Advertisement
ಇಂಟರ್‌ನೆಟ್ ಯುಗದಲ್ಲಿ ಟಿ.ವಿ.ಯ ಸ್ಥಾನವನ್ನು ಓಟಿಟಿ (ಓವರ್ ದಿ ಟಾಪ್) ಮನರಂಜನಾ ವ್ಯವಸ್ಥೆ ಕಸಿದುಕೊಳ್ಳುತ್ತಿದೆ. ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಝೀ5 ಇವೆಲ್ಲವೂ ಓಟಿಟಿ ವಿಭಾಗದಡಿ ಬರುತ್ತದೆ. ಅಂಕಿ ಅಂಶಗಳ ಪ್ರಕಾರ ಕಳೆದ ಕೆಲ ವರ್ಷಗಳಲ್ಲಿ ಮನರಂಜನೆಗಾಗಿ ಟಿ.ವಿ.ಯನ್ನು ಅವಲಂಬಿಸಿದ್ದ 15 ಶೇ.ರಷ್ಟು ಮಂದಿ ಇಂಟರ್‌ನೆಟ್‌ನ ಓಟಿಟಿ ಗೆ ಶಿಫಾrಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನ ಭರಾಟೆ ನಡುವೆ, ಭಾರತದ ಓಟಿಟಿ ಸಂಸ್ಥೆ ಹಾಟ್‌ಸ್ಟಾರ್ ಈಗಾಗಲೇ 30 ಕೋಟಿ ಚಂದಾದಾರರನ್ನು ಸಂಪಾದಿಸಿರುವುದು ಮನರಂಜನಾ ಉದ್ಯಮದಲ್ಲಿ ಬದಲಾಗುತ್ತಿರುವ ಶಕೆಗೆ ಹಿಡಿದ ಕೈಗನ್ನಡಿಯಾಗಿದೆ. ಜಗತ್ತಿನ ಹೆಸರಾಂತ ಉದ್ಯಮಿಗಳು, ಸಂಸ್ಥೆಗಳು ಓಟಿಟಿಯಲ್ಲಿ ಹೂಡಿಕೆ ಮಾಡುತ್ತಿರುವುದು ಭವಿಷ್ಯದಲ್ಲಿ ಅದರ ಸ್ಥಾನ ಉಜ್ವಲವಾಗಲಿದೆ ಎನ್ನುವುದರ ಸಂಕೇತ ಎಂದು ತಿಳಿಯಬಹುದು.
1. ನೆಟ್‌ಫ್ಲಿಕ್ಸ್- 800 ರು. ತಿಂಗಳಿಗೆ
2. ಅಮೆಜಾನ್ ಪ್ರೈಮ್- 999 ರು. ವರ್ಷಕ್ಕೆ
3. ಹಾಟ್‌ಸ್ಟಾರ್- 999 ರು. ವರ್ಷಕ್ಕೆ
4. ವೂಟ್- ಉಚಿತ
5. ಝೀ5- 999 ರು. ವರ್ಷಕ್ಕೆ
6. ಇರೋಸ್ ನೌ- 99 ರು. ತಿಂಗಳಿಗೆ