Advertisement

ಕ್ರಿಸ್‌ಮಸ್‌ ಸಂಭ್ರಮಕ್ಕೆ ಸವಿರುಚಿ

01:14 PM Dec 22, 2017 | |

ಕ್ರಿಸ್‌ಮಸ್‌ ಮತ್ತು ಹೊಸವರ್ಷ ಇನ್ನೇನು ಹತ್ತಿರ ಬರುತ್ತಿದೆ. ಕ್ರಿಸ್‌ಮಸ್‌ ಹಬ್ಬ ಎಂದರೆ ರುಚಿರುಚಿಯಾದ ತಿಂಡಿಗಳನ್ನು ಮಾಡಿ ರುಚಿ ನೋಡುವ ಸಮಯ. ನಿಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಕಾಲ ಕಳೆಯುವ ಸುಂದರ ಕ್ಷಣ. ಈ ಅದ್ಭುತ ಸಮಯವನ್ನು ಬಗೆ ಬಗೆಯ ತಿನಿಸುಗಳೊಂದಿಗೆ ಇಮ್ಮಡಿಗೊಳಿಸಿ.

Advertisement

ಈ ಸಂಭ್ರಮಕ್ಕೆ ಕೇಕ್‌, ಪುಡ್ಡಿಂಗ್‌, ಸ್ನಾಕ್ಸ್‌ಗಳಿಲ್ಲದಿದ್ದರೆ ಏನು ಮಜಾ ಅಲ್ವಾ? ಹೀಗಾಗಿ, ಇಲ್ಲಿ ಕೆಲವೊಂದು ತಿನಿಸುಗಳನ್ನು ಪರಿಚಯಿಸಿದ್ದೇವೆ. ಇವು ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವುದಷ್ಟೇ ಅಲ್ಲದೆ, ಕ್ರಿಸ್‌ಮಸ್‌ ಪಾರ್ಟಿಗೆ ವಿಶೇಷ ಕಳೆ ತಂದು ಕೊಡುತ್ತದೆ. ಇವುಗಳ ಮೇಲೆ ಒಮ್ಮೆ ಕಣ್ಣಾಡಿಸಿ. 

ಬಟರ್‌ ಸ್ಪಾಂಜ್‌ ವೆನಿಲ್ಲಾ ಕೇಕ್‌
ಬೇಕಾಗುವ ಸಾಮಗ್ರಿ:
2 ಕಪ್‌ ಅಕ್ಕಿ ಹಿಟ್ಟು, 2-3 ಕಪ್‌ ಹಾಲು, 1 ಕಪ್‌ ಬೆಣ್ಣೆ, 8-10 ಮೊಟ್ಟೆ , 1 ಚಮಚ ಅಡುಗೆ ಸೋಡಾ, 2 ಕಪ್‌ ಸಕ್ಕರೆ, 2 ಚಮಚ ವೆನಿಲ್ಲಾ ಎಸೆನ್ಸ್‌, ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಗೊಡಂಬಿ.

ಮಾಡುವ ವಿಧಾನ: ಮೊದಲು ಓವೆನನ್ನು 350ಎಫ್ನಷ್ಟು ಬಿಸಿ ಮಾಡಬೇಕು, ಬೆಣ್ಣೆ ಮತ್ತು ಸಕ್ಕರೆ ಬೆರೆಸಿ ಮೃದುವಾಗುವವರೆಗೂ ಮಿಕ್ಸಿಯಲ್ಲಿ ತಿರುವಿ. ಈಗ ಮೊಟ್ಟೆ ಬೆರೆಸಿ ಚೆನ್ನಾಗಿ ಮತ್ತೆ ಮಿಕ್ಸಿಯಲ್ಲಿ ತಿರುಗಿಸಬೇಕು. ಈ ಮಿಶ್ರಣಕ್ಕೆ ಅಕ್ಕಿಹಿಟ್ಟು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನಾದಬೇಕು, ಈಗ ಬಾದಾಮಿ, ಗೊಡಂಬಿ, ವೆನಿಲ್ಲಾ ಎಸೆನ್ಸ್‌ ಹಾಕಿ ತುಪ್ಪಸವರಿದ ಬಟ್ಟಲಿಗೆ ಹಾಕಿ ಅದನ್ನು 40-45 ನಿಮಿಷ ಓವೆನ್ನಲ್ಲಿಡಬೇಕು. ಬಟರ್‌ ಸ್ಪಾಂಜ್‌ ವೆನಿಲ್ಲಾ ಕೇಕ್‌ ತಿನ್ನಲು ಸಿದ್ಧವಾಗಿರುತ್ತದೆ.

