Advertisement

ಜ್ಞಾನವ್ಯಾಪಿ ಕೇಸ್‌ನಲ್ಲಿ ಹೊಸ ತಿರುವು: ವೀಡಿಯೋ ಸೋರಿಕೆ: ಸಿಬಿಐ ತನಿಖೆಗೆ ಆಗ್ರಹ

12:41 AM Jun 01, 2022 | Team Udayavani |

ಲಕ್ನೋ: ಉತ್ತರ ಪ್ರದೇಶದಯಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚೆಗೆ ನಡೆದ ವೀಡಿಯೋ ಸಮೀಕ್ಷೆಯ ವೀಡಿಯೋಗಳು ವಿವಿಧ ಟಿ.ವಿ. ಮಾಧ್ಯಮಗಳಲ್ಲಿ ಬಿತ್ತರ ವಾಗಿರುವುದರ ಬಗ್ಗೆ ಜ್ಞಾನವಾಪಿ ಮಸೀದಿ ಪ್ರಕರಣದ ಅರ್ಜಿದಾರರಲ್ಲೊಬ್ಬರಾದ ರಾಖೀ ಸಿಂಗ್‌ ಆಕ್ಷೇಪಿಸಿದ್ದಾರೆ.

Advertisement

ವಾರಾ ಣಸಿ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿರುವ ಅವರು, ವೀಡಿಯೋ ಸರ್ವೇಯ ದೃಶ್ಯಾವಳಿಗಳು ಸೋರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಸೀದಿಯೊಳಗೆ ನ್ಯಾಯಾಲಯ ನೇಮಿಸಿದ್ದ ಕೋರ್ಟ್‌ ಕಮೀಷನ್‌ ವತಿಯಿಂದ ನಡೆಸ ಲಾಗಿದ್ದ ಸರ್ವೇಯ ವೀಡಿಯೋ ದೃಶ್ಯಗಳನ್ನು ಮಸೀದಿಯೊಳಗೆ ಪೂಜೆಗೆ ಅವಕಾಶ ಮಾಡಿಕೊಡ ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಐವರು ಮಹಿಳೆಯರ ಪೈಕಿ ನಾಲ್ವರಿಗೆ ನ್ಯಾಯಾಲಯವು ನೀಡಿತ್ತು. ಆ ವೀಡಿಯೋವನ್ನು ಸಾರ್ವ ಜನಿಕರಿಗೆ ತೋರಿ ಸುವು ದಿಲ್ಲ ಎಂದು ಅರ್ಜಿ ದಾರರು ಪತ್ರ ಬರೆದು ಕೊಟ್ಟ ಅನಂತರ ಮುಚ್ಚಿದ ಲಕೋಟೆ ಯಲ್ಲಿ ವೀಡಿಯೋದ ಸಿಡಿಗಳನ್ನು ಕೊಡಲಾಗಿತ್ತು.

ಮುಚ್ಚಿದ ಲಕೋಟೆಗಳು ಹಾಗೆಯೇ ಇವೆ!:ವೀಡಿಯೋ ಸೋರಿಕೆ ಬಗ್ಗೆ ಅರ್ಜಿದಾರ ಪರ ವಕೀಲರೊಬ್ಬರು ಹೇಳಿಕೆ ನೀಡಿ ನ್ಯಾಯಾಲಯದಿಂದ ಕೊಡಲಾಗಿದ್ದ ಮುಚ್ಚಿದ ಲಕೋಟೆಗಳನ್ನು ಇನ್ನೂ ತೆರೆದಿಲ್ಲ. ವೀಡಿಯೋಗಳು ಲೀಕ್‌ ಆಗಿದ್ದು ಹೇಗೆ ಎಂಬುದೇ ಅರ್ಥವಾಗಿಲ್ಲ ಎಂದಿದ್ದಾರೆ.

ಅದು ಶಿವಲಿಂಗವೇ, ಕಾರಂಜಿಯ ಭಾಗವಲ್ಲ: ಇದೇ ವೇಳೆ ವೀಡಿಯೋ ಸಮೀಕ್ಷೆಯಲ್ಲಿ ಭಾಗ ವಹಿ ಸಿದ್ದ ವೀಡಿ ಯೋಗ್ರಾಫ‌ರ್‌ ಗಣೇಶ್‌ ಶರ್ಮಾ “ರಿಪಬ್ಲಿಕ್‌ ವಾಹಿನಿ’ಗೆ ಸಂದರ್ಶನ ಕೊಟ್ಟಿದ್ದು, “ಅಲ್ಲಿ ಪತ್ತೆಯಾಗಿದ್ದು ಕಾರಂಜಿಯಲ್ಲ, ಶಿವಲಿಂಗವೇ’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next