Advertisement

ನೈಸರ್ಗಿಕ ಸಂಪನ್ಮೂಲ ದುರುಪಯೋಗ ಸಲ್ಲ 

05:04 PM Apr 24, 2018 | |

ಹುಬ್ಬಳ್ಳಿ: ಸ್ವಯಂಘೋಷಿತ ಬುದ್ಧಿಜೀವಿ ಮನುಷ್ಯನ ದುರಾಸೆಯಿಂದ ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗವಾಗುತ್ತಿದೆ ಎಂದು ಅಗಸ್ತ್ಯ ವಿಜ್ಞಾನ ಕೇಂದ್ರದ ಮುಖ್ಯಸ್ಥ ಗುರು ಮದ್ನಳ್ಳಿ ವಿಷಾದ ವ್ಯಕ್ತಪಡಿಸಿದರು. ನಗರದ ಅಗಸ್ತ್ಯ  ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕೋರ್‌ ವಿಜ್ಞಾನ ಚಟುವಟಿಕಾ ಕೇಂದ್ರದಿಂದ ವಿಶ್ವ ಭೂ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಜೀವಿಗಳ ಪೋಷಣೆಗೆ ಅಗತ್ಯವಿರುವುದೆಲ್ಲವೂ ಭೂಗ್ರಹದ ಮೇಲಿದೆ. ಮನುಕುಲ, ಜೀವಸಂಕುಲದ ಒಳಿತಿಗಾಗಿ ಸಂಪನ್ಮೂಲಗಳು ಬಳಕೆಯಾಗಬೇಕಿದೆ. ಭೂಮಿಯನ್ನು ಪ್ರದೂಷಣೆಯಿಂದ ರಕ್ಷಿಸಿ ಸಸಿನೆಟ್ಟು ಮರವಾಗಿ ಬೆಳೆಸಿ ಅಧಿಕ ಭೂ ತಾಪಮಾನದಿಂದ ಭೂಮಿ ರಕ್ಷಿಸುವ ಅನಿವಾರ್ಯತೆ ಇದೆ ಎಂದರು. ಚಿಗುರು ಉಚಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ನಗರದ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸಿ ಪರಿಸರ ಕಾಳಜಿ ಕುರಿತು ಅರಿವು ಮೂಡಿಸಿದರು.

ಸಾರ್ವಜನಿಕರು ಹಾಗೂ ಕಾರ್ಮಿಕರ ಕೈಗೆ ಹಸಿರು ಬ್ಯಾಂಡ್‌ ಕಟ್ಟಿ, ಸಸಿಗಳನ್ನು ವಿತರಿಸಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ವಿಜ್ಞಾನ ಕೇಂದ್ರದಲ್ಲಿ ವಿಶ್ವ ಭೂದಿನ ನಿಮಿತ್ತ ಹಾಗೂ ಪರಿಸರ ರಕ್ಷಣೆ ಕುರಿತು ಪಿಪಿಟಿ ಪ್ರದರ್ಶಿಸಿ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಮಂಜುನಾಥ ಜಾನಣ್ಣವರ, ಫಕ್ಕೀರೇಶ್ವರ ಮಡಿವಾಳರ, ಶಂಕರ ಕುರುಬರ, ಹನುಮಂತಪ್ಪ ಬಿ., ಶಶಿಕಲಾ ಗೌರಿ, ನಿವೇದಿತಾ ಜವಳಿಮಠ, ಸುಜಯ ಭೋಜಕರ, ನಿಂಗನಗೌಡ ಸತ್ತಿಗೌಡ್ರ, ಪುಂಡಲೀಕ ದೇವರಮನಿ, ದೀಪ್ತಿ ಗಾಯಕವಾಡ, ಬಸವರಾಜ ಮುದಗಲ್ಲ, ನಾರಾಯಣ ಚವ್ಹಾಣ, ಹನ್ನಿಫಾ ಗೋಟೇಗಾರ, ಜ್ಯೋತಿ ಕಾಪರೆ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next