Advertisement

ಎಂಟ್ರಿ ಕೊಟ್ಟ “ಪುಣ್ಯಾತ್ಗಿತ್ತೀರು’: Watch

03:37 PM Oct 30, 2018 | |

ನಾಲ್ವರು ಬಿಂದಾಸ್ ಹುಡುಗಿಯರೇ ಮುಖ್ಯಭೂಮಿಕೆಯಲ್ಲಿರುವ “ಪುಣ್ಯಾತ್ಗಿತ್ತೀರು’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದೆ. ಅರಾನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿತೇಶ್ ಬಾಲ್ಡಾ ನಿರ್ಮಾಣದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಇಲ್ಲಿಯವರೆಗೂ ಯೂಟ್ಯೂಬ್‌ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆಯುವ ಮೂಲಕ ಟಾಕ್ ಕ್ರಿಯೇಟ್ ಮಾಡುವಲ್ಲಿ ಯಶಸ್ಸು ಕಂಡಿದೆ.

Advertisement

ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಮಮತಾ ರಾವುತ್, ವಿದ್ಯಾ ಮೂಡಿಗೆರೆ, ಐಶ್ವರ್ಯ ಮತ್ತು ವಿದ್ಯಾಶ್ರೀ ಬೋಲ್ಡ್ ಹುಡುಗಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನ ಮೂಲಕವೇ ಸಖತ್ ಹವಾ ಕ್ರಿಯೇಟ್ ಮಾಡಿರೋ ಈ ಚಿತ್ರದ ಫಸ್ಟ್ ಲುಕ್‍ನಲ್ಲಿ ಈ ನಾಲ್ಕು ಹುಡುಗೀರು ಸಖತ್ ಬೋಲ್ಡ್ ಆಗಿ ನಟಿಸಿದ್ದು, ಪಡ್ಡೆ ಹುಡುಗರಿಗೆ ಕಚಗುಳಿ ಇಟ್ಟಿದ್ದಾರೆ. 

ಈ ಚಿತ್ರದಲ್ಲಿ ಕುರಿ ರಂಗ ಮುಂತಾದವರು ಪುಣ್ಯಾತ್‌ಗಿತ್ತೀರಿಗೆ ಸಾಥ್ ನೀಡಿದ್ದಾರೆ. ಇನ್ನುಳಿದಂತೆ ರಾಮಾನುಜಂ ಸಂಗೀತ, ಶರತ್ ಕುಮಾರ್ ಜಿ ಛಾಯಾಗ್ರಹಣ, ಶಿವಶಂಕರ್ ಸಂಕಲನ, ಸಂದೀಪ್ ಕನಬಕಪಯರ ಸಂಭಾಷಣೆ, ತ್ರಿಭುವನ್ ನೃತ್ಯ ನಿರ್ದೇಶನ ಮತ್ತು ಡಾ.ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next