Advertisement

ಮಲಗಿಕೊಂಡು,ಹಾಯಾಗಿ ಕೆಲಸ ಮಾಡೋದೇ ಖುಷಿ!

10:10 AM Sep 08, 2019 | Team Udayavani |

ಇತ್ತೀಚೆಗೆ ಉದ್ಯೋಗ ಕ್ಷೇತ್ರಗಳಲ್ಲಿ ಕಂಪನಿಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತಿವೆ. ಕಂಪನಿಗಳಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಸಾಮಾನ್ಯ. ಆದರೆ ಈಗ ಮಲಗಿಕೊಂಡು ಕೆಲಸ ಮಾಡುವ ಹೊಸ ಟ್ರೆಂಡ್‌ ಬರುತ್ತಿದೆ.

Advertisement

ಮಲಗಿಕೊಂಡು ಕೆಲಸ ಮಾಡುವುದು ಮತ್ತು ಕೆಲಸದ ಅವಧಿಯಲ್ಲಿ 15 ನಿಮಿಷಗಳನ್ನು ನಿದ್ದೆಗಾಗಿ ನೀಡುವುದು ಇದರ ವಿಶೇಷ. 15 ನಿಮಿಷ ನಿದ್ದೆ ಮಾಡಿದ ವ್ಯಕ್ತಿಯೊಬ್ಬ ಉತ್ತಮ ಕೆಲಸ ಮಾಡಲು ಸಾಧ್ಯ ಎನ್ನುವ ಉದ್ದೇಶದಿಂದ ಈ ಹೊಸ ಟ್ರೆಂಡ್‌ ಆರಂಭವಾಗಿದೆ.

ಆಸ್ಕ್ ಫಾರ್‌ ಟಾಸ್ಕ್ ಪ್ರಾರಂಭ ಮಾಡಿದ ಈ ಹೊಸ ಟ್ರೆಂಡ್‌ ಅಮೇರಿಕಾದಲ್ಲಿ ಹೆಚ್ಚು ಮಾನ್ಯತೆ ಪಡೆಯಿತು. ಇಲ್ಲಿನ ಉದ್ಯೋಗಿಗಳಿಗೆ 15 ನಿಮಿಷ ನಿದ್ದೆ ಮಾಡಲು ಸಮಯ ನೀಡಲಾಯಿತು. ಇದರಿಂದ ಉದ್ಯೋಗಿಯೊಬ್ಬ ಸರಿಯಾಗಿ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಿದೆ ಎನ್ನುವ ಉದ್ದೇಶದಿಂದ ಈ ಹೊಸ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಹೆಚ್ಚು ಪ್ರಚಾರ ದೊರಕಿತು.

29% ಜನರು ಕೆಲಸದ ಅವಧಿಯಲ್ಲಿ ನಿದ್ದೆಯ ಮಂಪರಿನಲ್ಲಿರುತ್ತಾರೆ. ಕಡಿಮೆ ನಿದ್ದೆಯಿಂದಾಗಿ ಯನೈಟೆಡ್‌ ಸ್ಟೇಟ್ಸ್‌ಗಳಲ್ಲಿ ವರ್ಷದಲ್ಲಿ 63 ಬಿಲಿಯನ್‌ ಕಂಪನಿಯಲ್ಲಿ ಉತ್ಪಾದನೆ ಕಡಿಮೆಯಾಗುತ್ತಿದೆ. ಆದರೆ ಕೇವಲ 20 ನಿಮಿಷಗಳ ನಿದ್ದೆ ಆತನನ್ನು ದಿನವಿಡಿ ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡುತ್ತದೆ.

ನಾಸಾದ ಪ್ರಕಾಋ 20 ನಿಮಿಷಗಳ ನಿದ್ದೆ ಉದ್ಯೋಗಿಯ ತ್ಸಾಹವನ್ನು ವೃದ್ಧಿಸುತ್ತದೆ ಮತ್ತು 54% ನಷ್ಟು ಅಲರ್ಟ್‌ನೆಸ್‌ ಜಾಸ್ತಿ ಮಾಡುತ್ತದೆ.

Advertisement

ನ್ಯಾಪ್‌ ಟೈಮ್‌ನ ಪ್ರಯೋಜನಗಳು
1.ಇದು ಉದ್ಯೋಗಿಯನ್ನು ಕ್ರಿಯಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ.
2.ಉದ್ಯೋಗಿಯ ಆರೋಗ್ಯಕ್ಕೂ ಇದು ಸಹಾಯಕಾರಿ.
3.ದಿನವಿಡೀ ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡುತ್ತದೆ.
ಕೇವಲ 20 ನಿಮಿಷಗಳ ನಿದ್ದೆ ಹೆಚ್ಚು ಕೆಲಸ ಮಾಡುವಂತೆ ರೂಪಿಸುತ್ತದೆ.

ರಿಯಲ್‌ ರೆಸ್ಟ್‌ ; ರಿಯಲ್‌ ರಿಸಲ್ಟ್
ಕೆಲಸದ ನಡುವೆ ಒಂದಷ್ಟು ನಿಮಿಷ ವಿಶ್ರಾಂತಿ ಪಡೆದರೆ ಒಳ್ಳೆಯ ಫ‌ಲಿತಾಂಶ ಪಡೆಯಲು ಸಾಧ್ಯ.
ಕೆಲಸದ ಅವಧಿಯಲ್ಲಿ ನಿದ್ದೆ ಎಲ್ಲ ಕೆಲಸಗಳಲ್ಲೂ ಸೂಕ್ತವಾಗುವುದಿಲ್ಲ. ಹೆಚ್ಚು ನಿದ್ದೆಗೆಟ್ಟು ಮಾಡುವಂತಹ, ನೈಟ್‌ಶಿಫ್ಟ್ ಗಳಿರುವಂತಹ ಕಂಪನಿಗಳಲ್ಲಿ ಇದರ ಅವಶ್ಯಕತೆಯಿದೆ.

– ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next