ಕ್ರಿಸ್ಮಸ್‌ ಪುಡ್ಡಿಂಗ್‌ 
ಬೇಕಾಗುವ ಸಾಮಗ್ರಿ:
ರವಾ – 2 ಚಮಚ, ಮೊಟ್ಟೆ -3, ಹುರಿದ ಗೊಡಂಬಿ, ಪುಡಿ ಮಾಡಿದ ಸಕ್ಕರೆ- 12 ಚಮಚ, ತೆಂಗಿನ ತುರಿ- ಒಂದೂವರೆ ಬಟ್ಟಲು, ಬಾದಾಮಿ, ಉಪ್ಪು ಚಿಟಿಕೆ, ಜಾಯಿಕಾಯಿ ಪುಡಿ ಚುಟುಕಿ, ತುಪ್ಪ2 ಚಮಚ.

Advertisement

ತಯಾರಿಸುವ ವಿಧಾನ: ತುಪ್ಪವನ್ನು ಕಾಯಿಸಿ ಅದರಲ್ಲಿ ರವೆಯನ್ನು ಕಂದು ಬಣ್ಣ ಬರುವವರೆಗೆ ಕುರಿದು ತೆಗೆದಿಡಿ. ಮೊಟ್ಟೆಗಳ ಹಳದಿ ಹಾಗೂ ಬಿಳಿ ಭಾಗಗಳನ್ನು ಬೇರ್ಪಡಿಸಿ. ಒಂದು ಪಾತ್ರೆಯಲ್ಲಿ ಸಕ್ಕರೆ, ಚೆನ್ನಾಗಿ ಮಿಶ್ರಣ ಮಾಡಿದ ಮೊಟ್ಟೆಯ ಹಳದಿ ಭಾಗ ಬೆಣ್ಣೆ, ತುರಿದ ಕಾಯಿ, ಜಾಯಿಕಾಯಿ ಪುಡಿ ಮತ್ತು ಉಪ್ಪನ್ನು ಬೆರೆಸಿ, ಈಗ ಹುರಿದಿಟ್ಟ ರವೆಗೆ ಚಿನ್ನಾಗಿ ಮಿಶ್ರಣ ಮಾಡಿದ ಮೊಟ್ಟೆಯ ಬಿಳಿ ಭಾಗವನ್ನು ಬೆರೆಸಿ, ನಂತರ ಮೊದಲೇ ತಯಾರಿಸಿದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಕಿ, ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹಾಕಿ ಬೆರೆಸಿ. ಅದನ್ನು ಒಂದು ಪಾತ್ರೆಗೆ ಸುರಿದುಕೊಳ್ಳಿ, ಈ ಮಿಶ್ರಣವನ್ನು 45 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಕ್ರಿಸ್ಮಸ್‌ ಪುಡ್ಡಿಂಗ್‌ ಸವಿಯಲು ಸಿದ್ಧ. 

ಪ್ಲಮ್‌ ಕೇಕ್‌
ಬೇಕಾಗುವ ಸಾಮಗ್ರಿ:
ಮೈದಾ- 1 ಕಪ್‌. ವಾಲ್ನಟ್ಸ್‌ ಕತ್ತರಿಸಿದ್ದು, ಬೇಕಿಂಗ್‌ ಪೌಡರ್‌, ರೈಸಿನ್ಸ್‌- 3 ಟೀಬಲ್‌ ಸ್ಪೂನ್‌, ಬ್ರೌನ್‌ ಶುಗರ್‌ 1ಕಪ್‌, ವೆನಿಲ್ಲಾ ಎಸೆನ್ಸ್‌, ಮೊಟ್ಟೆಗಳು- 3, ಬೆಣ್ಣೆ, ಲಿಂಬೆ ತಿರುಳಿನ ಹುಡಿ, ಚೆರಿ.

