Advertisement
ಮಣಿಪಾಲದ ಸಾಲುಮರದ ತಿಮ್ಮಕ್ಕ ಹೆಸರಿನ ಅರಣ್ಯ ಪಾರ್ಕ್‌ನಲ್ಲಿ ಅರಣ್ಯ ಇಲಾಖೆ, ನಗರಸಭೆ ಸಹಭಾಗಿತ್ವದಲ್ಲಿ ಉಡುಪಿ ಪ್ರಸ್‌ಕ್ಲಬ್ ವತಿಯಿಂದ ಮಂಗಳವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು. ಯುರೋಪ್, ರಷ್ಯಾ, ಫ್ರಾನ್ಸ್, ಜರ್ಮನಿ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿಯಾಗಿದ್ದು, ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಟ್ಟಿದ್ದರೂ, ಪರಿಸರ ಸಂರಕ್ಷಣೆಗೆ ಒತ್ತು ಕೊಡುತ್ತಿದ್ದಾರೆ. ನಾರ್ವೆ, ನ್ಯೂಜಿಲ್ಯಾಂಡ್‌ನಲ್ಲಿ ಪರಿಸರ ಕಾಳಜಿ ಹೆಚ್ಚಿದೆ. ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಅರಣ್ಯ ಇಲಾಖೆಯವರ ಜವಾಬ್ದಾರಿಯಲ್ಲ. ಅದು ನಮ್ಮೆಲ್ಲರ ಜೀವನದಲ್ಲಿ ಅಳವಡಿಕೆಯಾಗಬೇಕು ಎಂದು ಎಸ್‌ಪಿ ತಿಳಿಸಿದರು.
ಉಡುಪಿ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮಾತನಾಡಿ ಶೇ. 33ರಷ್ಟು ಅರಣ್ಯ ಪ್ರದೇಶ ಇರಲೇಬೇಕು. ಆದರೆ ನಮ್ಮಲ್ಲಿ ಕೇವಲ ಶೇ. 21.5 ಮಾತ್ರ ಇದೆ. ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹಾಗಾದರೆ ಮಾತ್ರ ಪ್ರಾಕೃತಿಕ ಸಮತೋಲನ ಸಾಧ್ಯ ಎಂದರು. ವಾರ್ತಾಧಿಕಾರಿ ರೋಹಿಣಿ ಕೆ., ಸಂಘದ ಪ್ರ. ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ್ ಭಂಡಾರಿ, ಜತೆ ಕಾರ್ಯದರ್ಶಿ ಮೈಕಲ್ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷ ಕಿರಣ ಮಂಜನಬೈಲು ಸ್ವಾಗತಿಸಿ, ಪ್ರಸ್ ಕ್ಲಬ್ ಸಂಚಾಲಕ ನಾಗರಾಜ ರಾವ್ ವರ್ಕಾಡಿ ನಿರೂಪಿಸಿ, ಸುಭಾಷ್‌ಚಂದ್ರ ವಾಗ್ಲೆ ವಂದಿಸಿದರು.