Advertisement

ಪರಿಸರ ಸಂರಕ್ಷಣೆ ಮರೆತರೆ ಅಪಾಯ ಖಚಿತ

05:43 PM Jun 06, 2018 | Team Udayavani |

ಸಿದ್ದಾಪುರ: ಅತಿ ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ವ್ಯವಹಾರಿಕ ಬದುಕನ್ನೆ ಬಹಳಷ್ಟು ನೆಚ್ಚಿಕೊಂಡು ಅದರೊಟ್ಟಿಗೆ ಸಾಗುತ್ತಿದ್ದು ಪರಿಸರದ ಸಂರಕ್ಷಣೆಯ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ  ವಹಿಸಿದ್ದು ಇದೇ ಹಾದಿಯಲ್ಲಿ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಾಪಂ ಸದಸ್ಯ ಗವಿಸಿದ್ಧಪ್ಪ ಊಳೇನೂರು ಕಳವಳ ವ್ಯಕ್ತಪಡಿಸಿದರು.

Advertisement

ಸಮೀಪದ ಉಳೇನೂರು ಗ್ರಾಮದ ಜೈ ಶ್ರೀದೇವಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆದುದರಿಂದ ಇಂದಿನಿಂದಲೇ ಪರಿಸರದ ಸಂರಕ್ಷಣೆಯ ಕಾಳಜಿ ವಹಿಸುವುದು ಅತೀ ಅಗತ್ಯ. ಪರಿಸರದ ಸಂರಕ್ಷಣೆಗಾಗಿ ನಮ್ಮೆಲ್ಲ ಕಾರ್ಯಚಟುವಟಿಕೆಗಳನ್ನು ಬಿಟ್ಟು ಬಿಡಬೇಕೆಂದಿಲ್ಲ. ಅದಕ್ಕಾಗಿ ದೈನಂದಿನ ಜೀವನ ಕ್ರಮದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು, ಕೆಲವೊಂದು ಉಪಕ್ರಮಗಳನ್ನು ಅನುಸರಿಸಿದರೆ ಸಾಕು, ಪರಿಸರದ ಉಳಿವಿಗೆ ಸಹಕಾರಿಯಾಗುತ್ತದೆ. ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಾಗಿ ದೈನಂದಿನ ನಿರಂತರ ಚಟುವಟಿಕೆಯಾಗಬೇಕು ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷ ಎಚ್‌.ಆರ್‌ ಕುಲಕರ್ಣಿ ಮಾತನಾಡಿ ನಮಗೆ ಕೇವಲ ವ್ಯವಹಾರಿಕ ಬದುಕು ಹಾಗೂ ನಮ್ಮ ವೈಯಕ್ತಿಕ ಕೆಲಸಗಳೆ ಬಹಳ ಮುಖ್ಯವಾಗಿದ್ದು ಪ್ರಕೃತಿಯನ್ನು ಉಳಿಸುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಇಂದು ನಮ್ಮ ಸುತ್ತಮುತ್ತಲಿನ ಪರಿಸರ ವಿನಾಶದತ್ತ ಸಾಗುತ್ತಿದೆ. ಇದರಿಂದಾಗಿ ನಮ್ಮ ಬದುಕು ದುಸ್ತರವಾಗುತ್ತದೆ. ಆದ್ದರಿಂದ ಇಂದಿನ ದಿನಗಳಲ್ಲಿ ಪರಿಸರ ಶಿಕ್ಷಣವನ್ನು ಎಲ್ಲ ಮಕ್ಕಳಿಗೆ ಮನದಟ್ಟಾಗುವಂತೆ ಹೇಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಹೇಳಿದರು.

ನಂತರ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಪಾಳೆ ಹುಲುಗಪ್ಪ, ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರು ರಾಜು ಆತ್ಮಕೂರ ಮಾತನಾಡಿದರು. ಈ ಸಂದರ್ಭದಲ್ಲಿ ಜೈ ಶ್ರೀದೇವಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಕಾರ್ಯದರ್ಶಿ ಕನಕರಾಯ ಪಾಟೀಲ, ಊರಿನ ಪ್ರಮುಖರಾದ ಮಲ್ಲೇಗೌಡ, ಲಕ್ಷ್ಮಣ ಕಾರಟಗಿ, ನಾಗೇಶಪ್ಪ, ನಾಗರಾಜ ಮಡಿವಾಳ, ಗ್ರಾಪಂ ಸದಸ್ಯ ದೇವರಾಜ, ಲಕ್ಷ್ಮಣ, ಹೊನ್ನೂರಪ್ಪ ನಾಯಕ, ಜ್ಞಾನಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಮಂಜುಳಾ, ಕನಕರಾಯ ಪಾಟೀಲ, ವಾಸು. ಫಕೀರಪ್ಪ, ಮಾರೆಪ್ಪ, ನಾರಾಯಣಪ್ಪ, ಆನಂದರಡ್ಡಿ, ಶಿಕ್ಷಕರಾದ ಬಸವರಾಜ, ಅತಿಥಿ ಶಿಕ್ಷಕರಾದ ಆಂಜನೇಯ ಸೇರಿದಂತೆ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next