Advertisement
ಕೋವಿಡ್ ಹಾವಳಿ ಇರುವುದರಿಂದ ಸಾಧ್ಯವಾದಷ್ಟು ಭಾಗವಹಿಸುವವರ ಸಂಖ್ಯೆಯನ್ನು ತಗ್ಗಿಸಲಾಗುತ್ತಿದೆ. ಸಾಮಾನ್ಯವಾಗಿ 4ರಿಂದ 5 ದಿನಗಳು ನಡೆಯುತ್ತಿದ್ದ ಪ್ರದರ್ಶನವನ್ನು ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅಲ್ಲದೆ, ಒಂದು ದಿನಕ್ಕೆ ಒಟ್ಟಾರೆ 15 ಸಾವಿರ ಜನ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 3 ಸಾವಿರ ಜನರಿಗೆ ಮಾತ್ರ ವೈಮಾನಿಕ ಪ್ರದರ್ಶನ ವೀಕ್ಷಣಾ ಪ್ರದೇಶ (ಎಡಿವಿಎ)ದಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ ಎಂದರು. ಪ್ರದರ್ಶನದಲ್ಲಿ ನಾಲ್ಕು ತುರ್ತು ವೈದ್ಯಕೀಯ ತಂಡಗಳನ್ನು ರಚಿಸಿದ್ದು, ಇದರಲ್ಲಿ 26 ವೈದ್ಯರು, 46 ವೈದ್ಯಕೀಯ ಸಿಬ್ಬಂದಿ, 5 ಆ್ಯಂಬುಲನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಜತೆಗೆ 14 ಸರ್ಕಾರಿ ಮತ್ತು 48 ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಹೆಲಿಕಾಪ್ಟರ್‌ಗಳನ್ನೂ ಇದಕ್ಕಾಗಿ ಮೀಸಲಿಡಲಾಗಿದೆ ಎಂದರು.
Related Articles
Advertisement
ಡ್ರೋಣ್ ನಿಷಿದ್ಧ
ವಿಮಾನಗಳ ಕಸರತ್ತು ಹಾಗೂ ಪ್ರದರ್ಶನದ ಹಿನ್ನೆಲೆಯಲ್ಲಿ ಜ. 24ರಿಂದ ಫೆ. 5ರವರೆಗೆ ಯಲಹಂಕ ವಾಯುನೆಲೆ ಸುತ್ತಲಿನ ಪ್ರದೇಶದಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ. ಅದೇ ರೀತಿ, ಹದ್ದು ಮತ್ತಿತರ ಪಕ್ಷಿಗಳ ಅಡತಡೆಯನ್ನು ತಪ್ಪಿಸಲು ವಾಯುನೆಲೆ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ ಮಾಂಸ ಮತ್ತು ಮೀನು ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಫೆ. 7ರವರೆಗೂ ಈ ನಿಯಮ ಜಾರಿಯಲ್ಲಿರಲಿದೆ