Advertisement
ಬಿರುಗಾಳಿ ರಭಸಕ್ಕೆ 43 ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, 12 ಟ್ರಾನ್ಸಫಾರ್ಮರ್ ಹಾಳಾಗಿವೆ. ಭಾನುವಾರ ಸುರಿದ 25 ಮಿಮೀ ಮಳೆ ಹಾಗೂ ಭಾರೀ ಪ್ರಮಾಣದ ಗಾಳಿ, ಹೋಬಳಿಯಲ್ಲಿ ಭಾರಿ ನಷ್ಟವನ್ನುಂಟು ಮಾಡಿದೆ. ನಾಯಕನಹಟ್ಟಿಯಿಂದ ಡಿಆರ್ ಡಿಒಗೆ ವಿದ್ಯುತ್ ಪೂರೈಕೆ ಮಾಡುವ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ರಾತ್ರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಭಾರೀ ಗಾಳಿಯಿಂದ ಹೆದ್ದಾರಿ ಬದಿಯ ಮರಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದಿವೆ. ಆದ್ದರಿಂದ ವಿದ್ಯುತ್ ಕಂಬಗಳ ಬೀಳುವಿಕೆಯ ಪ್ರಮಾಣ ಹೆಚ್ಚಾಗಿದೆ. ನೇರಲಗುಂಟೆ, ಯರಮಂಚ ಯ್ಯನಹಟ್ಟಿ,ಕಾಟವ್ವನಹಳ್ಳಿ,ದಾಸರಗಿಡ್ಡನಹಳ್ಳಿ ಗ್ರಾಮಗಳಲ್ಲಿ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ನಲಗೇತನಹಟ್ಟಿ ಗ್ರಾಮದಲ್ಲಿ 7, ಬೋಸೇದೇವರಹಟ್ಟಿ ಗ್ರಾಮದಲ್ಲಿ 5 ವಿದ್ಯುತ್ ಕಂಬಗಳು ನೆಲಕ್ಕರುಳಿವೆ. ಕಾಟವ್ವನಹಳ್ಳಿ ಬಳಿಯ ಅನ್ನಪೂರ್ಣೇಶ್ವರಿ ಡಾಬಾದ ಮುಂದಿದ್ದ ಮರಗಳು ಶೆಡ್‌ಗಳ ಮೇಲೆ ಬಿದ್ದಿವೆ. ಹೀಗಾಗಿ ಶೆಡ್‌ಗಳು ಜಖಂಗೊಂಡಿವೆ. ಡಿಆರ್‌ಡಿಒ ಸಮೀಪವಿರುವ ಜೆ.ಆರ್. ರವಿಕುಮಾರ್‌ರವರ ತೋಟದ ಮನೆಯಲ್ಲಿನ ಶೆಡ್‌ಗಳು ಗಾಳಿಗೆ ಸಂಪೂರ್ಣವಾಗಿ ಹಾಳಾಗಿದ್ದು, ಒಳಗಿದ್ದವರು ಗಾಗೊಂಡಿದ್ದಾರೆ. ಅವರಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
Related Articles
Advertisement
ಹೋಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು, ಉರುಳಿರುವುದು ಬೆಸ್ಕಾಂಗೆ ದೊಡ್ಡ ಸಮಸ್ಯೆಯಾಗಿದೆ. ಇಡೀ ರಾತ್ರಿ ಹಾಗೂ ಸೋಮವಾರ ದಿನವಿಡೀ ಕಂಬಗಳನ್ನು ಪುನರ್ ಸ್ಥಾಪಿಸುವ ಕಾರ್ಯ ಭರದಿಂದ ಸಾಗಿತು. ಹೀಗಿದ್ದರೂ ಎರಡು ಗ್ರಾಮಗಳಲ್ಲಿ ಇಡೀ ದಿನ ಹಾಗೂ ರಾತ್ರಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿಲ್ಲ. ಬಿದ್ದಿರುವ ಕಂಬಗಳ ಜಾಗದಲ್ಲಿ ಹೊಸ ಕಂಬಗಳನ್ನು ಹಾಕಲಾಗುತ್ತಿದೆ. 12 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. 3 ವಿದ್ಯುತ್ ಪರಿವರ್ತಕಗಳು ಬೀಸಿದ ಗಾಳಿಯ ರಭಸಕ್ಕೆ ಧರೆಗುರುಳಿವೆ. ಹಾಳಾಗಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸುವ ಕಾರ್ಯ ನಡೆಯಿತು.
43 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಆದ್ಯತೆಯ ಮೇಲೆ ಅವುಗಳನ್ನು ಪುನರ್ ನೀಡಲಾಗಿದೆ ಎಂದು ತಿಳಿಸಿದರು. ಸ್ಥಾಪಿಸಲಾಗುತ್ತಿದೆ. ಇಲಾಖೆಯ ಸಿಬ್ಬಂದಿ ಇಡೀ ದಿನ ಮತ್ತು ರಾತ್ರಿ ಬಿದ್ದಿರುವ ಕಂಬ, ಪರಿವರ್ತಕಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಿಬ್ಬಂದಿಯ ಕೊರತೆಯ ನಡುವೆ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸುವ ಕಾರ್ಯ ನಡೆದಿದೆ. ಎರಡು ಗ್ರಾಮಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. -ಎನ್.ಬಿ. ಬೋರಣ್ಣ, ಸೆಕ್ಷನ್ ಆಫೀಸರ್, ನಾಯಕನಹಟ್ಟಿ