ಬೆಂಗಳೂರು: ಪರಿಸರ ಹಾನಿಗೆ ಸಂಬಂಧಿಸಿದ ದಾವೆಗಳ ವಿಚಾರಣೆ ನಡೆಸುವುದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ವ್ಯಾಪ್ತಿಗೆ ಮಾತ್ರವೇ ಸೇರಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಕಲಬುರಗಿ ಜಿಲ್ಲೆಯಲ್ಲಿರುವ ಶ್ರೀ ಸಿಮೆಂಟ್ ಉತ್ಪಾದನಾ ಕಂಪನಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಪರಿಸರ ನಿರಾಕ್ಷೇಪಣಾ ಪತ್ರ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು
ಇತ್ಯರ್ಥಪಡಿಸಿರುವ ಹೈಕೋರ್ಟ್ ಈ ತೀರ್ಪು ನೀಡಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಾಯ್ದೆಯನ್ವಯ ಪರಿಸರ ಹಾನಿ, ಪರಿಹಾರ, ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಗಳಿಗೆ ಆಕ್ಷೇಪ,ಯೋಜನೆಗಳ ಅಭಿವೃದಿಟಛಿಗೆ ನಿರ್ದೇಶನ ಕೋರುವುದು ಸೇರಿ ಇನ್ನಿತರ ದಾವೆಗಳನ್ನು ವಿಚಾರಣೆ ನಡೆಸುವ ಅಧಿಕಾರ ಹಸಿರು ನ್ಯಾಯಾಧಿಕರಣಕ್ಕೆ ಮಾತ್ರವೇ ಇದೆ. ಇದು ಹೈಕೋರ್ಟ್ ವ್ಯಾಪ್ತಿಗೆ ಸೇರಿದ್ದಲ್ಲ. ಅಲ್ಲದೆ, ಯಾವುದೇ ನಿರ್ದಿಷ್ಟ ಕಂಪನಿಯ ಕಾರ್ಯ ಚಟುವಟಿಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ದಾವೆಗಳನ್ನು ಕಾಯ್ದೆಯ ಕಲಂ 2ರ ಅನ್ವಯ ಹಸಿರು ನ್ಯಾಯಪೀಠವೇ ನಡೆಸಲಿದೆ ಎಂದು ತೀರ್ಪಿನಲ್ಲಿ ಹೇಳಿದೆ.
ಶ್ರೀ ಸಿಮೆಂಟ್ ಕಾರ್ಯ ಚಟುವಟಿಕೆಯಿಂದ ಕೊಡ್ಲ ಬೆನಕನಹಳ್ಳಿ ಸುತ್ತಮುತ್ತಲ ಪರಿಸರಕ್ಕೆ ಧಕ್ಕೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೂ ಅನಾನುಕೂಲವಾಗುತ್ತಿದೆ. ಅಲ್ಲದೆ, ಸ್ಥಳೀಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಹೀಗಾಗಿ ಶ್ರೀ ಕಂಪನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ 2012ರಲ್ಲಿ ನೀಡಿದ್ದ ಪರಿಸರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ರದ್ದುಪಡಿಸಬೇಕೆಂದು ಕೋರಿ ಮೊಹಮದ್ ಮೊಯಿನುದ್ದೀನ್ ಮನಸಬ್‌ದಾರ್ ಎಂಬುವರು ಪಿಐಎಲ್ ಸಲ್ಲಿಸಿದ್ದರು.