ತಯಾರಿಸುವ ವಿಧಾನ: ಓವನ್‌ನ್ನು 160 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿ, ಮೈದಾ ಹಾಗೂ ಬೇಕಿಂಗ್‌ ಪೌಡರನ್ನು ಜರಡಿ ಹಿಡಿಯಿರಿ, ಇದೀಗ ವಾಲ್‌ನಟ್‌, ರೈಸಿನ್ಸ್‌ಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ ಮತ್ತು ಬ್ರೌನ್‌ ಶುಗರ್‌ ಅನ್ನು ಚೆನ್ನಾಗಿ ಕಲಸಿಕೊಳ್ಳಿ, ವೆನಿಲ್ಲಾ ಎಸೆನ್ಸ್‌, ಮೊಟ್ಟೆಗಳು ಮತ್ತು ಲಿಂಬೆ ತಿರುಳಿನ ಹುಡಿಯನ್ನು ಸೇರಿಸಿ, ಜರಡಿಯಾಡಿಸಿದ ಹುಡಿಯನ್ನು ನಿಧಾನವಾಗಿ ಹಾಕಿ ಮತ್ತು ಮಿಶ್ರ ಮಾಡಿ, ಬಟರ್‌ನೊಂದಿಗೆ ಕೇಕ್‌ ಟಿನ್‌ ಅನ್ನು ಗ್ರೀಸ್‌ ಮಾಡಿ ನಂತರ ಮಿಶ್ರಣವನ್ನು ಅದಕ್ಕೆ ಹಾಕಿ, 15-20 ನಿಮಿಷಗಳ ಕಾಲ ಬೇಯಿಸಿ ನಂತರ ಆರಲು ಬಿಡಿ, ಪ್ಲಮ್‌ ಕೇಕ್‌ ಸವಿಯಲು ರೆಡಿ. ಕೇಕನ್ನು ತುಂಡಯಗಳಾಗಿ ಮಾಡಿ ಮತ್ತು ಕೇಕ್ನ ಮೇಲೆ ತುಂಡರಿಸಿದ ಚೆರಿಗಳನ್ನು ಇಟ್ಟು ಅಲಂಕರಿಸಿ.

ಕಾರ್ನ್ ಫ್ಲೀಟ್ಟರ್
ಬೇಕಾಗುವ ಸಾಮಗ್ರಿ:
ಸ್ಟೀಟ್‌ ಕಾರ್ನ್- 300 ಗ್ರಾಂ, 1 ಕಪ್‌ ಫ್ರೆಶ್‌ ಬ್ರೆಡ್‌ ಕ್ರಮ್ಸ್‌, 1ಕಪ್‌ ಕಾರ್ನ್ಸ್ಟಾರ್ಚ್‌, 1/4 ಕಪ್‌ ಸಿøàಂಗ್‌ ಆನಿಯನ್‌ ಚಿಕ್ಕದಾಗಿ ತುಂಡರಿಸಿದ್ದು, ರೆಡ್‌ ಚಿಲ್ಲಿ ಫ್ಲೇಕ್ಸ್‌, ಕಾಳು ಮೆಣಸಿನ ಪುಡಿ, ಉಪ್ಪು$, ಎಣ್ಣೆ ಕರಿಯಲು.

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಒಂದು ಪಾತ್ರೆಯಲ್ಲಿ ಸ್ಟೀಟ್‌ ಕಾರ್ನ್, ಬ್ರೆಡ್‌ ಕ್ರಮ್ಸ್‌, ಸ್ಪ್ರಿಂಗ್‌ ಆನಿಯನ್‌, ರೆಡ್‌ ಚಿಲ್ಲಿ ಫ್ಲೇಕ್ಸ್‌, ಕಾಳುಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಕಾರ್ನ್ ಸ್ಟಾರ್ಚ್‌ ಹಾಕಿ ಪುನಃ ಮಿಕ್ಸ್‌ ಮಾಡಿ, ಮಿಶ್ರಣವನ್ನು ಬಾಲ್‌ ಅಥವಾ ಪಕೋಡಾ ರೂಪದಲ್ಲಿ ತಯಾರಿಸಿ ಕಾದ ಎಣ್ಣೆಯಲ್ಲಿ ಗೋಲ್ಡನ್‌ ಬ್ರೌನ್‌ ಆಗುವ ತನಕ ಕಾಯಿಸಿ ಬಿಸಿ ಬಿಸಿ ಸಾಸ್‌ನೊಂದಿಗೆ ಸವಿಯಲು ಕೊಡಿ.
ಕೇಕನ್ನು ತುಂಡುಗಳಾಗಿ ಮಾಡಿ ಮತ್ತು ಕೇಕ್‌ನ ಮೇಲೆ ತುಂಡರಿಸಿದ ಚೆರಿಗಳನ್ನು ಇಟ್ಟು ಅಲಂಕರಿಸಿ.

