Advertisement

ಮುದ್ರಣ, ಡಿಜಿಟಲ್‌ ಮಾಧ್ಯಮ ಮೂಲಕ ಪರಿಸರ ದಿನ

08:15 AM Jun 04, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸೋಂಕು ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜೂ. 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಮುದ್ರಣ ಮತ್ತು ಡಿಜಿ ಟಲ್‌ ಮಾಧ್ಯಮ ಮೂಲಕ ಆಚರಿಸುತ್ತಿದೆ. ಅಂದು ಮಂಡ ಳಿಗೆ  ಪ್ರತ್ಯೇಕವಾದ ಪರಿಸರ ಗೀತೆಯನ್ನು ಬಿಡುಗಡೆ ಮಾಡಲಾ ಗುತ್ತಿದೆ. ಮಂಡಳಿಯಿಂದ ಕೈಪಡಿ, ಭಿತ್ತಿ ಪತ್ರಗಳು, ಕರಪತ್ರ ಹಾಗೂ ಪರಿಸರಕ್ಕೆ ಸಂಬಂಧಿಸಿದ ವರದಿಗಳನ್ನು ಸಚಿವರು ಬಿಡುಗಡೆ ಮಾಡಲಿದ್ದಾರೆ.

Advertisement

ಜೀವವೈವಿಧ್ಯತೆ  ಕುರಿತು ಮಕ್ಕಳಿ ಗಾಗಿ ಸಂವೇದಾತ್ಮಕ ಅಧಿವೇಶನ, ಮಾಲಿನ್ಯ ನಿಯಂತ್ರಣ ಕುರಿತು ವಿಚಾರ ಸಂಕಿರಣಗಳು ನಡೆಯಲಿವೆ. ವಿದ್ಯಾರ್ಥಿ ಗಳಿಗೆ ಮತ್ತು ಸಾರ್ವಜನಿಕರಿಗಾಗಿ ಡಿಜಿಟಲ್‌ ಲೈಬ್ರರಿ ಉದ್ಘಾಟನೆ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಮರು ಬಳಕೆ ವಸ್ತುಗಳ ಕುರಿತು ಅರಿವು  ಮೂಡಿಸಲಾಗುತ್ತಿದ್ದು, ಮರುಬಳಕೆ ವಿಧಾನಗಳನ್ನು ಆನ್‌ ಲೈನ್‌ ಮೂಲಕ ಮಂಡ ಳಿಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬಹುದು.

ಮಂಡಳಿಯ ಕಾರ್ಯಕ್ರಮಗಳಲ್ಲಿ ನೋಂದಾಯಿಸಲು,  ಅಪ್‌ಲೋಡ್‌ ಮಾಡಲು ವೆಬ್‌ಸೈಟ್‌ www.kspcbwed.platifi .com ಭೇಟಿ ನೀಡಬಹುದು. ಅಕಾಶವಾಣಿ ಮೂಲಕ ಜೂ.1 ರಿಂದ 30 ರವರೆಗೆ ಪ್ರತಿ ದಿನ ಒಂದು ಪರಿಸರ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ, ಸಂವಾದ,  ಚರ್ಚಾಗೋಷ್ಠಿ ಗಳನ್ನು ಪ್ರಸಾರ ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next