Advertisement
ನವರಾತ್ರಿಯ ಭಾಗವಾಗಿ ಆಯುಧ ಪೂಜೆಯನ್ನು ರಾಜ್ಯದೆಲ್ಲೆಡೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಅಂದು ವಾಹನಗಳು, ಕಾರ್ಖಾನೆಗಳು, ಕಂಪೆನಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಿಹಿ ಹಂಚಿಕೆ ವೇಳೆ ಭಾರಿ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಬಳಕೆ ಮಾಡಲಾಗುತ್ತದೆ.
Related Articles
ಪ್ಲಾಸ್ಟಿಕ್ ಯಾವುದು?: ಪಾಲಿ ಪ್ರೊಪೈಲಿನ್, ನಾನ್ ಓವನ್ ಪಾಲಿ ಪ್ರೊಪೈಲಿನ್, ಮಲ್ಟಿಲೇಯರ್ ಕೊ ಎಕ್ಸ್‌ಟ್ರೂಡರ್ ಪಾಲಿ ಪ್ರೊಪೈಲಿನ್, ಪಾಲಿ ಇಥಲೀನ್, ಪಾಲಿ ವಿನೈಲ್ಡ್ ಕ್ಲೋರೈಡ್, ಹೈ ಮತ್ತು ಲೋ ಡೆನ್ಸಿಟಿ ಪಾಲಿ ಇಥಲೀನ್, ಥರ್ಮೊಕೋಲ್ ಪಾಲಿ ಸ್ಪಿರಿನ್, ಪಾಲಿ ಅಮೈಡ್ಸ್, ಪಾಲಿ ಟೆರೆಪೈಲೇಟ್, ಪಾಲಿ ಮಿಥೈಲ್ ಮೆಥಕ್ರಿಲೇಟ್, ಪ್ಲಾಸ್ಟಿಕ್ ಮೈಕ್ರೋಬಿಡ್‌ಗಳಿಂದ ತಯಾರದ ವಸ್ತುಗಳು.
Advertisement
ನಿಷೇಧಿಕ ಪ್ಲಾಸ್ಟಿಕ್ ವಸ್ತುಗಳಿವು: ಪ್ಲಾಸ್ಟಿಕ್‌ನಿಂದ ತಯಾರಾದ ಕೈಚೀಲ, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ಸ್ ಫಿಲ್ಮ್ಸ್, ಊಟದ ಟೇಬಲ್‌ಗಳ ಮೇಲೆ ಹಾಸಲು ಬಳಸುವ ಹಾಳೆ, ಥರ್ಮಾಕೋಲ್ ಹಾಗೂ ಮೈಕ್ರೋಬಿಡ್‌ಗಳಿಂದ ತಯಾರಿಸಿದ ವಸ್ತುಗಳು.
ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ಶಿಕ್ಷೆಯೇನು?: ಪ್ಲಾಸ್ಟಿಕ್ ನಿಷೇಧ ಆದೇಶವನ್ನು ಉಲ್ಲಂ ಸಿದವರಿಗೆ ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ 5 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಒಂದೊಮ್ಮೆ ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ ದಿನಕ್ಕೆ 5 ಸಾವಿರಷ್ಟು ದಂಡ ಕಟ್ಟಬೇಕಾಗುತ್ತದೆ. ಇನ್ನು ತಪ್ಪೆಸಗಿ ಶಿಕ್ಷೆಗೆ ಒಳಗಾದವರು ಮತ್ತೆ ತಪ್ಪು ಮಾಡಿದರೆ ಇಷ್ಟೇ ಪ್ರಮಾಣದ ದಂಎ ವಿಧಿಸಬಹುದಾಗಿದ್ದು, ಶಿಕ್ಷೆಯ ಪ್ರಮಾಣವನ್ನು 7 ವರ್ಷದವರೆಗೆ ವಿಸ್ತರಿಸಬಹುದಾಗಿದೆ.
ರಾಜ್ಯದಾದ್ಯಂತ ಪಾಸ್ಟಿಕ್ ಮುಕ್ತ ದಸರಾ ಹಬ್ಬ ಆಚರಣೆಯ ಉದ್ದೇಶದಿಂದ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಹಾಗೂ ನಿಯಮ ಉಲ್ಲಂ ಸಿದವರಿಗೆ ಭಾರಿ ಪ್ರಮಾಣದ ದಂಡ ವಿಧಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. -ಲಕ್ಷ್ಮಣ್, ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ * ವೆಂ. ಸುನೀಲ್‌ಕುಮಾರ್