ಮಶ್ರೂಮ್‌ ಕಟ್ಲೆಟ್‌
ಬೇಕಾಗುವ ಸಾಮಗ್ರಿ:
18ರಿಂದ 20 ಮಶ್ರೂಮ್‌- ಚಿಕ್ಕದಾಗಿ ತುಂಡರಿಸಿದ್ದು, 1 ಟೀ ಚಮಚ ಎಣ್ಣೆ ಶಾಲೋ ಫ್ರೆ„ ಮಾಡಲು, 1 ಈರುಳ್ಳಿ, 1 ಟೊಮೆಟೋ ಸಣ್ಣ ಸಣ್ಣದಾಗಿ ತುಂಡರಿಸಿದ್ದು, ಉಪ್ಪು, ಗರಮ್‌ ಮಸಾಲಾ, ಅರಸಿನ, ಜೀರಿಗೆ, ಕೊತ್ತಂಬರಿ ಪೌಡರ್‌, ಖಾರದ ಪುಡಿ, ಆಲೂಗಡ್ಡೆ ಬೇಯಿಸಿ ಕಿವುಚಿದ್ದು, 1 ಕಪ್‌ ಅಕ್ಕಿ ಹಿಟ್ಟು. 

ತಯಾರಿಸುವ ವಿಧಾನ: ಒಂದು ನಾನ್‌ಸ್ಟಿಕ್‌ ಪಾನ್‌ಗೆ ಒಂದು ಚಮಚ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿ ನಂತರ ಮಶ್ರೂಮ್‌ ಹಾಕಿ 2 ನಿಮಿಷ ತನಕ ಕಾಯಿಸಿ ತದನಂತರ ಟೊಮೊಟೋ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ 5ರಿಂದ 7 ನಿಮಿಷ ಬೇಯಲು ಬಿಡಿ, ಇದಕ್ಕೆ ಉಪ್ಪು, ಗರಂಮಸಾಲಾ, ಅರಸಿನ, ಜೀರಿಗೆ, ಕೊತ್ತಂಬರಿ ಪೌಡರ್‌, ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಸರಿಯಾಗಿ ಬೇಯಲು ಬಿಡಿ, ಬೆಂದ ನಂತರ ಉರಿಯಿಂದ ತೆಗೆದು ತಣ್ಣಗಾಗಲು ಬಿಡಿ. ಈ ಮಿಶ್ರಣಕ್ಕೆ ಕಿವುಚಿದ ಆಲೂಲುಗಡ್ಡೆ ಹಾಕಿ ಮಿಕ್ಸ್‌ ಮಾಡಿ. ಇದನ್ನು ಟಿಕ್ಕೀಸ್‌ ರೂಪದಲ್ಲಿ ಶೇಪ್‌ ಕೊಟ್ಟು ಅಕ್ಕಿಹಿಟ್ಟಿನಲ್ಲಿ ಅದ್ದಿ ಪಕ್ಕಕ್ಕಿಡಿ. ನಂತರ ಒಂದು ಪಾನ್‌ಗೆ ಸ್ವಲ್ಪ$ಎಣ್ಣೆ ಹಾಕಿ ಅದ್ದಿ ಇಟ್ಟ ಟಿಕ್ಕೀಸ್‌ಗಳನ್ನು ಎರಡು ಬದಿಯಲ್ಲಿ ಕೆಂಪು ಬಣ್ಣ ಬರುವವರೆಗೆ ಶಾಲೋ ಪ್ರೈ ಮಾಡಿ ಸಾಸ್‌ನೊಂದಿಗೆ ಸರ್ವ್‌ ಮಾಡಿ.

ಸುಲಭಾ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next