Advertisement

ಜೀವನವನ್ನು ಅನುಭವಿಸಿ

10:13 PM Dec 22, 2019 | mahesh |

ಸುಖ ದಃಖದ ಬಗ್ಗೆ ಕೃಷ್ಣ ಹೇಳುವ ಮಾತು-ಸುಖ ಎಲ್ಲರ ಬಳಿಯೂ ಇದೆ. ಆದರೆ ಎಲ್ಲರೂ ಇನ್ನೊಬ್ಬರ ಸಂತೋಷದಿಂದ ದುಃಖಿಗಳಾಗಿದ್ದಾರೆ ಅಷ್ಟೆ.

Advertisement

ಐಸ್‌ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಎಲ್ಲರೂ ಅದನ್ನು ಸವಿದವರೇ. ಅಂತೆಯೇ ಐಸ್‌ ಕ್ರೀಂ ಅನ್ನು ಹಾಗೇ ಹಿಡಿದುಕೊಂಡರೆ ಬೇಗ ಕರಗಿ ಹೋಗಿಬಿಡುತ್ತದೆ. ಅದನ್ನು ಸವಿಯಬೇಕಾದರೆ ತಕ್ಷಣವೇ ತಿಂದು ಬಿಡಬೇಕು. ಇಲ್ಲವಾದರೆ ಅದು ವ್ಯರ್ಥವಾಗಿ ಬಿಡುತ್ತದೆ. ಇದು ಸರಳವಾದ ನಿಯಮ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.

ಜೀವನವೆಂಬ ಐಸ್‌ ಕ್ರೀಂ ಅನ್ನು ಕರಗುವ ಮುನ್ನವೇ ಸವಿಯಬೇಕು. ಇಲ್ಲವಾದರೆ ಅದರ ನಷ್ಟವನ್ನು ಕೂಡ ಅನುಭವಿಸುವುದು ನಾವೇ. ಜೀವನದಲ್ಲಿ ಬರುವ ಎಲ್ಲ ಪಾತ್ರಗಳು ಕೆಲವೊಂದಿಷ್ಟು ದಿನಗಳು ಮಾತ್ರ ಇರುತ್ತವೆ. ಹಾಗಾಗಿ ನಾವು ಆ ದಿನಗಳಲ್ಲೇ ಆ ಪಾತ್ರಗಳನ್ನು ಅರಿಯಬೇಕು. ಅವರೊಂದಿಗೆ ಖುಷಿ, ಸಂತೋಷ, ನೋವು-ನಲಿವುಗಳನ್ನು ಹಂಚಿಕೊಂಡಾಗ ಜೀವನದ ಬಹುತೇಕ ಸುಖವನ್ನು ನಾವು ಅನುಭವಿಸುತ್ತೇವೆ. ಇದು ಜೀವನವನ್ನು ಅರಿಯಲು ಸಹಾಯಕವಾಗುತ್ತದೆ. ಇನ್ನು ಕೆಲವರೂ ಬಿಟ್ಟು ಹೋದರೆ ನಮಗೆ ಅವರ ಮೌಲ್ಯವನ್ನು ತಿಳಿಯುವುದಿಲ್ಲ. ಆದರೆ ಕೆಲವು ದಿನಗಳ ಅನಂತರ ಅವರ ಇರುವಿಕೆಯ ಅರ್ಥವಾಗುತ್ತದೆ. ಆದರೆ ಏನು ಮಾಡುವುದು ಆ ಐಸ್‌ ಕ್ರೀಂ ಕರಗಿ ಹೋಗಿರುತ್ತದೆ. ಆದರೆ ನಾವು ಸವಿದಿರುವುದಿಲ್ಲ. ಇದರಿಂದ ಹೊಡೆತವೂ ಕೂಡ ನಮಗೆ. ಹಾಗಾಗಿ ನಮ್ಮೊಂದಿಗೆ ಇರುವ ಎಲ್ಲರನ್ನೂ ಪ್ರೀತಿಯಿಂದಲೇ ಕಂಡಾಗ ಮಾತ್ರ ಜೀವನವೆಂಬ ಐಸ್‌ ಕ್ರೀಂ ಸವಿಯಲು ಸಾಧ್ಯ.

ಜೀವನದಲ್ಲಿ ಎಲ್ಲರೊಂದಿಗೆ ನಾವೇ ಹೊಂದಾಣಿಕೆಯಾಗಬೇಕೆ ವಿನಾಃ ಬೇರಯವರು ನಮಗೆ ಹೊಂದಾಣಿಕೆಯಾಗಬೇಕು ಎಂದು ಭಾವಿಸುವುದು ತಪ್ಪು. ಈ ಮನೋಭಾವನೆಯನ್ನು ಜೀವನದಲ್ಲಿ ನಾವು ಅಳವಡಿಸಿಕೊಳ್ಳುವುದು ಸೂಕ್ತ. ಹಾಗಾಗಿ ಹೊಂದಾಣಿಕೆ ಎಂಬುವುದು ಕೂಡ ಜೀವನದಲ್ಲಿ ಮುಖ್ಯ. ಐಸ್‌ಕ್ರೀಂ ಕೂಡ ತುಂಬಾ ಹೊಂದಾಣಿಕೆಯ ವಸ್ತು. ಇದು ಚಳಿಗಾಲ, ಬೇಸಗೆಕಾಲ ಮತ್ತು ಮಳೆಗಾಲ ಯಾವ ಕಾಲವಾದರೂ ಕೂಡ ಐಸ್‌ ಕ್ರೀಂ ಪ್ರಿಯರು ಸವಿಯುತ್ತಾರೆ. ಅದರಂತೆ ನಾವು ಯಾವಾಗಲೂ ಒಂದೇ ಮನಃಸ್ಥಿತಿಯಲ್ಲಿರಬೇಕು. ಆಗ ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ. ನಮ್ಮೊಂದಿಗೆ ಬೆರೆಯುತ್ತಾರೆ. ಇದು ಜೀವನ ಭಾಗದ ಮುಖ್ಯ ಸೂತ್ರವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next