Advertisement

ಪ್ಲಾಸ್ಟಿಕ್‌- ತ್ಯಾಜ್ಯಗಳಿಂದಾಗಿ ಪರಿಸರ ನಾಶ

12:03 PM Jun 02, 2022 | Team Udayavani |

ಯಲ್ಲಾಪುರ: ಪಟ್ಟಣದ ಕಸದ ವಿಲೇವಾರಿ ಘಟಕ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ. ಘಟಕ ಮಾಡಿದಾಗಿನಿಂದ ಹಿಡಿದು ಇವತ್ತಿನ ವರೆಗೂ ಕಾಮಗಾರಿ ಯಾವುದೇ ಮಾಹಿತಿ ಇಲ್ಲ. ಆವರಣದೊಳಗಿದ್ದ ಭಾರೀ ಪ್ರಮಾಣದಲ್ಲಿ ಬೆಲೆಬಾಳುವ ಮರಗಳನ್ನು ತೆಗೆದು ಉಪಯೋಗಿಸದೇ ಸರಕಾರಕ್ಕೆ ಬರುವ ಆದಾಯಕ್ಕೆ ಕತ್ತರಿ ಹಾಕಲಾಗಿದೆ. ಅಷ್ಟೇ ಅಲ್ಲದೆ ಕಸಗಳಿಗೆ ಬೆಂಕಿ ಹಾಕುವ ಮೂಲಕ ಒಳಗಿದ್ದ ನೂರಾರು ಮರಗಳ ಮಾರಣ ಹೋಮ ಮಾಡಲಾಗಿದೆ. ಹೀಗೆ ಒಣಗಿಸಿ ಬಿದ್ದ ಮರಗಳಿಗೆ ಬೆಂಕಿಯಿರಿಸಿ ಬೂದಿ ಮಾಡಿ ಮರದ ಬುಡಚಿಯ ಲವಲೇಶವೂ ಇಲ್ಲದಂತೆ ಮಾಡಲಾಗಿದೆ. ಇಷ್ಟಕ್ಕೂ ಅರಣ್ಯ ಇಲಾಖೆ ಈ ಬಗ್ಗೆ ಯಾಕೆ ಕ್ರಮ ವಹಿಸಿಲ್ಲ ಎಂಬುದು ಸಾರ್ವಜನಿಕರ ಕಳಕಳಿಯ ಪ್ರಶ್ನೆಯಾಗಿದೆ. ಕಸ ವಿಲೇವಾರಿ ಘಟಕಕ್ಕೆ ಸರಿಯಾದ ಗೇಟ್‌ ಇಲ್ಲ. ಗ್ರಾಮೀಣ ಭಾಗದ ದನಕರುಗಳು ಒಳಹೋಗಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ತಿಂದು ರೋಗಕ್ಕೆ ತುತ್ತಾಗುತ್ತಿವೆ.

Advertisement

ಕಸವಿಲೇವಾರಿ ಘಟಕ ನಿರ್ಮಾಣ ಮಾಡುವಾಗ ಅನೇಕ ನಿಬಂಧನೆ ಹಾಕಿದ್ದರೂ ಅದನ್ನೂ ಸಂಪೂರ್ಣ ಗಾಳಿಗೆ ತೂರಲಾಗಿದೆ ಎಂದು ಆನಗೋಡ ಗ್ರಾಪಂ ಸದಸ್ಯರು ದೂರಿದ್ದಾರೆ.

ಕಸಕ್ಕೆ ಬೆಂಕಿ ಹಾಕದೆ ಜೈವಿಕ ಗೊಬ್ಬರ ಮಾಡಬೇಕು ಎಂಬ ನಿಯಮವಿದೆ. ವೈಜ್ಞಾನಿಕವಾಗಿ ಸಂಸ್ಕರಿಸಿ ಆದಾಯ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿತ್ತು. ಅದನ್ನು ಬಿಟ್ಟು ಬೆಂಕಿ ಹಾಕಿ, ಇರುವ ಮರವನ್ನು ಸುಟ್ಟು ನಾಶ ಮಾಡುತ್ತಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಹಿಂದೆ ಮಾನವಹಕ್ಕು ಆಯೋಗಕ್ಕೆ ಸಾರ್ವಜನಿಕರು ದೂರಿದಾಗ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸೂಚಿಸಿ ಹೋಗಿದ್ದರು. ಆದರೆ ಅದಲ್ಲೆವನ್ನು ಪಪಂ ಅಧಿಕಾರಿಗಳು ಮರೆತಂತಿದೆ. ಒಂದಷ್ಟು ಕಾಮಗಾರಿ ನಡೆದರೂ ಯಾವುದೇ ನಾಮಫಲಕವಿಲ್ಲ. ಘಟಕಕ್ಕೆ ಬೇಕಾಬಿಟ್ಟಿ ಸರಕಾರದ ಹಣ ಹಾಕಲಾಗಿದ್ದು ಹಣದ ಸದುಪಯೋಗವಾಗಿಲ್ಲ ಎಂಬ ದೂರು ಕೇಳಿಬಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next