನು, ಪ್ರಾಣಿ- ಪಕ್ಷಿಗಳ ಸಂಕುಲವನ್ನು ನಾಶ ಮಾಡುತ್ತಿದ್ದೇವೆ. ಮನೆಯ ಪರಿಸರದ ಸುತ್ತ ಕೃಷಿ ಕಾಡು, ಮನೆ ಕೈತೋಟ ರಚನೆ ಮಾಡುವುದರ ಮೂಲಕ ನಾವು ಪರಿಸರ ಪ್ರೀತಿಯನ್ನು ಮೆರೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸ.ಹಿ.ಪ್ರ.ಶಾಲೆ ಉಳ್ಳೂರು 74ರ ಪ್ರಭಾರ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿ ಕಾರಿ ಶ್ರೀಧರ್ ಕಾಮತ್, ಉಳ್ಳೂರು 74 ಒಕ್ಕೂಟದ ಅಧ್ಯಕ್ಷ ಗಣೇಶ್ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್, ಅರಣ್ಯ ಇಲಾಖೆ ಸಿಬಂದಿಗಳಾದ ಗುರುರಾಜ್, ಶಿವು, ನಿಕಟಪೂರ್ವ ಒಕ್ಕೂಟದ ಅಧ್ಯಕ್ಷ ವಿಜಯ್, ಸುರೇಶ್, ಸೇವಾ ಪ್ರತಿನಿಧಿ ಶೀಲಾ ಉಪಸ್ಥಿತರಿದ್ದರು.
ತಾಲೂಕು ಕೃಷಿ ಅಧಿ ಕಾರಿ ಚೇತನ್ ಕುಮಾರ್ ನಿರ್ವಹಿಸಿ, ವಲಯ ಮೇಲ್ವಿಚಾರಕ ಉದಯ್ ಕೆ. ಸ್ವಾಗತಿಸಿ,ಸೇವಾ ಪ್ರತಿನಿಧಿ ಶೈನಾ ವಂದಿಸಿದರು.
ಕಾರ್ಯಕ್ರಮದಲ್ಲಿ ಗ್ರೀನ್‌ವೇ ಸಂಸ್ಥೆಯಿಂದ ಗ್ರೀನ್‌ವೇ ಅಡುಗೆ ಒಲೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಂಸ್ಥೆಯ ದಿನೇಶ್ ಮಾಹಿತಿ ನೀಡಿದರು.
ನಂತರ ಸಾಂಕೇತಿಕ ಗಿಡ ನಾಟಿ ಮಾಡುವುದರ ಮೂಲಕ, ಆಗಮಿಸಿದ್ದ ಎಲ್ಲ ಸದಸ್ಯರಿಗೆ, ಶಾಲಾ ಮಕ್ಕಳಿಗೆ ಸಸಿ ವಿತರಿಸಲಾಯಿತು.