Advertisement

ಪರಿಸರ ಪ್ರಜ್ಞೆ, ಕೆರೆ ಸಂರಕ್ಷಣೆಗೂ ಒತ್ತು

11:41 AM Mar 26, 2017 | Team Udayavani |

ಬೆಂಗಳೂರು: ಉದ್ಯಾನ ನಗರಿಯಲ್ಲಿ ಪರಿಸರ ಸಂರಕ್ಷಣೆಯೊಂದಿಗೆ ಉದ್ಯಾನಗಳ ಅಭಿವೃದ್ಗೆ ಈ ಬಾರಿಯ ಬಜೆಟ್‌ನಲ್ಲಿ ಹಲವು ಕಾರ್ಯಕ್ರಮಗಳನ್ನು ಘೊಷಿಸಲಾಗಿದೆ. ತೋಟಗಾರಿಕೆಗೆ 146.34 ಕೋಟಿ ರೂ. ಅರಣ್ಯೀಕರಣ ಮತ್ತು ಪರಿಸರ ನಿರ್ವಹಣೆಗೆ 37.90 ಕೋಟಿ ರೂ. ಹಾಗೂ ಕೆರೆಗಳ ಅಭಿವೃದ್ಗೆ 89.50 ಕೋಟಿ ರೂ. ಒದಗಿಸಲಾಗಿದೆ. 

Advertisement

ರಸ್ತೆ  ವಿಭಜಕಗಳು, ವೃತ್ತಗಳು, ಬುಲೇ ವಾರ್ಡ್‌ಗಳ ಅಭಿವೃದ್ ಮತ್ತು ಸುಂದರೀಕರಣಕ್ಕಾಗಿ 10 ಕೋಟಿ ರೂ.ಮೀಸಲು. ಹೊಸ ವಲಯದಲ್ಲಿ 210 ಉದ್ಯಾನವನಗಳ ಅಭಿವೃದ್ಗಾಗಿ 40 ಕೋಟಿ ರೂ.ಅನುದಾನ ನಿಗದಿಪಡಿಸಲಾಗಿದೆ.

ಪಾಲಿಕೆ ಉದ್ಯಾನಗಳಲ್ಲಿ ಸಿಟಿ ಕಾಂಪೋಸ್ಟ್‌ ಗೊಬ್ಬರವನ್ನೇ ಬಳಕೆಗೆ ಪ್ರಾಮುಖ್ಯತೆ ನೀಡಲಾಗಿದೆ. ಇದೇ ಪ್ರಥಮ ಬಾರಿಗೆ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಫ‌ಲ ಪುಷ್ಪಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ. ಉದ್ಯಾನಗಳಲ್ಲಿ ಟ್ರೀಪಾರ್ಕ್‌,  ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಅವರ ವರದಿ ಶಿಫಾರಸ್ಸುಗಳನ್ನು ಪರಿಶೀಲಿಸಿ ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

10 ಲಕ್ಷ ಸಸಿ ನೆಡುವ ಸಂಕಲ್ಪ: ನಗರ ವ್ಯಾಪ್ತಿಯಲ್ಲಿ 10 ಲಕ್ಷ ಸಸಿಗಳನ್ನು ನೆಡುವುದು, ಮೊಬೈಲ್‌ ಆ್ಯಪ್‌ ಮೂಲಕ ನಾಗರಿಕರು ಸಸಿಗಳ ಬೇಡಿಕೆ ಸಲ್ಲಿಸಿದರೆ ಸಸಿಗಳನ್ನು ನೆಟ್ಟು ನಾಗರಿಕರ ಸುಪರ್ದಿಗೆ ನೀಡುವುದು, ರಸ್ತೆ ಬದಿ ಗಿಡ ನೆಡುವುದು, ಮರಗಳ ಸಮೀಕೆ ಮತ್ತು ರೋಗಗ್ರಸ್ಥ ಮರಗಳನ್ನು ತೆರವುಗೊಳಿಸುವುದು, ರಸ್ತೆ ಬದಿ ಮರಗಳನ್ನು ರಕ್ಷಿಸಲು ಟ್ರೀ ವಾರ್ಡನ್‌ ನೇಮಕ, ಕೆರೆಗಳ ಬಳಿ ಇರುವ ಪ್ರದೇಶದಲ್ಲಿ 5 ಹೊಸ ನರ್ಸರಿಗಳನ್ನು ಪ್ರಾರಂಭಿಸಲು ಹಣ ನೀಡಲಾಗಿದೆ. 

ಪಾಲಿಕೆಯ ಶಾಲಾ ಕಾಲೇಜುಗಳ ಆವರಣದಲ್ಲಿ ಕೈತೋಟ ಪ್ರಾರಂಭಿಸಲು 1 ಕೋಟಿ ರೂ.ಮೀಸಲಿಡಲಾಗಿದೆ. ಅಪಾಯದಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳ ಸಂಕರÒಣಾ ಘಟಕ ಸ್ಥಾಪಿಸಲು 25 ಲಕ್ಷ ರೂ.ಒದಗಿಲಸಾಗಿದೆ. ರಸ್ತೆ ಬದಿ ಗಿಡಗಳ ರಕ್ಷಿಸಲು 4 ಕೋಟಿ ರೂ.ವೆಚ್ಚದಲ್ಲಿ ಮೆಟಲ್‌ ಟ್ರೀಗಾರ್ಡ್‌ ಅಳವಡಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ ಈ ಎಲ್ಲ ಯೋಜನೆಗೆ 37.90 ಕೋಟಿ ರೂ.ಮೀಸಲಿಡಲಾಗಿದೆ. 

Advertisement

ಕೆರೆಗಳ ಅಭಿವೃದ್: ಪಾಲಿಕೆಯಿಂದ ಅಭಿವೃದ್ ಪಡಿಸಿರುವ 56 ಕೆರೆಗಳ ಪೈಕಿ 18 ಕೆರೆಗಳನ್ನು ನಿರ್ವಹಣೆ ಮಾಡಲು ಸ್ಥಳೀಯ ಸಂಘ ಸಂಸ್ಥೆಗಳಿಂದ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ  ಕೆರೆಗಳ ಅಭಿವೃದ್ಗೆ 50 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಅನುದಾನದಲ್ಲಿ ಕೆರೆಗಳ ಅಭಿವೃದ್ ಜತೆಗೆ ಕೆರೆ ಸೇರುವ ಒಳಚರಂಡಿ ನೀರು, ರಾಸಾಯನಿಕ ತ್ಯಾಜ್ಯ ತಡೆಗೆ ಕೊಳಚೆ ನೀರು ಸಂಸ್ಕರಣಾ ಘಟಕ ಅಳವಡಿಕೆ ಹಾಗೂ ಬಿಡಿಎ ಪಾಲಿಕೆಗೆ ಹಸ್ತಾಂತರಿಸುವ 58 ಕೆರೆಗಳ ಅಭಿವೃದ್ಗೆ 25 ಕೋಟಿ ರೂ.ಮೀಸಲಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next