Advertisement

ವರ್ಷಪೂರ್ತಿ ಉದ್ಯೋಗ ಖಾತ್ರಿ ಕೊಡಿ

10:31 AM Jun 04, 2019 | Team Udayavani |

ಲಿಂಗಸುಗೂರು: ಬರ ಕಾಮಗಾರಿ ಆರಂಭಿಸಬೇಕು. ವರ್ಷ ಪೂರ್ತಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಸಿಪಿಐ (ಎಂಎಲ್) ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತಾಳಿದೆ. ತಕ್ಷಣ ಬರ ಕಾಮಗಾರಿ ಪ್ರಾರಂಭಿಸಬೇಕು. ಉದ್ಯೋಗ ಖಾತ್ರಿಯಡಿ ವರ್ಷ ಪೂರ್ತಿ ಕೆಲಸ ನೀಡಿ ಗುಳೆ ಹೋಗುವುದನ್ನು ತಡೆಯಬೇಕು. ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು. ಬರ ಕಾಮಗಾರಿ ಆರಂಭಿಸಲು ಸರ್ಕಾರದ ಮಾರ್ಗಸೂಚಿ ಬಹಿರಂಗಪಡಿಸಬೇಕು. ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ನಿಲೋಗಲ್ ಗ್ರಾಮದಲ್ಲಿ ಕುಡಿಯುವ ನೀರಿನ ಹೆಸರಲ್ಲಿ 13 ಲಕ್ಷ ರೂ. ದುರುಪಯೋಗ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಾದ ಭಾರೀ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣರಾದ ಜಿಪಂ ಯೋಜನಾಧಿಕಾರಿ ಶರಣಬಸವ ಅವರನ್ನು ತಕ್ಷಣವೇ ಹುದ್ದೆಯಿಂದ ತೆರವುಗೊಳಿಸಿ ಅವರ ಅವಧಿಯಲ್ಲಾದ ಭ್ರಷ್ಟಾಚಾರ ತನಿಖೆ ನಡೆಸಬೇಕು. ಮಾನ್ವಿ ಲೊಯೋಲಾ ಕಾಲೇಜಿನ ವಿದ್ಯಾರ್ಥಿ ಕುಮಾರ ನಾಯಕ ಸಾವಿಗೆ ಕಾರಣರಾದ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ನುರಿತ ವೈದ್ಯರ ನೇತೃತ್ವದಲ್ಲಿ ಕುಮಾರ ನಾಯಕ ಶವ ಮರು ಪರೀಕ್ಷೆ ನಡೆಸಬೇಕು ಎಂಬುದು ಸೇರಿ ಇತರೆ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಿಪಿಐಎಂಎಲ್ ಮುಖಂಡ ಆರ್‌.ಮಾನಸಯ್ಯ, ತಾಲೂಕು ಕಾರ್ಯದರ್ಶಿ ಶಾಂತಕುಮಾರ, ಎಂ.ಡಿ.ಅಮೀರ್‌ ಅಲಿ, ಚಿನ್ನಪ್ಪ ಕೊಟ್ರಕಿ, ಜಿ.ಶೇಖರಯ್ಯ, ತಿಪ್ಪರಾಜು ಗೆಜ್ಜಲಗಟ್ಟಾ, ಶಿವಮ್ಮ ವೀರಾಪುರ, ತುಂಗಮ್ಮ, ಶರಣಪ್ಪ ನಿಲೋಗಲ್, ಹುಲಿಗೇಶ ಕೋಠಾ, ದೇವಣ್ಣ ಮಲ್ಲಾಪುರ, ಕೆ.ಆದಪ್ಪ ಗೆಜ್ಜಲಗಟ್ಟಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next