Advertisement

ಕೋವಿಡ್ ಜಾಗೃತಿ ಮೂಡಿಸಲು ಕೇರಳ ಪೊಲೀಸರ ವಿನೂತ ಪ್ರಯತ್ನ : ಹಾಡಿಗೆ ಹೆಜ್ಜೆ ಹಾಕಿ ಆರಕ್ಷಕರು!

09:22 AM Apr 30, 2021 | Team Udayavani |

ಕೇರಳ : ಎಲ್ಲೆಲ್ಲೂ ಕೋವಿಡ್ ಮಹಾಮಾರಿ ತನ್ನ ಭಯದ ಜ್ವಾಲೆಯನ್ನು ಹಬ್ಬಿಸುತ್ತಿದೆ. ಸರ್ಕಾರಗಳು ಕೂಡ ಸೋಂಕು ಹರಡುವುದನ್ನು ಕಡಿಮೆ ಮಾಡಲು ತುಂಬಾ ಶ್ರಮ ಪಡುತ್ತಿವೆ. ಇದರ ನಡುವೆ ಪೊಲೀಸ್ ಅಧಿಕಾರಿಗಳು ಕೂಡ ಜನರಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

Advertisement

ಪೊಲೀಸರು ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಕೇರಳದ ರಾಜ್ಯ ಪೊಲೀಸ್ ಮಾಧ್ಯಮ ಕೇಂದ್ರವು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ತಮಿಳಿನ ಎಂಜಾಯ್ ಎಂಜಾಮಿ ಹಾಡಿಗೆ ಜಾಗೃತಿ ಮೂಡಿಸುವ ಸಾಲುಗಳನ್ನು ಬಳಿಸಿ ನೃತ್ಯ ಮಾಡಿದ್ದಾರೆ. 9 ಜನ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಧರಿಸಿದ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋಕ್ಕೆ ಕ್ಯಾಪ್ಶನ್ ನೀಡಲಾಗಿದ್ದು, ಎಲ್ಲರೂ ಸೇರಿ ಕೋವಿಡ್ ವಿರುದ್ಧ ಹೋರಾಟ ಮಾಡೋಣ. ನಿಮ್ಮ ಜೊತೆ ಕೇರಳ ಪೊಲೀಸ್ ಇದೆ ಎಂದು ಬರೆಯಲಾಗಿದೆ. ಈ ವಿಡಿಯೋವು 3.5 ಲಕ್ಷ ವೀಕ್ಷಣೆಯಾಗಿದ್ದು, 14,000 ಬಾರಿ ಶೇರ್ ಆಗಿದೆ. ಇನ್ನು 36,000 ಲೈಕ್ ಪಡೆದುಕೊಂಡು ಜನರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next